ನಾಳೆ ಮೂರು ಈಶಾನ್ಯ ರಾಜ್ಯಗಳ ಫಲಿತಾಂಶ ಪ್ರಕಟ: ಡೈಲಿಹಂಟ್ ಲೈವ್ ಕವರೇಜ್
ದೇಶದ ಮೂರು ಈಶಾನ್ಯ ರಾಜ್ಯಗಳಾದ ತ್ರಿಪುರಾ, ಮೇಘಾಲಯ ಹಾಗೂ ನಾಗಾಲ್ಯಾಂಡ್ 2023ರ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿದಿದ್ದ ಎಲ್ಲ ಪಕ್ಷಗಳ ಅಭ್ಯರ್ಥಿಗಳ ಹಣೆಬರಹ ನಾಳೆ ಗುರುವಾರ ಮಾರ್ಚ್ 2 ರಂದು ಗೊತ್ತಾಗಲಿದೆ.
ಬೆಂಗಳೂರು, ಮಾರ್ಚ್ 01: ದೇಶದ ಮೂರು ಈಶಾನ್ಯ ರಾಜ್ಯಗಳಾದ ತ್ರಿಪುರಾ, ಮೇಘಾಲಯ ಹಾಗೂ ನಾಗಾಲ್ಯಾಂಡ್ 2023ರ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿದಿದ್ದ ಎಲ್ಲ ಪಕ್ಷಗಳ ಅಭ್ಯರ್ಥಿಗಳ ಹಣೆಬರಹ ನಾಳೆ ಗುರುವಾರ ಮಾರ್ಚ್ 2 ರಂದು ಗೊತ್ತಾಗಲಿದೆ.
ತ್ರಿಪುರಾದ ಒಟ್ಟು 60 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಬಿಜೆಪಿ-ಐಪಿಎಫ್‌ಟಿ ಮೈತ್ರಿಯು 2018ರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂತು. ಈ ಮೂಲಕ ಎದುರಿದ್ದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಪಕ್ಷವನ್ನು ಸೋಲಿಸಿತು. ಬಿಜೆಪಿ 35 ಸ್ಥಾನ ಹಾಗೂ ಐಪಿಎಫ್‌ಟಿ ಒಟ್ಟು ಎಂಟು ಸ್ಥಾನ ಗಳಿಸಿದವು. ಆದರೆ ಬಿಜೆಪಿಯು ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಕಾರಣ ವಿಪಕ್ಷಗಳಿಗೆ ಹೆಚ್ಚಿನ ವೋಟುಗಳು ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.

2018 ರಲ್ಲಿ ಎಡ ಮತ್ತು ಕಾಂಗ್ರೆಸ್ ಪಕ್ಷಗಳು ಜೊತೆಗೆ ಸೇರಿಕೊಂಡು ಚುನಾವಣೆಗಳಲ್ಲಿ ಧುಮುಕಿದ್ದವು. ತ್ರಿಪುರಾದಲ್ಲಿ ಬುಡಕಟ್ಟು ಮತ ನಿರ್ಣಾಯಕ ಎನ್ನಬಹುದು. ಕೆಲವು ಬೇಡಿಕೆ ಈಡೇರಿಕೆಯ ಸವಾಲು ಬಿಜೆಪಿ, ಕಾಂಗ್ರೆಸ್ ಮತ್ತು ಎಡಪಕ್ಷಗಳ ಮುಂದಿದೆ.
