Surgical Strike: ಸರ್ಜಿಕಲ್‌ ಸ್ಟ್ರೈಕ್‌ ನಡೆಯಿತಾ? ನಡೆದಿಲ್ವಾ?

ನವದೆಹಲಿ: 2016ರಲ್ಲಿ ನಡೆದಿದ್ದ 'ಸರ್ಜಿಕಲ್‌ ಸ್ಟ್ರೈಕ್‌' ಯಾರಿಗೆ ತಾನೆ ಗೊತ್ತಿಲ್ಲ ಹೇಳಿ..? ಆಗ ನೇರವಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿದ್ದ ಭಾರತೀಯ ಸೈನಿಕರು, ಸರ್ಜಿಕಲ್‌ ಸ್ಟ್ರೈಕ್‌ (Surgical Strike) ನಡೆಸಿದ್ದರು. ಉಗ್ರರನ್ನ ಉಡಾಯಿಸಿ ಭಾರತ ತನ್ನ ಸೇಡನ್ನ ತೀರಿಸಿಕೊಂಡಿತ್ತು. ಆದ್ರೆ ಮತ್ತೊಮ್ಮೆ ಭಾರತೀಯ ಸೈನಿಕರು ಸರ್ಜಿಕಲ್‌ ಸ್ಟ್ರೈಕ್‌ ನಡೆಸಿದ್ದಾರೆ ಎಂಬ ಸುದ್ದಿ ಹರಡಿದ್ದು, ಆ ಬಗ್ಗೆ ಇದೀಗ ಸ್ಪಷ್ಟನೆ ಸಿಕ್ಕಿದೆ.

ಹೌದು, ಭಾರತ ಸೇನೆ ಪಾಕಿಸ್ತಾನ ವಿರುದ್ಧ ಮತ್ತೆ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ ಎಂಬ ವರದಿ ಸಂಚಲನ ಸೃಷ್ಟಿಸಿತ್ತು. ವರದಿ ಪ್ರಕಟವಾದ ಕೆಲವೇ ಗಂಟೆಗಳ ಬಳಿಕ ರಕ್ಷಣಾ ಸಚಿವಾಲಯ ಆ ಬಗ್ಗೆ ಸ್ಪಷ್ಟನೆ ನೀಡಿದೆ. ಭಾರತದ ಗಡಿಯಲ್ಲಿ ಉಗ್ರರ ಉಪಟಳ ಹೆಚ್ಚಾಗುತ್ತಿರುವ ವೇಳೆ ಖಡಕ್ ಕ್ರಮ ಕೈಗೊಳ್ಳಲಾಗಿದೆ. ಅದರಲ್ಲೂ ಪಾಕ್ ಪ್ರಚೋದಿತ ಉಗ್ರರು, ಭಾರತದ ಗಡಿ ಭಾಗದಲ್ಲಿ ಪದೇ ಪದೆ ಕಿರಿಕ್ ಮಾಡುವ ಆರೋಪ ಇದೆ. ಭಾರತೀಯ ಸೇನೆ ಕೂಡ ಉಗ್ರರ ಹೆಣ ಬೀಳಿಸುತ್ತಿದೆ. ಇದೀಗ ಮತ್ತೆ ಅಂತಹದ್ದೇ ಕಾರ್ಯಾಚರಣೆ ನಡೆದಿದೆ. ಆದರೆ ಇದೀಗ ಸರ್ಜಿಕಲ್‌ ಸ್ಟ್ರೈಕ್‌ ನಡೆಯಿತಾ? ನಡೆದಿಲ್ವಾ? ಮುಂದೆ ಓದಿ.

No Surgical Strike: But Stopped Terrorist Infiltration Attempt in Balakot Sector, Indian Side

ಸರ್ಜಿಕಲ್‌ ಸ್ಟ್ರೈಕ್‌ ನಡೆಯಿತಾ?

ಅಂದಹಾಗೆ ಇದೀಗ ಮತ್ತೊಮ್ಮೆ ಸರ್ಜಿಕಲ್‌ ಸ್ಟ್ರೈಕ್‌ ನಡೆಯಿತಾ? ಎಂಬ ಬಗ್ಗೆ ಸ್ಪಷ್ಟನೆಯು ಸಿಕ್ಕಿದೆ. ಈ ವರದಿ ಸುಳ್ಳು ಎಂದು ಸ್ಪಷ್ಟನೆ ಕೂಡ ಸಿಕ್ಕಿದೆ. ಆದರೆ ಜಮ್ಮು ಮತ್ತು ಕಾಶ್ಮೀರದ ಬಾಲಾಕೋಟ್ ಸೆಕ್ಟರ್‌ನಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದಿಂದ ಗಡಿ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಉಗ್ರರ ಯತ್ನ ವಿಫಲಗೊಳಿಸಿದೆ ಸೇನೆ. ಈ ಕುರಿತು ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ. ಸೋಮವಾರ ಬೆಳಗ್ಗೆ ಗಡಿಯ ಪ್ರವೇಶಕ್ಕೆ ಯತ್ನಿಸಿದ್ದ ಇಬ್ಬರು ಉಗ್ರರನ್ನು ಗುರುತಿಸಿ ಹತ್ಯೆ ಮಾಡಲಾಗಿದೆ. ಈ ಮೂಲಕ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಡೆಯಿತಾ? ಎಂಬ ಸುದ್ದಿಗೆ ಸ್ಪಷ್ಟನೆ ಸಿಕ್ಕಿದೆ.

ವರದಿಯಲ್ಲಿ ಹೇಳಿದ್ದು ಏನು?

