ಮುಖ್ಯಮಂತ್ರಿ ಹುದ್ದೆ ಸಾಕಾಯ್ತು ಪಿಎಂ ಗದ್ದುಗೆ ಬೇಕಾಯ್ತು: ವಿಮಾನದಲ್ಲಿ ನಿತೀಶ್-ತೇಜಸ್ವಿ ಬಿಸಿಬಿಸಿ ಚರ್ಚೆ
ಲೋಕಸಭಾ ಚುನಾವಣೆಯ ಫಲಿತಾಂಶ ಬಂದಿದ್ದೆ ಬಂದಿದ್ದು, ನಿತೀಶ್ ಕುಮಾರ್ ಕಾಲು ನೆಲದ ಮೇಲೆ ನಿಲ್ಲುವಂತೆ ಕಾಣುತ್ತಲೇ ಇಲ್ಲ. ಕನಸಿನಲ್ಲೂ ಅಂದುಕೊಳ್ಳದ ಆಫರ್‌ಗಳು ಮಂಗಳವಾರದಿಂದ ಕಿವಿಗೆ ಬೀಳುತ್ತಿವೆ. ಈ ಆಫರ್‌ಗಳನ್ನೇ ಕೇಳಿಯೇ ನಿತೀಶ್ ಫುಲ್ ಖುಷ್ ಆದಂತೆ ಕಾಣುತ್ತಿದೆ. ನಿತೀಶ್ ಕುಮಾರ್ ಅವರು ಎಲ್ಲಿ ಹೋದರೂ ಈಗ ರಾಜಕೀಯ ನಾಯಕರೇ ಸೆಕ್ಯೂರಟಿ ನೀಡುವಂತೆ ಆಗಿದೆ.
ನಿತೀಶ್ ಕುಮಾರ್ ಈಗ ಕೇಂದ್ರದಲ್ಲಿ ಸರ್ಕಾರ ರಚಿಸಲು ಬೇಕಾದಷ್ಟು ಸೀಟುಗಳನ್ನು ತಮ್ಮಲ್ಲಿ ಇಟ್ಟುಕೊಂಡು ಬಿಟ್ಟಿದ್ದಾರೆ. ಇದರಿಂದ ರಾತ್ರೋ ರಾತ್ರಿ ನಿತೀಶ್ ಕಿಂಗ್ ಮೇಕರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚುನಾವಣಾ ಅಖಾಡದಲ್ಲಿದ್ದ ದುಷ್ಮನ್‌ಗಳೇ ಈಗ ಬಿಗ್ ಬಿಗ್ ಆಫರ್ ನೀಡ್ತಾ ಇದ್ದಾರೆ. ಬಿಹಾರದ ಮುಖ್ಯಮಂತ್ರಿ ಸ್ಥಾನದಿಂದ ಹಿಡಿದು, ಕೇಂದ್ರ ಸರ್ಕಾರದ ಕ್ಯಾಬಿನೇಟ್ ಮಿನಿಸ್ಟರ್ ಆಗಿ ಕಾರ್ಯ ನಿರ್ವಹಿಸಿರುವ ಅನುಭವ ಹೊಂದಿರುವ ನಿತೀಶ್‌ಗೆ ಈಗ ಪ್ರಧಾನ ಮಂತ್ರಿ ಹುದ್ದೆ ಕಣ್ಣು ಮುಂದೆ ಬರುತ್ತಿದೆ.

ವಿಮಾನದಲ್ಲಿ ಬಿಸಿಬಿಸಿ ಚರ್ಚೆ
ಲೋಕಸಭೆ ಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕ ಬಿಹಾರದಲ್ಲಿ ರಾಜಕೀಯ ರಂಗೇರಿದೆ. ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ಒಂದೇ ವಿಮಾನದಲ್ಲಿ ಹಿಂದೆ ಹಿಂದೆ ಕುಳಿತಿರುವುದು ಕಂಡುಬಂದಿದೆ. ಇಬ್ಬರೂ ಒಟ್ಟಿಗೆ ದೆಹಲಿಗೆ ಹೋಗುತ್ತಿರುವು ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಈಗ ಚಿಕ್ಕಪ್ಪ ಮತ್ತು ಸೋದರಳಿಯ ಮತ್ತೆ ಒಂದಾಗುತ್ತಾರೆಯೇ ಎಂಬ ದೊಡ್ಡ ಪ್ರಶ್ನೆ ಉದ್ಭವಿಸುತ್ತದೆ.
