ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧೆ: ಬಿಹಾರ ಸಿಎಂ ನಿತೀಶ್ ಪ್ರತಿಕ್ರಿಯೆ ಏನು?

|
Google Oneindia Kannada News

ಪಟ್ನಾ, ಜೂನ್ 14: ಮುಂದಿನ ತಿಂಗಳು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ನಿತೀಶ್ ಕುಮಾರ್ ಅವರನ್ನು ನಿಲ್ಲಿಸಲಾಗುತ್ತದೆ ಎಂಬ ಸುದ್ದಿ ಅಲ್ಲಲ್ಲಿ ಕೇಳಿಬರುತ್ತಿದೆ. ಆದರೆ, ಬಿಹಾರ ಮುಖ್ಯಮಂತ್ರಿ ನಿತೀಶ್ ಈ ಸುದ್ದಿಯನ್ನು ಅಲ್ಲಗಳೆದಿದ್ದು, ತಾನು ರಾಷ್ಟ್ರಪತಿ ಸ್ಥಾನಕ್ಕೆ ರೇಸ್‌ನಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Recommended Video

Nitish Kumar ಮುಂದಿನ President ಆಗ್ತಾರಾ ? | *Politics | OneIndia Kannada

ತಮ್ಮ ವಾರದ ಜನತಾ ದರ್ಶನ ಕಾರ್ಯಕ್ರಮದ ವೇಳೆ ಮಾಧ್ಯಮಗಳ ಪ್ರಶ್ನೆಯೊಂದಕ್ಕೆ ಉತ್ತರಿಸಿದ ನಿತೀಶ್ ಕುಮಾರ್, "ಮುಂದಿನ ರಾಷ್ಟ್ರಪತಿಯಾಗುವ ಪೈಪೋಟಿಯಲ್ಲಿ ನಾನಿಲ್ಲ. ಬಿಹಾರ ಬಿಟ್ಟು ಎಲ್ಲೂ ಹೋಗಲ್ಲ. ಈ ವರದಿ ಬರೀ ವದಂತಿ ಅಷ್ಟೇ," ಎಂದು ಹೇಳಿದರು.

ರಾಷ್ಟ್ರಪತಿ ಚುನಾವಣೆ ಸ್ಪರ್ಧೆಗಿಳಿದ ಲಾಲೂ, ಇದು ರಿಯಲ್ಲೂ!ರಾಷ್ಟ್ರಪತಿ ಚುನಾವಣೆ ಸ್ಪರ್ಧೆಗಿಳಿದ ಲಾಲೂ, ಇದು ರಿಯಲ್ಲೂ!

ನಾಲ್ಕು ತಿಂಗಳ ಹಿಂದೆಯೇ ಮಹಾರಾಷ್ಟ್ರದ ಎನ್‌ಸಿಪಿ ಮುಖಂಡ ನವಾಬ್ ಮಲಿಕ್ ನಿತೀಶ್ ಕುಮಾರ್ ರಾಷ್ಟ್ರಪತಿಯಾಗಬೇಕು ಎಂಬ ಮಾತುಗಳನ್ನು ಆಡಿದ್ದರು. ಬಿಜೆಪಿ ಸಖ್ಯ ತೊರೆದರೆ ರಾಷ್ಟ್ರಪತಿ ಸ್ಥಾನಕ್ಕೆ ನಿತೀಶ್ ಕುಮಾರ್ ಅವರಿಗೆ ಎನ್‌ಸಿಪಿ ಬೆಂಬಲ ನೀಡುತ್ತದೆ ಎಂದು ನವಾಬ್ ಮಲಿಕ್ ಅಗ ಹೇಳಿದ್ದರು.

Nitish Kumar Says He Is Not In Race For President Post

ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಕಳೆದ ವಾರ ಘೋಷಣೆ ಮಾಡಿದೆ. ಅದಾದ ಬೆನ್ನಲ್ಲೇ ಬಿಹಾರದ ಗ್ರಾಮೀಣಾಭಿವೃದ್ಧಿ ಸಚಿವ ಶ್ರವಣ್ ಕುಮಾರ್ ಅವರು ರಾಷ್ಟ್ರಪತಿ ಸ್ಥಾನಕ್ಕೆ ನಿತೀಶ್ ಕುಮಾರ್ ಒಳ್ಳೆಯ ಅಭ್ಯರ್ಥಿ ಎಂದು ಅಭಿಪ್ರಾಯಪಟ್ಟಿದ್ದರು.

