ಮೇ 4ರಿಂದ ವಿಮಾನ ಹಾರಾಟ ಆರಂಭವಾಗುವುದಿಲ್ಲ?

ನವದೆಹಲಿ, ಏಪ್ರಿಲ್ 19 : ಕೊರೊನಾ ಹರಡದಂತೆ ತಡೆಯಲು ಘೋಷಣೆ ಮಾಡಿರುವ 2ನೇ ಹಂತದ ಲಾಕ್ ಡೌನ್ ಮೇ 3ರಂದು ಅಂತ್ಯಗೊಳ್ಳಲಿದೆ. ಆದರೆ, ಮೇ 4ರಿಂದಲೇ ವಿಮಾನಯಾನ ಸೌಲಭ್ಯ ಆರಂಭವಾಗಲಿದೆಯೇ? ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ.

ಏರ್ ಇಂಡಿಯಾ ಶನಿವಾರ ದೇಶಿಯ ಮತ್ತು ಅಂತರಾಷ್ಟ್ರೀಯ ವಿಮಾನಗಳ ಬುಕ್ಕಿಂಗ್ ಅನ್ನು ಆರಂಭಿಸುವುದಾಗಿ ಹೇಳಿತ್ತು. ಮೇ 4 ರಿಂದ ದೇಶಿಯ, ಜೂನ್ 1ರಿಂದ ಅಂತರಾಷ್ಟ್ರೀಯ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಎಂದು ತಿಳಿಸಿತ್ತು.

ಕೇಂದ್ರ ವಿಮಾನಯಾನ ಸಚಿವಾಲಯ ವಿಮಾನ ಸೇವೆ ಆರಂಭಿಸುವ ಕುರಿತು ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ. ವಿಮಾನ ಹಾರಾಟದ ಬಗ್ಗೆ ತೀರ್ಮಾನ ಕೈಗೊಂಡ ಬಳಿಕ ಬುಕ್ಕಿಂಗ್ ಆರಂಭಿಸಬೇಕು ಎಂದು ವಿಮಾನಯಾನ ಸಂಸ್ಥೆಗಳಿಗೆ ಸಲಹೆ ನೀಡಿದೆ.

airport

ದೇಶಿಯ ವಿಮಾನಗಳ ಕೆಲವು ಮಾರ್ಗಗಳ ಬುಕ್ಕಿಂಗ್ ಮೇ 4ರಿಂದ, ಅಂತರಾಷ್ಟ್ರೀಯ ವಿಮಾನಗಳ ಬುಕ್ಕಿಂಗ್ ಜೂನ್ 1ರಿಂದ ಮಾಡಬಹುದು ಎಂದು ಏರ್ ಇಂಡಿಯಾ ಪ್ರಕಟಿಸಿದ ಮೇಲೆ ವಿಮಾನಯಾನ ಸಚಿವಾಲು ಸ್ಪಷ್ಟನೆ ನೀಡಿದೆ.

ಲಾಕ್ ಡೌನ್ ವಿಸ್ತರಣೆ ಮಾಡಿದ ಹಿನ್ನಲೆಯಲ್ಲಿ ಮೇ 3ರ ತನಕ ಎಲ್ಲಾ ದೇಶಿಯ ಮತ್ತು ಅಂತರಾಷ್ಟ್ರೀಯ ವಿಮಾನಗಳ ಸೇವೆಯನ್ನು ರದ್ದುಗೊಳಿಸಲಾಗಿದೆ. ಆದರೆ, ಯಾವಾಗ ವಿಮಾನ ಸೇವೆ ಆರಂಭವಾಗಲಿದೆ ಎಂಬುದು ಇನ್ನೂ ಖಚಿತವಾಗಿಲ್ಲ.

ಕೊರೊನಾ ಹರಡದಂತೆ ತಡೆಯಲು ಭಾರತ ಮಾರ್ಚ್ 22ರಂದು ಅಂತರಾಷ್ಟ್ರೀಯ ವಿಮಾನ ಹಾರಾಟವನ್ನು ರದ್ದುಗೊಳಿಸಿತು. ಮಾರ್ಚ್ 24ರಿಂದ ದೇಶಿಯ ವಿಮಾನಗಳ ಹಾರಾಟವೂ ರದ್ದುಗೊಂಡಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+