ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಳವೀಯ ಮತ್ತು ನಿಜಾಮನ ಚಪ್ಪಲಿ ಪ್ರಸಂಗ

By ಪರಂಜಪೆ ಕೆ.ಎನ್
|
Google Oneindia Kannada News

ಇಂದು ಶಿಕ್ಷಣ ತಜ್ಞ, ಸ್ವಾತಂತ್ರ್ಯ ಹೋರಾಟಗಾರ ಸಮಾಜ ಸುಧಾರಕ, ಆಸೀಮ ದೇಶಭಕ್ತ ಮದನ್ ಮೋಹನ್ ಮಾಳವೀಯ ಅವರ 154ನೇ ಜನ್ಮದಿನ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ದೇಶದ ಅತ್ಯುನ್ನತ ನಾಗರೀಕ ಗೌರವ 'ಭಾರತ ರತ್ನ' ಪ್ರಶಸ್ತಿಯನ್ನು ಮಾಳವೀಯ ಅವರಿಗೆ ಘೋಷಣೆ ಮಾಡಿದೆ.

ಏಷ್ಯಾದ ಅತಿದೊಡ್ಡ ವಸತಿ ಶಾಲೆ, ವಿಶ್ವದ ದೊಡ್ಡ ಶಾಲೆಗಳಲ್ಲಿ ಒಂದೆನಿಸಿರುವ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ನಿರ್ಮಾತೃವಾಗಿರುವ ಮದನ್ ಮೋಹನ್ ಮಾಳವೀಯ ಅವರು ವಿವಿಯನ್ನು ಕಟ್ಟಿದ್ದು, ಒಂದು ಇತಿಹಾಸ, ಆ ಸಮಯದಲ್ಲಿ ಅವರ ಪಟ್ಟ ಕಷ್ಟಗಳು ಹೆಚ್ಚು.

1916 ರಲ್ಲಿ ಸ್ಥಾಪನೆಯಾದ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ 12000 ವಿದ್ಯಾರ್ಥಿಗಳಿದ್ದರು. ಇ೦ತಹ ವಿದ್ಯಾದೇಗುಲವನ್ನು ಕಟ್ಟಲು ಬೇಕಾದ ಸ೦ಪನ್ಮೂಲ ಮಾಳವೀಯ ಅವರಲ್ಲಿ ಇರಲಿಲ್ಲ. ಆದರೂ ಅವರು ಊರೂರು ಅಲೆದು ಅನೇಕ ಜನರಿ೦ದ ದೇಣಿಗೆ ಸ೦ಗ್ರಹಿಸಿ ವಿಶ್ವವಿದ್ಯಾಲಯ ಕಟ್ಟುವ ತಮ್ಮ ಕನಸನ್ನು ನನಸಾಗಿಸಿಕೊ೦ಡರು. [ಮದನ್ ಮೋಹನ್ ಮಾಳವೀಯ ಜೀವನ ಅವಲೋಕನ]

Madan Mohan Malaviya

ವಿಶ್ವವಿದ್ಯಾಲಯ ಕಟ್ಟಬೇಕೆ೦ಬ ಅದಮ್ಯ ಉತ್ಸಾಹ ಮತ್ತು ಇಚ್ಚಾಶಕ್ತಿ ಹೊ೦ದಿದ್ದ ಮದನ್ ಮೋಹನ್ ಮಾಳವೀಯ ಅವರು ಸ೦ಪನ್ಮೂಲ ಒಟ್ಟುಗೂಡಿಸಲು ಊರಿ೦ದೂರಿಗೆ ಪಯಣಿಸಿ, ಎಲ್ಲರಿ೦ದ ದೇಣಿಗೆ ಸ೦ಗ್ರಹಿಸುತ್ತಿದ್ದರು. ತಮ್ಮ ಅಭಿಯಾನದ ಒ೦ದು ಭಾಗವಾಗಿ ಹೈದರಾಬಾದಿನ ನಿಜಾಮನ ಅರಮನೆಗೂ ಹೋಗಿದ್ದರು. [ಮಾಹಿತಿ : ಜೀವನ್ಮುಖಿ ಬ್ಲಾಗ್]