ನಾಗಾಲ್ಯಾಂಡ್ ರಾಜ್ಯದ ಸಿಎಂ ನೇಫಿಯು ರಿಯೊ ಆಡಳಿತವು ಇಲ್ಲಿ ಪ್ರಬಲವಾಗಿದೆ. ನಾಗಾ ಪೀಪಲ್ಸ್ ಫ್ರಂಟ್ (NPF) 2018ರ ವೇಳೆ 27 ಸ್ಥಾನಗಳಲ್ಲಿ ಜಯ ಸಾಧಿಸಿದ ಏಕೈಕ ಬೃಹತ್ ಪಕ್ಷವಾಗಿ ಹೊರ ಹೊಮ್ಮಿತ್ತು. ಆದರೆ ಬಿಜೆಪಿಯು ಎನ್‌ಡಿಪಿಪಿ, ಜನತಾ ದಳ (ಯುನೈಟೆಡ್) ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿತು. 2021 ರಲ್ಲಿ ಎನ್‌ಪಿಎಫ್ ಕೂಡ ಆಡಳಿತ ಮೈತ್ರಿಕೂಟಕ್ಕೆ ಸೇರಿದರು. 2022 ವರ್ಷದಲ್ಲಿ ಅದರ 21 ಶಾಸಕರು ಎನ್‌ಡಿಪಿಪಿಗೆ ಸೇರಿದರು, ಈ ಸಲ ಒಟ್ಟು 60 ಸ್ಥಾನಗಳಲ್ಲಿ 20ರಲ್ಲಿ ಬಿಜೆಪಿ ಸ್ಪರ್ಧಿಸುತ್ತಿದ್ದರೆ, 40 ಕ್ಷೇತ್ರಗಳಲ್ಲಿ ಎನ್‌ಡಿಪಿಪಿ ಅಭ್ಯರ್ಥಿಗಳಿಗೆ ಭಾರಿ ಬೆಂಬಲ ಇದೆ ಎಂದು ತಿಳಿದು ಬಂದಿದೆ.

ರಾಜ್ಯದಲ್ಲಿ 2018ರ ವಿಧಾನಸಭಾ ಚುನಾವಣೆ ವೇಳೆ ನ್ಯಾಷನಲ್ ಪೀಪಲ್ಸ್ ಪಾರ್ಟಿ (NPP) 19 ಸ್ಥಾನಗಳನ್ನು ಗೆಲ್ಲಿತು. ಕಾಂಗ್ರೆಸ್ 21 ಸ್ಥಾನ ಬಾಚಿಕೊಂಡರೆ, ಬಿಜೆಪಿ ಕೇವಲ ಎರಡು ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತು. ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿ (UDP)ಯು 06 ಕ್ಷೇತ್ರದಲ್ಲಿ ಗೆದ್ದು ಬೀಗಿತು. ಅಷ್ಟೇ ಅಲ್ಲದೇ ಎನ್‌ಪಿಪಿ ನೇತೃತ್ವದ ಮೇಘಾಲಯ ಡೆಮಾಕ್ರಟಿಕ್ ಅಲಯನ್ಸ್ (MDA) ಬಿಜೆಪಿ, ಯುಡಿಪಿ ಮತ್ತು ಇತರ ಪ್ರಾದೇಶಿಕ ಪಕ್ಷಗಳ ಜೊತೆ ಸೇರಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯಿತು. ಈ ಬಾರಿ ಬಿಜೆಪಿ ಮತ್ತು ಎನ್‌ಪಿಪಿ ಮೈತ್ರಿ ಆಗಿಲ್ಲ ಅವುಗಳು ಏಕಾಂಗಿಯಾಗಿ ಕಣಕ್ಕಿದಿವೆ. ಅವುಗಳ ಫಲಿತಾಂಶವನ್ನು ಕಾದು ನೋಡಬೇಕಿದೆ.
ಮೇಘಾಲಯದ ಸದ್ಯದ ಮುಖ್ಯಮಂತ್ರಿ ಎನ್‌ಪಿಪಿ ಮುಖ್ಯಸ್ಥರಾದ ಕಾನ್ರಾಡ್ ಸಂಗ್ಮಾ ಮತ್ತು ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಅವರು ಮುಖಾಮುಖಿಯಾಗಿದ್ದಾರೆ. ಹೀಗಾಗಿ ಗರೋ ಹಿಲ್ಸ್ ಕ್ಷೇತ್ರ ಪ್ರತಿಷ್ಠೆ ಕಣವಾಗಿದೆ.