नीतीश-तेजस्वी एक साथ दिल्ली की ओर
— Gaurav Srivastav (@gauravnewsman) June 5, 2024
चाचा भतीजा एक साथ आएंगे क्या pic.twitter.com/51vlG2oI0A
ಈ ಬಾರಿ ಯಾವುದೇ ರಾಜಕೀಯ ಪಕ್ಷಕ್ಕೆ ಸಂಪೂರ್ಣ ಬಹುಮತ ಸಿಕ್ಕಿಲ್ಲ. ಹೀಗಾಗಿ ಸಮಿಶ್ರ ಸರ್ಕಾರ ಕೇಂದ್ರದಲ್ಲಿ ಬರಲಿದೆ. ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಬಹುಮತದ ಗಡಿ ದಾಟಿದೆ. ಇದೀಗ ಬಿಹಾರ ಸಿಎಂ ನಿತೀಶ್ ಯಾದವ್ ಅವರನ್ನು ಸೆಳೆಯಲು ಎಲ್ಲಾ ಪಕ್ಷಗಳು ಪ್ರಯತ್ನಿಸುತ್ತಿವೆ. ಇದೇ ವೇಳೆ ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ಒಟ್ಟಿಗೆ ದೆಹಲಿಗೆ ಹೋಗುತ್ತಿರುವ ವಿಡಿಯೋವೊಂದು ಹೊರಬಿದ್ದಿದೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಒಂದೇ ವಿಮಾನದಲ್ಲಿ ದೆಹಲಿಗೆ ತೆರಳಿದರು. ಇಬ್ಬರೂ ಮುಂದಿನ ಮತ್ತು ಹಿಂದಿನ ಸೀಟ್‌ಗಳಲ್ಲಿ ಕುಳಿತಿದ್ದಾರೆ. ಈ ವೇಳೆ ಚಿಕ್ಕಪ್ಪ ಯೋಗಕ್ಷೇಮ ವಿಚಾರಿಸಿದರು. ಈ ವೇಳೆ ತೇಜಸ್ವಿ ನಿತೀಶ್ ಅವರನ್ನು ಅಭಿನಂದಿಸಿದ್ದಾರೆ. ಮುಖ್ಯಮಂತ್ರಿಗಳು ವಿಮಾನದಲ್ಲಿ ಬಹಳ ಸಂತೋಷದಿಂದ ಕಾಣುತ್ತಿದ್ದಾರೆ.
ಚಿಕ್ಕಪ್ಪ-ಸೋದರಳಿಯ ವಿಡಿಯೋ ಕುರಿತು ರಾಜಕೀಯ ವಲಯದಲ್ಲಿ ನಾನಾ ರೀತಿಯ ಚರ್ಚೆಗಳು ನಡೆಯುತ್ತಿವೆ. ನಿತೀಶ್ ಮತ್ತು ತೇಜಸ್ವಿ ತಾವು ಮಾತನಾಡಿರುವ ಅಂಶಗಳು ಬೇರೆ ಪಕ್ಷಗಳ ಕಿವಿಗೆ ಬೀಳಬಾರದೆಂದು ಆಕಾಶದಲ್ಲೇ ಮಾತುಕತೆ ಆರಂಭಿಸಿದ್ದಾರೆ. ಲೋಕಸಭೆ ಚುನಾವಣೆಗೂ ಮುನ್ನ ನಿತೀಶ್ ಕುಮಾರ್ ಅವರು INDI ಮೈತ್ರಿಕೂಟವನ್ನು ತೊರೆದು NDA ಸೇರಿದ್ದರು.
ಬಿಹಾರದಲ್ಲಿನ ಒಟ್ಟು 40 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಜೆಡಿಯು ಉತ್ತಮ ಸಾಧನೆ ಮಾಡಿವೆ. ಬಿಜೆಪಿ ಈ ರಾಜ್ಯದಲ್ಲಿ 17 ಸ್ಥಾನಗಳನ್ನು ಗೆದ್ದರೆ, ಜೆಡಿಯು 16 ಸ್ಥಾನಗಳಲ್ಲಿ ವಶಕ್ಕೆ ಪಡೆದಿದೆ. ಹೀಗಾಗಿ ನಿತೀಶ್ ಕುಮಾರ್ ಎನ್‌ಡಿಎ ಮೈತ್ರಿ ಕೂಟದಲ್ಲಿ ದೊಡ್ಡ ಹುದ್ದೆಯ ಮೇಲೆ ಕಣ್ಣು ನೆಟ್ಟಿದ್ದಾರೆ.












Click it and Unblock the Notifications