ಪಾಸ್‌ಪೋರ್ಟ್: ಇನ್ನುಮುಂದೆ ಪೊಲೀಸ್ ಪರಿಶೀಲನೆ ಅಗತ್ಯ ಇಲ್ಲ
ಬೆಂಗಳೂರು, ಏಪ್ರಿಲ್ 05: ಪಾಸ್‌ಪೋರ್ಟ್ ಪಡೆಯಲು ಪೊಲೀಸ್ ಪರಿಶೀಲನೆ ಪ್ರಕ್ರಿಯೆಯನ್ನು ಕೈಬಿಡಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತೀರ್ಮಾನಿಸಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ
ಸಾರ್ವಜನಿಕರಿಗೆ ತ್ವರಿತವಾಗಿ ಪಾಸ್‌ಪೋರ್ಟ್ ನೀಡುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಯಾವುದೇ ಶುಲ್ಕವಿಲ್ಲದೆ, ಈ ಯೋಜನೆಯಡಿ ಸೌಲಭ್ಯ ಸಿಗಲಿದೆ. ಅವರು ಪೊಲೀಸರ ಪರಿಶೀಲನಾ ಪ್ರಮಾಣ ಪತ್ರ ನೀಡುವ ಅಗತ್ಯವಿಲ್ಲ.
ಪರಿಶೀಲನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಸಚಿವಾಲಯಕ್ಕೆ ದೂರು ನೀಡಿದ್ದ ಹಲವರು, ಪೊಲೀಸರು ತ್ವರಿತವಾಗಿ ಪರಿಶೀಲನೆ ನಡೆಸುತ್ತಿಲ್ಲ. ಇದರಿಂದ ಪಾಸ್‌ಪೋರ್ಟ್ ಕೈ ಸೇರುವುದು ತಡವಾಗುತ್ತಿದೆ ಎಂದಿದ್ದರು. ಇದಕ್ಕೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಸಚಿವಾಲಯವು, ಔಟ್ ಆಫ್ ಟರ್ನ್ ಎಂಬ ಯೋಜನೆ ರೂಪಿಸಿದೆ ಎಂದು ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ಅಧಿಕಾರಿ ಭರತ್‌ಕುಮಾರ್ ತಿಳಿಸಿದರು.

ಪರಿಶೀಲನೆಗಾಗಿ ಪೊಲೀಸರಿಗೆ ಪ್ರತ್ಯೇಕ ಉಪಕರಣ ನೀಡಿದ್ದೇವೆ. ಅವುಗಳ ಬಳಕೆ ಬಗ್ಗೆ ಹಲವರಿಗೆ ಗೊತ್ತಿಲ್ಲ. ಹೀಗಾಗಿಯೇ ಪರಿಶೀಲನೆ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿದೆ ಎಂದರು.
ಪಾಸ್‌ಪೋರ್ಟ್‌ಗೆ ಏನೇನು ದಾಖಲೆಗಳು ಬೇಕು: ಚುನಾವಣಾ ಗುರುತಿನ ಚೀಟಿ, ಶಸ್ತ್ರಾಸ್ತ್ರ ಪರವಾನಗಿ, ಪಿಂಚಣಿ ದಾಖಲೆಗಳು, ರಾಜ್ಯ, ಕೇಂದ್ರ ಸರ್ಕಾರ ಹಾಗೂ ಖಾಸಗಿ ವಲಯದ ಕಂಪನಿಗಳು ನೀಡುವ ಗುರುತಿನ ಚೀಟಿ, ಪ್ಯಾನ್ ಕಾರ್ಡ್, ಎಸ್ಸಿ,ಎಸ್ಟಿ ಹಾಗೂ ಇತರೆ ಹಿಂದುಳಿದ ವರ್ಗಗಳ ಪ್ರಮಾಣಪತ್ರ, ಚಾಲನಾ ಪರವಾನಗಿ, ಶಿಕ್ಷಣ ಸಂಸ್ಥೆಗಳು ನೀಡಿದ ವಿದ್ಯಾರ್ಥಿ ಗುರುತಿನ ಚೀಟಿ, ಜನನ ಪ್ರಮಾಣಪತ್ರ, ಪಡಿತರ ಚೀಟಿ ದಾಖಲೆಗಳು ಬೇಕಾಗುತ್ತದೆ.












Click it and Unblock the Notifications