ಹೈದರಾಬಾದ್ ನಿಜಾಮ ಆಗ ವಿಶ್ವದಲ್ಲಿಯೇ ಅತೀ ದೊಡ್ಡ ಶ್ರೀಮಂತ ಎ೦ಬ ಹೆಗ್ಗಳಿಕೆಗೆ ಪಾತ್ರರಾಗಿದ್ದವರು. ಮದನ್ ಮೋಹನ ಮಾಳವೀಯ ಅವರು ಹಿ೦ದೂ ವಿಶ್ವವಿದ್ಯಾಲಯ ಕಟ್ಟಲು ತಮ್ಮಲ್ಲಿ ದೇಣಿಗೆ ಕೇಳಿದಾಗ, ನಿಜಾಮ ಸಿಟ್ಟಿಗೆದಿದ್ದರು. ತಮ್ಮ ಬಳಿ ಬ೦ದು ಹಿ೦ದೂ ವಿವಿ ಕಟ್ಟಲು ಹಣ ಕೇಳಲು ನಿಮಗೆಷ್ಟು ಧೈರ್ಯ?, ಎ೦ದು ತಮ್ಮ ಕಾಲಲ್ಲಿದ್ದ ಚಪ್ಪಲಿಯನ್ನೆತ್ತಿ ಮಾಳವೀಯರತ್ತ ಕೋಪದಿ೦ದ ಎಸೆದಿದ್ದರು. [ವಾಜಪೇಯಿ, ಮಾಳವೀಯರಿಗೆ 'ಭಾರತರತ್ನ' ಘೋಷಣೆ]

ಆದರೆ, ಮಾಳವೀಯರು ಕಿ೦ಚಿತ್ತೂ ಸಿಟ್ಟಾಗಲಿಲ್ಲ. ತನ್ನತ್ತ ತೂರಿ ಬ೦ದ ನಿಜಾಮನ ಚಪ್ಪಲಿಯನ್ನು ಎತ್ತಿಕೊ೦ಡು ಹೊರಬ೦ದರು. ನಡೆದ ವಿಷಯವನ್ನು ಯಾರೊಡನೆಯೂ ಹೇಳಲಿಲ್ಲ. ಬದಲಾಗಿ ಹೈದರಾಬಾದಿನ ಒ೦ದು ಆಯಕಟ್ಟಿನ ಸ್ಥಳದಲ್ಲಿ, ನಿಜಾಮನ ಚಪ್ಪಲಿ ಮಾರಾಟಕ್ಕಿದೆ, ಹರಾಜಿನಲ್ಲಿ ಅತೀ ಹೆಚ್ಚು ಬೆಲೆ ಕೂಗುವವರಿಗೆ ಕೊಡಲಾಗುವುದು ಎ೦ಬ ಘೋಷಣೆ ಮಾಡಿ, ಹರಾಜಿನ ದಿನ ನಿಗದಿ ಪಡಿಸಿದರು.

ಖ್ಯಾತನಾಮರ ವಸ್ತುಗಳನ್ನು ದೊಡ್ಡಬೆಲೆ ತೆತ್ತು ಕೊಳ್ಳುವ ಹು೦ಬರು ಅ೦ದೂ ಇದ್ದರು. ಹರಾಜಿನ ವಿಷಯ ನಿಜಾಮನ ಕಿವಿಗೂ ತಲುಪಿತು. ತನ್ನ ಪಾದರಕ್ಷೆ ಅತೀ ಕಡಿಮೆ ಬೆಲೆಗೇನಾದರು ಹರಾಜಾದರೆ ಅದು ತನಗೆ ಅಪಮಾನ ಎಂದು ಆತಂಕಗೊಂಡ ನಿಜಾಮ ತನ್ನ ದೂತನೊಬ್ಬನನ್ನು ಹರಾಜು ಸ್ಥಳಕ್ಕೆ ಕಳುಹಿಸಿದ.

ತನ್ನ ಪಾದರಕ್ಷೆಯನ್ನು ಹರಾಜಿನಲ್ಲಿ ಹೆಚ್ಚು ಬೆಲೆ ಕೊಟ್ಟು ಕೊ೦ಡು ತರಬೇಕು ಎಂದು ಆದೇಶ ನೀಡಿದ. ಹರಾಜಿನಲ್ಲಿ ಅಂತಿಮವಾಗಿ ತನ್ನ ಪಾದರಕ್ಷೆಯನ್ನು ಹೆಚ್ಚಿನ ಬೆಲೆ ತೆತ್ತು ತಾನೇ ಕೊಳ್ಳುವಲ್ಲಿ ನಿಜಾಮ ಯಶಸ್ವಿಯಾದ. ಹರಾಜು ಹಾಕಿದ ಮಾಳವೀಯರ ಉದ್ದೇಶವೂ ಈಡೇರಿತು. ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಸ೦ಪನ್ಮೂಲ ದೊರಕಿತು.

English summary
Madan Mohan Malaviya establish Banaras Hindu University which is based on the model of historical Nalanda, Takasheela Vidya Peethams. When Malaviya was trying to build a university, he had to overcome many difficulties and barriers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X