'ನರೇಂದ್ರ ಮೋದಿಯಲ್ಲಿ ನನಗ್ಯಾವುದೇ ನ್ಯೂನತೆ ಕಂಡಿಲ್ಲ'

ನವದೆಹಲಿ, ಡಿ. 5: ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಬಿಜೆಪಿಯ ಪ್ರಧಾನಿ ಅಭ್ಯರ್ಥಿಯನ್ನಾಗಿ ನೇಮಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರು 'ನರೇಂದ್ರ ಮೋದಿ ಅವರ ವ್ಯಕ್ತಿತ್ವದಲ್ಲಿ ನನಗೆ ಯಾವುದೇ ದೋಷ ಕಂಡಿಲ್ಲ' ಎಂದು ಹೇಳಿದ್ದಾರೆ.

'ಅವರಲ್ಲಿ (ಮೋದಿ) ಯಾವುದೇ ನ್ಯೂನತೆ ಕಂಡುಬಂದಿಲ್ಲ; ಬರೀ ಶಕ್ತಿಯಷ್ಟೇ ಕಾಣುತ್ತಿದೆ' ಎಂದು ಖಾಸಗಿ ಟಿವಿ ಜತೆ ಮಾತನಾಡಿರುವ ರಾಜನಾಥ್ ಸಿಂಗ್ ಅವರು ಮೋದಿ ಬಗ್ಗೆ, ಮುಂದಿನ ಚುನಾವಣೆಗಳ ಬಗ್ಗೆ ಇನ್ನೂ ಏನೆಲ್ಲಾ ಹೇಳಿದ್ದಾರೆಂದರೆ

no-weakness-in-bjp-pm-candidate-modi-bjp-president-rajnath-singh

* ಭಾರತದ ಭವಿಷ್ಯದ ಪ್ರಧಾನಿ ಗುಜರಾತಿನಲ್ಲಿದ್ದಾರೆ.
* ನರೇಂದ್ರ ಮೋದಿ ಅವರ ಶಕ್ತಿಯೆಂದರೆ ಅವರು ಸ್ಪಷ್ಟ ದೃಷ್ಟಿಕೋನ/ ನಿಶ್ಚಿತಾಭಿಪ್ರಾಯದ ಮನೋಭಾವ ಹೊಂದಿರುವುದು. ಗುಜರಾತ್ ರಾಜ್ಯದಲ್ಲಿ ಮಾದರಿಯ ಅಭಿವೃದ್ಧಿ ತಂದಿದ್ದಾರೆ.
* ಬಿಜೆಪಿ ಪಕ್ಷದಲ್ಲಿ ರಾಜ್ ಆಡಳಿತವಿಲ್ಲ. ನಮ್ಮದು ಪ್ರಜಾತಾಂತ್ರಿಕ ಪಕ್ಷ. ನಮ್ಮಲ್ಲಿ ಯಾವುದೇ ರಹಸ್ಯಗಳು ಇಲ್ಲ.
* ಮೋದಿಯನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದರಿಂದ ಪಕ್ಷದ ಹಿರಿಯರಾದ ಎಲ್ ಕೆ ಅಡ್ವಾಣಿ ಅವರಿಗೇನೂ ಬೇಸರವಾಗಿಲ್ಲ.
* ಬಿಜೆಪಿ ಪಕ್ಷವನ್ನು ಕಾಂಗ್ರೆಸ್ಸಿಗಿಂತ ಬೃಹದಾಕಾರವಾಗಿ ನಿರ್ಮಾಣ ಮಾಡುವಲ್ಲಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್ ಕೆ ಅಡ್ವಾಣಿ ಅವರ ಕೊಡುಗೆ ಅಪಾರವಾಗಿದೆ. ಅವರಿಂದಾಗಿಯೇ ಪಕ್ಷ ಈ ಮಟ್ಟಕ್ಕೆ ಬೆಳೆದು ನಿಂತಿದೆ.

* ಗಾಜಿಯಾಬಾದಿನಿಂದ ನಾನೇ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವೆ; ನನ್ನ ಮಗ ಅಲ್ಲ.
* ಬಿಡುವಿಲ್ಲದ ನಿರಂತರ ರಾಜಕೀಯ ಭಾಷಣಗಳನ್ನು ಮಾಡುವಾಗ ಒಂದೆರಡು ತಪ್ಪು ಮಾಹಿತಿಗಳು ಹೊರಳಬಹುದು. ಅದು ಬಿಟ್ಟರೆ ಮೋದಿಗೆ ಇತಿಹಾಸದಲ್ಲಿ ಉತ್ತಮ ಜ್ಞಾನವೇ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+