ಡೈಲಿಹಂಟ್ (Dailyhunt) ಲೈವ್ ಕವರೇಜ್
ಡೈಲಿಹಂಟ್ ಸುದ್ದಿ ಸಂಸ್ಥೆ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆ 2023 ಲೈವ್ ಆಗಿ ಕವರ್ ಮಾಡುತ್ತಿದೆ. ಚುನಾವಣೆ, ಗೆಲುವು- ಸೋಲು ಕೇವಲ ಮತಗಳ ಲೆಕ್ಕಾಚಾರ ಮಾತ್ರವೇ ಅಲ್ಲ. ಅದು ನಾಗರಿಕನ ಜೀವನದ ಮೇಲೆ ಪ್ರಭಾವ ಬೀರುವ ಅಂಶಗಳ ಮೇಲೆ ಸಂಸ್ಥೆ ಗಮನಹರಿಸಿ ವಿಶ್ಲೇಷಿಸಿ ಜನರ ಮುಂದಿಡುತ್ತಿದೆ.
ಫಲಿತಾಂಶಗಳ ಅಂಕಿ-ಸಂಖ್ಯೆಗಳು ಹಂತ ಹಂತವಾಗಿ ಹೊರ ಬೀಳುತ್ತಿದ್ದಂತೆ ಎಲ್ಲ ಆಯಾಮದಲ್ಲೂ ವಿಶ್ಲೇಷಿಸಿ ಬಿತ್ತರಿಸುತ್ತದೆ. ಫಲಿತಾಂಶದ ಡೇಟಾ, ಗೆಲುವು-ಸೋಲಿನ ಕುರಿತು ರಾಜಕೀಯ ತಜ್ಞರು ಸೇರದಂತೆ ಶ್ರೀಸಾಮಾನ್ಯನಿಗೂ ಅರ್ಥವಾಗುವಂತೆ ತಿಳಿಸಲಾಗುತ್ತದೆ.
Dailyhunt ನಲ್ಲಿ ಚುನಾವಣಾ ಸಮೀಕ್ಷೆಗಳ ಅರ್ಥಪೂರ್ಣ ಸಮಗ್ರ ವರದಿ ಪ್ರಸಾರವಾಗಲಿದೆ. ದೇಶಾದ್ಯಂತ ಜನರು ಇಲ್ಲಿನ ಲೈವ್ ಕವರೇಟ್, ಫಲಿತಾಂಗಳು, ಹಿನ್ನಡೆ-ಮುನ್ನಡೆ, ಸ್ಥಾನಗಳ ವರ್ಣಮಯ ಕೋಷ್ಟಕ ರೂಪದಲ್ಲಿ ಸಂಖ್ಯೆಗಳನ್ನು ನೋಡಬಹುದು. ಇಲ್ಲಿ ಕಳೆದ ಬಾರಿಯ ಫಲಿತಾಂಶ, ರಾಜ್ಯವಾರು ಮತ್ತು ಕ್ಷೇತ್ರವಾರು ಸೀಟುಗಳಲ್ಲಿ ಆಗುವ ಬದಲಾವಣೆ ಹಾಗೂ ಇನ್ನಿತರ ಎಲ್ಲ ಅಪ್ಡೇಟ್‌ಗಳನ್ನು ತಿಳಿಯಬಹುದು. ಅಲ್ಲದೇ ಚುನಾವಣೆ/ಫಲಿತಾಂಶ ಸಂಬಂಧಿತ Twitter ಲೈವ್ ವೀಡಿಯೊಗಳಲ್ಲಿ ಟ್ರೆಂಡ್‌ಗಳು, ವೈರಲ್ ಮೀಮ್‌ಗಳು, ಟ್ರೆಂಡಿಂಗ್ ಸುದ್ದಿ/ ಪ್ರತಿಕ್ರಿಯೆಗಳನ್ನು ಇಲ್ಲಿ ನೋಡಬಹುದು.












Click it and Unblock the Notifications