• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜಕೀಯಕ್ಕೆ ಎಂಟ್ರಿ ಕೊಡ್ತೀರಾ? ಎಂದಿದ್ದಕ್ಕೆ ರಾಬರ್ಟ್ ಪ್ರತಿಕ್ರಿಯೆ

|

ನವದೆಹಲಿ, ಫೆಬ್ರವರಿ 25: ಮನಿಲಾಂಡ್ರಿಂಗ್ ಪ್ರಕರಣದಲ್ಲಿ ಸಿಲುಕಿರುವ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರು ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದೆ. ರಾಬರ್ಟ್ ಅವರ ಫೇಸ್ ಬುಕ್ ಪೋಸ್ಟ್, ಮೊರದಾಬಾದಿನಿಂದ ಸ್ಪರ್ಧೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಸಂಚಲನ ಉಂಟು ಮಾಡಿತ್ತು. ಆದರೆ, ಈ ಬಗ್ಗೆ ರಾಬರ್ಟ್ ಪ್ರತಿಕ್ರಿಯೆ ನೀಡಿದ್ದಾರೆ.

ಎನ್ ಡಿಟಿವಿ ಜತೆ ಮಾತನಾಡಿರುವ ರಾಬರ್ಟ್ ಈ ಸುದ್ದಿಯನ್ನು ಅಲ್ಲಗೆಳೆದಿಲ್ಲ, ಬದಲಿಗೆ ರಾಜಕೀಯ ಪ್ರವೇಶಕ್ಕೆ ಸಮಯ ಇನ್ನು ಕೂಡಿ ಬಂದಿಲ್ಲ ಎಂದಿದ್ದಾರೆ. ಜಾರಿ ನಿರ್ದೇಶನಾಲಯದ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿ, 'ನನಗೆ ಯಾವುದೇ ಆತುರವಿಲ್ಲ, ನಾನು ಅರ್ಹತೆ ಪಡೆದುಕೊಳ್ಳಬೇಕಿದೆ' ಎಂದಿದ್ದಾರೆ.

ರಾಬರ್ಟ್ ವಾದ್ರಾ(50) ಅವರ ಪತ್ನಿ ಪ್ರಿಯಾಂಕಾ ಗಾಂಧಿ ಅವರು ಇತ್ತೀಚೆಗೆ ಸಕ್ರಿಯ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದು, ಉತ್ತರಪ್ರದೇಶ ಪೂರ್ವ ವಿಭಾಗದ ಚುನಾವಣಾ ಉಸ್ತುವಾರಿಯಾಗಿದ್ದಾರೆ.

ಲಂಡನ್ ಫ್ಲ್ಯಾಟ್ ಖರೀದಿ ಆದ ಮೇಲೆ ದುಬೈ ವಿಲ್ಲಾ ಬಗ್ಗೆ ವಾದ್ರಾಗೆ ಪ್ರಶ್ನೆ

ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವದ್ರಾ ಅವರಿಗೆ ಜಾರಿ ನಿರ್ದೇಶನಾಲಯವು ಬಿಸಿ ಮುಟ್ಟಿಸಿತ್ತು. ಭೂ ಹಗರಣ, ಮನಿ ಲಾಂಡ್ರಿಂಗ್ ಗೆ ಸಂಬಂಧಿಸಿದಂತೆ ಮೊದಲಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿ, ನಂತರ ದೇಶದ ವಿವಿಧೆಡೆ ವಾದ್ರಾ ಅವರ ಆಪ್ತರ ಮನೆ, ಕಚೇರಿ ಮೇಲೆ ದಾಳಿ ನಡೆಸಲಾಗಿತ್ತು.

ಮನಿಲಾಂಡ್ರಿಂಗ್ ಪ್ರಕರಣದ ಆರೋಪಿ

ಮನಿಲಾಂಡ್ರಿಂಗ್ ಪ್ರಕರಣದ ಆರೋಪಿ

ಲಂಡನ್‌ ಮೂಲದ ಸಂಸ್ಥೆಗೆ 17.77 ಕೋಟಿ ಅಕ್ರಮ ವರ್ಗಾವಣೆ ಮಾಡಿದ್ದಾರೆ ಎಂದು ರಾಬರ್ಟ್‌ ವಾದ್ರಾ ವಿರುದ್ಧ ಇಡಿ ಪ್ರಕರಣ ದಾಖಲಿಸಿದೆ. ಇದೇ ಪ್ರಕರಣದಲ್ಲಿ ವಾದ್ರಾ ಆಪ್ತ ಮನೋಜ್ ಅರೋರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಲಂಡನ್ನಿನಲ್ಲಿ ವಾದ್ರಾ ಹೆಸರಿನಲ್ಲಿ 2 ಮನೆ, 6 ಫ್ಲಾಟ್ ಹಾಗೂ ಇನ್ನಿತರ ಆಸ್ತಿ ಹೊಂದಿದ್ದಾರೆ ಎಂದು ಜಾರಿನಿರ್ದೇಶನಾಲಯ ಮಾಹಿತಿ ಕಲೆ ಹಾಕಿದೆ.

