ಸಬ್ಸಿಡಿ ರಹಿತ ಎಲ್ ಪಿಜಿ ಸಿಲಿಂಡರ್ ಬೆಲೆ ಏರಿಕೆ
ನವದೆಹಲಿ, ಜೂನ್.01: ಸರ್ಕಾರಿ ಸ್ವಾಮ್ಯ ಮೂರು ಇಂಧನ ಸಂಸ್ಥೆಗಳು ಸಬ್ಸಿಡಿ ರಹಿತ ಎಲ್ ಪಿಜಿ ಹಾಗೂ ಜೆಟ್ ಇಂಧನ ದರವನ್ನು ಸೋಮವಾರದಿಂದಲೇ ಜಾರಿಗೆ ಬರುವಂತೆ ಏರಿಕೆ ಮಾಡಿವೆ.
ಸರ್ಕಾರಿ ಸ್ವಾಮ್ಯ ಭಾರತ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆಗಳು ಜೆಟ್ ಇಂಧನ (ಎಟಿಎಫ್)ವನ್ನು ಶೇ 7.6ರಷ್ಟು ಹಾಗೂ ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ 10.5 ರು ಪ್ರತಿ ಸಿಲಿಂಡರ್ ಗೆ ಏರಿಕೆ ಮಾಡಿವೆ. [ಜೂ.1 ರಿಂದ ಯಾವುದು ತುಟ್ಟಿ? ಯಾವುದು ಅಗ್ಗ?]

ನೂತನ ದರ ಪಟ್ಟಿ ಪ್ರಕಾರ ನವದೆಹಲಿಯಲ್ಲಿ ಅನಿಲ ಸಿಲಿಂಡರ್ (14.2 ಕೆಜಿ) ದರ 616 ರು.ಗಳಿಂದ 626.50 ರು.ಗಳಿಗೆ ಏರಿಕೆಯಾಗಲಿದೆ. ಮೇ 1ರಂದು ಪ್ರತಿ ಸಿಲಿಂಡರ್ ಮೇಲೆ 5 ರು.ಏರಿಕೆ ಮಾಡಲಾಗಿತ್ತು, ಒಂದು ತಿಂಗಳ ಅವಧಿಯಲ್ಲೇ ಮತ್ತೆ ಈ ಏರಿಕೆ ಮಾಡಲಾಗಿದೆ. ರಾಜ್ಯದಿಂದ ರಾಜ್ಯಕ್ಕೆ ಸ್ಥಳೀಯ ತೆರಿಗೆ ಅನುಸಾರವಾಗಿ ದರದಲ್ಲಿ ಹೆಚ್ಚು ಕಡಿಮೆಯಾಗುತ್ತದೆ.[ನಂದಿನಿ ಹಾಲಿನ ದರ 4 ರೂ. ಏರಿಕೆ?]
ವಿಮಾನದ ಆದಾಯದಲ್ಲಿ ಶೇ.40ರಷ್ಟು ಮೊತ್ತವನ್ನು ಇಂಧನಕ್ಕೆ ವ್ಯಯಿಸಲಾಗುತ್ತದೆ. ದೇಶಿ ವಿಮಾನಯಾನದಲ್ಲಿ ದರ ಸಮರ ಮುಂದುವರೆದಿರುವ ಸಂದರ್ಭದಲ್ಲೇ ಎಟಿಎಫ್ ದರ ಏರಿಕೆಯಾಗಿದೆ. ಪ್ರತಿ ಕಿಲೋ ದರದಲ್ಲಿ ಶೇ.7.5ರಷ್ಟು 53,353 ರು ನಂತೆಏರಿಕೆಯಾಗಿದೆ. ಇದರಿಂದ, ವಿಮಾನ ಪ್ರಯಾಣ ದರ ಏರಿಕೆಯಾಗುವ ನಿರೀಕ್ಷೆಯಿದೆ. ಅದರೆ, ಸದ್ಯಕ್ಕೆ ಬೆಲೆ ಏರಿಕೆ ಮಾಡುತ್ತಿಲ್ಲ ಎಂದು ವಿಮಾನ ಸಂಸ್ಥೆಗಳು ಹೇಳಿವೆ.












Click it and Unblock the Notifications