ಅಷ್ಟಕ್ಕೂ ಬಾಲಕೋಟ್ ವಲಯದ ಹಮೀರ್‌ಪುರ ಭಾಗದಲ್ಲಿ ಪ್ರತಿಕೂಲ ಹವಾಮಾನ ಮತ್ತು ದಟ್ಟ ಮಂಜು, ದಟ್ಟ ಪೊದೆಗಳನ್ನು ಬಳಸಿಕೊಂಡು ಭಾರತದ ಗಡಿ ಒಳಗೆ ನುಸುಳೋದಕ್ಕೆ ಯತ್ನಿಸುತ್ತಿದ್ದ ಉಗ್ರರ ಹೆಣ ಕೆಡವಲಾಗಿದೆ. ಈ ಕುರಿತು ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ. ಆದ್ರೆ ಇದನ್ನು ಬಿಟ್ಟು ಮುಂಜಾನೆ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮತ್ತೆ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ ಎಂದು ಪತ್ರಿಕೆ ಒಂದು ವರದಿ ಪ್ರಕಟಿಸಿತ್ತು. ಭಾರತಿಯ ಸೇನೆ ಶನಿವಾರ ರಾತ್ರಿ ಎಲ್‌ಒಸಿ ಸಮೀಪ 2.5 ಕಿಲೋ ಮೀಟರ್ ಮುಂದೆ ಹೋಗಿ ಪಾಕಿಸ್ತಾನಿ ಭಯೋತ್ಪಾದಕರ 4 ಲಾಂಚಿಂಗ್ ಪ್ಯಾಡ್‌ ಉಡಾಯಿಸಿದೆ ಎಂದು ಕೂಡ ಇದೇ ವರದಿಯಲ್ಲಿ ಹೇಳಲಾಗಿತ್ತು. ಆದರೆ ಹೀಗೆಲ್ಲಾ ನಡೆದೇ ಇಲ್ಲ ಎಂದಿದೆ ರಕ್ಷಣಾ ಸಚಿವಾಲಯ.

ಬಾಲಾಕೋಟ್‌ ಸೆಕ್ಟರ್‌ ಸೇರಿ ಹಲವು ಪ್ರದೇಶಗಳಿಂದ ಜಮ್ಮು-ಕಾಶ್ಮೀರ ಪ್ರವೇಶಿಸಲು ಯತ್ನಿಸಿದ ಉಗ್ರರ ಯತ್ನ ವಿಫಲಗೊಳಿಸಿದ್ದೇವೆ. ಕಾಶ್ಮೀರ ಗಡಿಯಲ್ಲಿ ಒಳನುಸುಳಲು ಯತ್ನಿಸಿದ ಇಬ್ಬರು ಉಗ್ರರನ್ನ ಮಾತ್ರ ಸದೆಬಡೆಯಲಾಗಿದೆ. ಕಾಶ್ಮೀರವನ್ನು ಪ್ರವೇಶಿಸಲು ಉಗ್ರರು ಕಾಯುತ್ತಿದ್ದಾರೆ. ಹಾಗಾಗಿ ಹೆಚ್ಚಿನ ನಿಗಾ ವಹಿಸಿ, ಅವರ ಯತ್ನ ವಿಫಲಗೊಳಿಸಲಾಗಿದೆಯೇ ಹೊರತು ಸರ್ಜಿಕಲ್‌ ಸ್ಟ್ರೈಕ್‌ ಕೈಗೊಂಡಿಲ್ಲ ಎಂದು ಸಚಿವಾಲಯ ಸ್ಪಷ್ಟವಾಗಿ ಹೇಳಿದೆ. ಇತ್ತೀಚೆಗೆ ಗಡಿ ಭಾಗದಲ್ಲಿ ಉಗ್ರರ ಕಿರಿಕ್ ಜೋರಾಗಿದ್ದು, ಭಾರತದ ಸೈನಿಕರು ಕೂಡ ಸೂಕ್ತ ಉತ್ತರ ನೀಡುತ್ತಿದ್ದಾರೆ.

No Surgical Strike: But Stopped Terrorist Infiltration Attempt in Balakot Sector, Indian Side

ಒಟ್ನಲ್ಲಿ 2016ರಲ್ಲಿ ನಡೆದಿದ್ದ 'ಸರ್ಜಿಕಲ್‌ ಸ್ಟ್ರೈಕ್‌' ಮತ್ತೊಮ್ಮೆ ಸದ್ದು ಮಾಡುತ್ತಿತ್ತು. ಈ ಹೊತ್ತಲ್ಲೇ ರಕ್ಷಣಾ ಸಚಿವಾಲಯ ಸ್ಪಷ್ಟನೆ ನೀಡಿದೆ. ಹಾಗೇ ಉಗ್ರರಿಗೆ ತಕ್ಕ ಪಾಠ ಕಲಿಸಿದ ಬಗ್ಗೆಯು ಮಾಹಿತಿ ನೀಡಿದೆ. ಅತ್ತ ಪಾಕಿಸ್ತಾನ ನೆಲದಿಂದಲೇ ಉಗ್ರರು ಬರುತ್ತಿದ್ದರೂ ಪಾಕ್ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ವಿಪರ್ಯಾಸ. ಭಾರತ ಪದೇ ಪದೆ ಪಾಕಿಸ್ತಾನದ ತಪ್ಪನ್ನು ತಿಳಿಸಲು ಯತ್ನಿಸಿದರು ನೆರೆಯ ದೇಶಕ್ಕೆ ಇದು ಅರ್ಥವೇ ಆಗುತ್ತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+