ಹಾರ್ದಿಕ್ ವಿರುದ್ಧ ತೊಡೆ ತಟ್ಟಿದ ಎನ್‌ಆರ್‌ಐ ಪಟೇಲರಿಂದ ಬಿಜೆಪಿಗೆ ಬೆಂಬಲ
ಅಹಮದಾಬಾದ್, ನವೆಂಬರ್ 25: ಹಾರ್ದಿಕ್ ಪಟೇಲ್ ವಿರುದ್ಧ ಅನಿವಾಸಿ ಭಾರತೀಯ ಪಟೇಲರು ತೊಡೆ ತಟ್ಟಿದ್ದಾರೆ. ಹಾರ್ದಿಕ್ ಗೆ ವಿರುದ್ಧವಾಗಿ ಬಿಜೆಪಿ ಪರ ಪ್ರಚಾರಕ್ಕೆ ಎನ್‌ಆರ್‌ಐ ಪಟೇಲರು ಇಳಿದಿದ್ದಾರೆ.
150ಕ್ಕೂ ಹೆಚ್ಚು ವಿದೇಶಗಳಲ್ಲಿರುವ ಎನ್‌ಆರ್‌ಐಗಳು ತಮ್ಮ ರಾಜ್ಯ ಗುಜರಾತ್ ಗೆ ವಾಪಸ್ ಬಂದು ನರೇಂದ್ರ ಮೋದಿ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.
"ನಾವು ಬಿಜೆಪಿಯ ಗೆಳೆಯರು. ನರೇಂದ್ರ ಮೋದಿ ಪ್ರಧಾನಿ ಆದ ಬಳಿಕ ಜಗತ್ತು ನಮ್ಮತ್ತ ನೋಡುವ ದೃಷ್ಟಿ ಹೇಗೆ ಬದಲಾಯಿತು ಎಂಬುದನ್ನು ಜನರಿಗೆ ತಿಳಿಸಲು ನಾವು ಬಂದಿದ್ದೇವೆ," ಎಂದು ಅಮೆರಿಕಾದ ಉದ್ಯಮಿ ಬಾಬು ಭಾಯ್ ಲಾಲ್ ಪಟೇಲ್ ಹೇಳಿದ್ದಾರೆ.

ಗುಜರಾತ್ ನ ಶೇಕಡಾ 14ರಷ್ಟಿರುವ ಪಟೇಲರು ಕಳೆದ ಎರಡು ದಶಕಗಳಿಂದ ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಇದೀಗ ಎನ್‌ಆರ್‌ಐ ಪಟೇಲರನ್ನೂ ಬಿಜೆಪಿ ತನ್ನತ್ತ ಸೆಳೆದಿದೆ. ಆಸ್ಟ್ರೇಲಿಯಾ ಮತ್ತು ಅಮೆರಿಕಾದಲ್ಲಿರುವ ಗುಜರಾತಿಗರು ವಾರಕ್ಕೂ ಮೊದಲೇ ರಾಜ್ಯಕ್ಕೆ ಬಂದು ಬಿಜೆಪಿ ಪರ ಪ್ರಚಾರ ನಡೆಸುತ್ತಿದ್ದಾರೆ.
ಈ ಎನ್‌ಆರ್‌ಐ ಪಟೇಲರು ಹಾರ್ದಿಕ್ ಪಟೇಲ್ ರನ್ನು ಗಂಭೀರವಾಗಿ ಪರಿಗಣಿಸಿಲ್ಲ. "ಹಾರ್ದಿಕ್ ಪಟೇಲ್ ಗೆ ಸಿದ್ಧಾಂತವೇ ಇಲ್ಲ. ಹಿನ್ನಲೆಯೂ ಇಲ್ಲ. ಆತ ಓರ್ವ ಇತಿಹಾಸದ ಜ್ಞಾನವೂ ಇಲ್ಲದ ಯುವಕ. ಆತನನ್ನು ಹೇಗೆ ನಂಬುವುದು?" ಎಂದು ಫ್ಲೋರಿಡಾದಲ್ಲಿ ನೆಲೆಸಿರುವ ವೈದ್ಯ ವಿಪುಲ್ ಪಟೇಲ್ ಹೇಳಿದ್ದಾರೆ.
"ಅವರ ತಂದೆ ಕಾಂಗ್ರೆಸ್ ಕಾರ್ಯಕರ್ತರು. ಹಾರ್ದಿಕ್ ಪಟೇಲ್ ಕಾಂಗ್ರೆಸ್ ಜತೆ ನಂತರ ಎಎಪಿ ಜತೆ ಸಂಪರ್ಕದಲ್ಲಿದ್ದರು. ಈಗ ಅವರದ್ದೇ ಸ್ವಂತ ಪಕ್ಷ 'ಪಾಸ್' ಹೊಂದಿದ್ದಾರೆ," ಎಂಬುದಾಗಿ ಸೂರತ್ ಮೂಲದ ಮತ್ತೋರ್ವ ಎನ್‌ಆರ್‌ಐ ಸುರೇಶ್ ಹೇಳಿದ್ದಾರೆ.
ಇವರಲ್ಲದೆ ಗುಜರಾತಿಗೆ ಬರಲಾಗದ ಎನ್‌ಆರ್‌ಐಗಳ ಸಹಾಯವನ್ನೂ ಬಿಜೆಪಿ ಗಳಿಸಿದೆ. ಈ ಜನರು ವಿದೇಶದಲ್ಲಿದ್ದುಕೊಂಡೇ ಗೂಗಲ್ ಹ್ಯಾಂಗ್ ಔಟ್ಸ್, ಕಾನ್ಫರೆನ್ಸ್ ಮೂಲಕ ಜನರನ್ನು ಸೆಳೆಯುವ ಕೆಲಸದಲ್ಲಿ ನಿರತರಾಗಿದ್ದಾರೆ.
ಗುಜರಾತಿನಲ್ಲಿ ಡಿಸೆಂಬರ್ 9 ಮತ್ತು 14ರಂದು ಚುನಾವಣೆ ನಡೆಯಲಿದ್ದು ಡಿಸೆಂಬರ್ 18ರಂದು ಮತ ಎಣಿಕೆ ನಡೆಯಲಿದೆ.
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral












Click it and Unblock the Notifications