"ಒಬ್ಬ ಬಿಹಾರಿಗನಾಗಿ ನನಗೆ ನಿತೀಶ್ ಕುಮಾರ್ ಮುಂದಿನ ರಾಷ್ಟ್ರಪತಿ ಆಗಬೇಕೆಂಬ ಆಸೆ ಇದೆ. ಅವರು ರಾಷ್ಟ್ರಪತಿ ಸ್ಥಾನದ ಆಕಾಂಕ್ಷಿಯಲ್ಲದಿದ್ದರೂ ಅವರನ್ನು ಆ ಸ್ಥಾನದಲ್ಲಿ ನೋಡಲು ಪ್ರತಿಯೊಬ್ಬರೂ ಬಯಸುತ್ತಾರೆ. ರಾಷ್ಟ್ರಪತಿ ಸ್ಥಾನಕ್ಕೆ ಅವರೇ ಸೂಕ್ತವಾಗಿದ್ದು ಅದರ ಜವಾಬ್ದಾರಿಯನ್ನು ಚೆನ್ನಾಗಿ ಹೊರಬಲ್ಲರು" ಎಂದು ಬಿಹಾರದ ಸಚಿವ ಶ್ರವಣ್ ಕುಮಾರ್ ತಿಳಿಸಿದ್ದರು.

Nitish Kumar Says He Is Not In Race For President Post

ಲಾಲೂ ಹೆಸರು:
ಇದೇ ವೇಳೆ, ರಾಷ್ಟ್ರಪತಿ ಸ್ಥಾನಕ್ಕೆ ಲಾಲೂ ಪ್ರಸಾದ್ ಯಾದವ್ ಹೆಸರು ಕೇಳಿಬಂದಿದೆ. ಆದರೆ, ಇದು ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಅಲ್ಲ, ಬದಲಾಗಿ ಅವರದೇ ಹೆಸರು ಹೊಂದಿರುವ ಇನ್ನೊಬ್ಬ ವ್ಯಕ್ತಿ. ಬಿಹಾರದ ಸಾರನ್ ಜಿಲ್ಲೆಯ 42 ವರ್ಷದ ಲಾಲೂ ಪ್ರಸಾದ್ ಯಾದವ್, ಕಳೆದ ಬಾರಿಯ ರಾಷ್ಟ್ರಪತಿ ಚುನಾವಣೆಯಲ್ಲೂ ಸ್ಪರ್ಧೆ ಮಾಡಲು ಹೊರಟಿದ್ದರು. ಅದರೆ, ಸೂಕ್ತ ಬೆಂಬಲಿಗರ ಕೊರತೆಯಿಂದಾಗಿ ಅವರ ನಾಮಪತ್ರ ತಿರಸ್ಕೃತಗೊಂಡಿತ್ತು. ಈ ಬಾರಿ ತನ್ನ ನಾಮಪತ್ರಕ್ಕೆ ಮಾನ್ಯತೆ ಸಿಗುತ್ತದೆ ಎಂದು ಆಶಿಸಿರುವ ಅವರು ದಿಲ್ಲಿಗೆ ಹೋಗಿ ನಾಮಪತ್ರ ಸಲ್ಲಿಸಲಿದ್ದಾರೆ.

ಚುನಾವಣಾ ಆಯೋಗ ಪ್ರಕಟಿಸಿರುವ ಪ್ರಕಾರ ರಾಷ್ಟ್ರಪತಿ ಚುನಾವಣೆ ಜುಲೈ 18ರಂದು ನಡೆಯಲಿದೆ. ಜುಲೈ 21ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ದೇಶದ ಎಲ್ಲಾ ರಾಜ್ಯಗಳ ಸಂಸದರು, ಶಾಸಕರು ಸೇರಿ ಒಟ್ಟು 4,809 ಮಂದಿ ಮತದಾನದ ಹಕ್ಕು ಹೊಂದಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
Bihar Chief Minister Nitish Kumar categorically denied the reports of him in the race for Presidential poll to be held next month. He said he will go anywhere from Bihar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X