ನನ್ನ ಪತ್ನಿಯನ್ನು ಸುರಕ್ಷಿತವಾಗಿಡಿ: ರಾಬರ್ಟ್ ವಾದ್ರಾ ಭಾವನಾತ್ಮಕ ಬರಹ

ಸಾರ್ವಜನಿಕರ ಜತೆ ಬೆರೆಯುವೆ

ಸಾರ್ವಜನಿಕರ ಜತೆ ಬೆರೆಯುವೆ

ದೇಶದ ವಿವಿಧೆಡೆ ಅದರಲ್ಲೂ ಉತ್ತರಪ್ರದೇಶದಲ್ಲಿ ಅನೇಕ ಸಭೆ, ಸಮಾರಂಭದಲ್ಲಿ ಪಾಲ್ಗೊಂಡು ಸಾರ್ವಜನಿಕರ ಜೊತೆ ಬೆರೆತಿರುವೆ. ಇಷ್ಟು ವರ್ಷಗಳ ಅನುಭವವನ್ನು ಸಾರ್ವಜನಿಕರ ಉಪಯೋಗಕ್ಕೆ ಬಳಸಲು ದೊಡ್ಡ ವೇದಿಕೆ ಬೇಕಾಗುತ್ತದೆ. ಜನಸೇವೆಗೆ ನಾನು ಸಿದ್ಧ ಎಂಬರ್ಥದಲ್ಲಿ ಫೇಸ್ ಬುಕ್ ನಲ್ಲಿ ರಾಬರ್ಟ್ ವಾದ್ರಾ ಬರೆದುಕೊಂಡಿದ್ದರು.

ಸತ್ಯಕ್ಕೆ ಯಾವಾಗಲೂ ಗೆಲುವು, ರಾಬರ್ಟ್ ವಾದ್ರಾ ಫೇಸ್ಬುಕ್ ಪೋಸ್ಟ್

ಮನಿಲಾಂಡ್ರಿಂಗ್ ತನಿಖೆ ಬಗ್ಗೆ

ಮನಿಲಾಂಡ್ರಿಂಗ್ ತನಿಖೆ ಬಗ್ಗೆ

ಕಳೆದ ಒಂದು ದಶಕದಿಂದ ಸರ್ಕಾರಗಳು ನನ್ನ ಹಿಂದೆ ಬಿದ್ದಿವೆ. ದೇಶದ ಅನೇಕ ದೊಡ್ಡ ಸಮಸ್ಯೆಗಳತ್ತ ಇರುವ ಗಮನವನ್ನು ಬೇರೆಡೆಗೆ ತಿರುಗಿಸಲು ನನ್ನನ್ನು ಬಲಿಪಶು ಮಾಡಲಾಗುತ್ತಿದೆ. ಸತ್ಯ ಹೊರ ಬಂದ ಮೇಲೆ ಎಲ್ಲಾ ತಿಳಿಯುತ್ತದೆ. ಜನರು ನನಗೆ ಗೌರವ ನೀಡಿ, ನನ್ನ ಭವಿಷ್ಯಕ್ಕಾಗಿ ಶುಭ ಹಾರೈಸುತ್ತಿದ್ದಾರೆ ಎಂದು ರಾಬರ್ಟ್ ಹೇಳಿದ್ದಾರೆ.

ಕಾಂಗ್ರೆಸ್ಸಿನ ಹೊಸ ಪ್ರಧಾನಿ ಅಭ್ಯರ್ಥಿ

ಕಾಂಗ್ರೆಸ್ಸಿನ ಹೊಸ ಪ್ರಧಾನಿ ಅಭ್ಯರ್ಥಿಯನ್ನು ಪರಿಚಯಿಸುತ್ತಿದ್ದೇವೆ ನೋಡಿ ಎಂದು ರಾಬರ್ಟ್ ವಾದ್ರಾ ಅವರು ರಾಜಕೀಯಕ್ಕೆ ಎಂಟ್ರಿ ಕೊಡಲು ಸಿದ್ಧ ಎಂಬ ಸುದ್ದಿಯನ್ನು ಟ್ವೀಟ್ ಮಾಡಿರುವ ಬಿಜೆಪಿ, ರಾಬರ್ಟ್ ಇಸ್ ರೆಡಿ ಎಂಬ ಹ್ಯಾಶ್ ಟ್ಯಾಗ್ ಹಾಕಿದೆ. ಪ್ರಧಾನಿ ಪಟ್ಟಕ್ಕಾಗಿ ಅವರ ಕುಟುಂಬದಲ್ಲೇ ಕಿತ್ತಾಟ ನಡೆಯಬಹುದು ಎಂಬ ಪ್ರತಿಕ್ರಿಯೆ ಬಂದಿದೆ.

English summary
A day after his loaded Facebook post, Robert Vadra's political ambition was on display in posters in Moradabad, his hometown in Uttar Pradesh. "Robert Vadraji, you are welcome to contest from the Moradabad Lok Sabha seat," screamed the posters that also featured his in-laws, Congress president Rahul Gandhi and Sonia Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X