ಸೀರೆ ಕಡ್ಡಾಯವಲ್ಲ, ಸಭ್ಯವಾದ ಡ್ರೆಸ್ ಇರಲಿ: ಕಾಶಿ ದೇಗುಲ ಟ್ರಸ್ಟ್
ವಾರಣಾಸಿ, ನ.24: ಕಾಶೀಯ ವಿಶ್ವನಾಥ ದೇಗುಲಕ್ಕೆ ಬರುವ ಪ್ರವಾಸಿಗರು ಅದರಲ್ಲೂ ವಿಶೇಷವಾಗಿ ವಿದೇಶಿ ಮಹಿಳೆಯರು ಸೀರೆಯುಟ್ಟುಕೊಂಡು ದೇಗುಲ ಪ್ರವೇಶಿಸಬೇಕು ಎಂಬ ವಸ್ತ್ರಸಂಹಿತೆ ಜಾರಿಗೊಳಿಸಲಾಗಿದೆ ಎಂಬ ಸುದ್ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿತ್ತು, ಅದರೆ, ಈ ಸುದ್ದಿಯನ್ನು ದೇಗುಲದ ಆಡಳಿತ ಮಂಡಳಿ ಅಲ್ಲಗೆಳೆದಿದೆ.
ಮೈ ತೋರಿಸುವ ಬಟ್ಟೆ ಧರಿಸುವ ದೇಶಿ ಅಥವಾ ವಿದೇಶಿ ಮಹಿಳೆಯರಿಗೆ ಇನ್ನು ವಿಶ್ವನಾಥನ ದರ್ಶನಕ್ಕೆ ಪ್ರವೇಶವಿಲ್ಲ ಎಂದಷ್ಟೇ ದೇಗುಲದ ಪ್ರಕಟಣೆಯಲ್ಲಿ ಹೇಳಲಾಗಿದೆ. ಆದರೆ, ಸೀರೆ ಕಡ್ಡಾಯ ಎಂದು ಹೇಳಿಲ್ಲ. ಸಭ್ಯವಾದ ಡ್ರೆಸ್ ಧರಿಸಿ ದೇಗುಲ ಪ್ರವೇಶಿಸಬಹುದು ಎಂದು ಶ್ರೀಕಾಶಿ ವಿಶ್ವನಾಥ್ ಮಂದಿರ ನ್ಯಾಸ್ ಪರಿಷತ್ ನ ಮುಖ್ಯಸ್ಥ ಅಶೋಕ್ ದ್ವಿವೇದಿ ಹೇಳಿದ್ದಾರೆ. [ಉದ್ಯೋಗಿಗಳಿಗೆ 'ವಸ್ತ್ರ ಸ್ವಾತಂತ್ರ್ಯ' ಕೊಟ್ಟ ಸಿಕ್ಕಾ]

ವಸ್ತ್ರ ಸಂಹಿತೆ, ಸಮವಸ್ತ್ರ ನೀತಿ ಜಾರಿ ಮಾಡಲು ಇದೇನು ಶಾಲೆ ಅಥವಾ ಕಾಲೇಜಲ್ಲ. ಇಲ್ಲಿನ ಸಂಸ್ಕೃತಿಗೆ ಅನುಗುಣವಾಗಿ ಮಂದಿರದ ಪಾವಿತ್ರ್ಯಕ್ಕೆ ಧಕ್ಕೆ ಬರದಂಥ ಯಾವುದೇ ವಸ್ತ್ರವನ್ನಾದರೂ ಮಹಿಳೆಯರು ಹಾಗೂ ಪುರುಷರು ಧರಿಸಬಹುದು ಎಂದಿದ್ದಾರೆ.[ಚಾಮುಂಡಿ ಬೆಟ್ಟದಲ್ಲಿ ಇನ್ಮುಂದೆ ವಸ್ತ್ರಸಂಹಿತೆ ಜಾರಿ?]
ದಕ್ಷಿಣ ಭಾರತೀಯರಿಂದ ಹೆಚ್ಚಿದ ಅಸಹಿಷ್ಣುತೆ: ವಿದೇಶಿಯರು ಮೈತೋರಿಸುವ ಬಟ್ಟೆ ತೊಟ್ಟು ದೇಗುಲಗಳಿಗೆ ಹೋಗುವುದನ್ನು ತಪ್ಪಿಸುವಂತೆ ದಕ್ಷಿಣ ಭಾರತದ ಭಕ್ತಾದಿಗಳಿಂದ ಮನವಿ ಹೆಚ್ಚಾಗಿದೆ. ಹೀಗಾಗಿ, ವಸ್ತ್ರ ಸಂಹಿತೆ ಅಥವಾ ಕಠಿಣ ನಿಯಮಗಳನ್ನು ರೂಪಿಸಲು ಕಾಶಿ ವಿಶ್ವನಾಥ ದೇಗುಲ ಮಂಡಳಿ ಯೋಚಿಸಬೇಕಾಯಿತು. ತಿರುಪತಿ ದೇವಾಲಯದಲ್ಲಿರುವಂತೆ ಮಹಿಳೆಯರಿಗೆ ಸೀರೆ ಹಾಗೂ ಪುರುಷರಿಗೆ ಧೋತಿ ಕುರ್ತಾದ ವಸ್ತ್ರಸಂಹಿತೆ ಜಾರಿ ಮಾಡುವಂತೆ ಮನವಿ ಮಾಡಿದ್ದರು. [ಪಂಚೆ ಪ್ರಕರಣ: ಕ್ರಿಕೆಟ್ ಕ್ಲಬ್ಬಿಗೆ ಸಿಎಂ ಜಯಾ ಪಂಚ್]
ಅದರೆ, ತಕ್ಷಣಕ್ಕೆ ಈ ನಿಯಮ ಜಾರಿಗೊಳಿಸುವುದು ಕಷ್ಟವಾಗುತ್ತದೆ. ದೇಗುಲದ ಬಳಿ ವಸ್ತ್ರ ಬದಲಾವಣೆಗೆ ಸ್ಥಳಗಳನ್ನು ಗುರುತಿಸಿದ್ದು, ಆಸಕ್ತರು ಸೀರೆಯುಟ್ಟು ಬರಬಹುದು.ಇಲ್ಲದಿದ್ದರೆ ಯಾವುದೇ ಸಭ್ಯ ವಸ್ತ್ರ ಧರಿಸಿ ದೇಗುಲ ಪ್ರವೇಶಿಸಬಹುದು ಎಂದು ದೇಗುಲದ ಹೆಚ್ಚುವತಿ ಸಿಇಒ ಪಿಎನ್ ದ್ವಿವೇದಿ ತಿಳಿಸಿದ್ದಾರೆ. (ಪಿಟಿಐ)












Click it and Unblock the Notifications