ಆಧಾರ್ ನೀಡಿ ಕೊಂಡ ಸಿಮ್‌ಗಳು ನಿಷ್ಕ್ರಿಯ ಆಗವು: ಟ್ರಾಯ್ ಸ್ಪಷ್ಟನೆ
ನವದೆಹಲಿ, ಅಕ್ಟೋಬರ್ 18: ಆಧಾರ್ ಸಂಖ್ಯೆ ನೀಡಿ ಪಡೆದ ಮೊಬೈಲ್ ಸಿಮ್‌ಗಳು ನಿಷ್ಕ್ರಿಯವಾಗುತ್ತವೆ ಎಂದು ಸುದ್ದಿಯೊಂದು ಹರಡಿತ್ತು ಆದರೆ ಇದಕ್ಕೆ ಕೇಂದ್ರ ಸರ್ಕಾರ ಸ್ಪಷ್ಟಣೆ ನೀಡಿದ್ದು, ಇದು ಸುಳ್ಳು ಸುದ್ದಿ ಎಂದಿದೆ.
ಆಧಾರ್ ಸಂಖ್ಯೆ ನೀಡಿ ಪಡೆದ ಯಾವುದೇ ಮೊಬೈಲ್ ಸಂಖ್ಯೆ ನಿಷ್ಕ್ರಿಯವಾಗುವುದಿಲ್ಲ ಎಂದು ಕೇಂದ್ರದ ದೂರ ಸಂಪರ್ಕ ಇಲಾಖೆ ಸ್ಪಷ್ಟಪಡಿಸಿದ್ದು, ಗ್ರಾಹಕರು ಅನವಶ್ಯಕವಾಗಿ ಗೊಂದಲಕ್ಕೊಳಗಾಗಬಾರದು ಎಂದು ಮನವಿ ಮಾಡಿದೆ.
ಆಧಾರ್ ಕಡ್ಡಾಯದ ಬಗ್ಗೆ ಇತ್ತೀಚೆಗೆ ಸುಪ್ರಿಂಕೋರ್ಟ್ ನೀಡಿದ ಮಹತ್ವದ ತೀರ್ಪಿನ ಅನ್ವಯ ಮೊಬೈಲ್ ಸಿಮ್ ಪಡೆಯಲು ಆಧಾರ್ ಕಡ್ಡಾಯವಲ್ಲ ಹಾಗಾಗಿ ಈ ಹಿಂದೆ ಆಧಾರ್ ಸಂಖ್ಯೆ ನೀಡಿ ಪಡೆದಿದ್ದ ಸಿಮ್ ಕಾರ್ಡ್‌ಗಳ ಸಂಪರ್ಕ ಕಡಿತವಾಗುತ್ತದೆ ಎಂಬ ಸುಳ್ಳು ಸುದ್ದಿ ಹರಡಿತ್ತು.

ಈ ಹಿಂದೆ ಆಧಾರ್ ಸಂಖ್ಯೆ ನೀಡಿ ಸಿಮ್ ಪಡೆದವರು ಆಧಾರ್ ಮಾಹಿತಿಯನ್ನು ಹಿಂಪಡೆಯಲು ಇಚ್ಛಿಸಿದರೆ ಅದಕ್ಕೆ ಅವಕಾಶ ಕಲ್ಪಿಸಲಾಗುವುದು ಆಧಾರ್ ಬದಲಿಗೆ ಇನ್ನಾವುದೇ ದಾಖಲೆಗಳನ್ನು ನೀಡಿ ಸಿಮ್ ಪಡೆಯಬೇಕು ಎಂದು ಟ್ರಾಯ್ ಹಾಗೂ ದೂರಸಂಪರ್ಕ ಇಲಾಖೆ ಬಿಡುಗಡೆ ಮಾಡಿರುವ ಜಂಟಿ ಹೇಳಿಕೆಯಲ್ಲಿ ಹೇಳಿದೆ.











Click it and Unblock the Notifications