Get Updates
Get notified of breaking news, exclusive insights, and must-see stories!

INDIA ಮೈತ್ರಿಯ 'ಮಾಧ್ಯಮ ಬಹಿಷ್ಕಾರ' ನಿರ್ಧಾರ ಉಲ್ಲಂಘಿಸಿದ ನಿತಿಶ್ ಕುಮಾರ್: ಬಿಜೆಪಿ

ಬೆಂಗಳೂರು, ಸೆಪ್ಟಂಬರ್ 17: ಕೇಂದ್ರದ ವಿರೋಧ ಪಕ್ಷಗಳು ಕೂಡಿ INDIA ಮೈತ್ರಿ ಕೂಟ ರಚನೆ ಮಾಡಿವೆ. ಇದೀಗ ದೂರದರ್ಶನದ 14 ಸುದ್ದಿ ನಿರೂಪಕರ ಕಾರ್ಯಕ್ರಮಗಳನ್ನು ಇಂಡಿಯಾ ಬಹಿಷ್ಕರಿಸಿದೆ. ಇತ್ತ ಮೈತ್ರಿಕೂಟದ ಇನ್ನೋರ್ವ ನಾಯಕ ಬಿಹಾರ ಸಿಎಂ ನಿತಿಶ್ ಕುಮಾರ್ ಅವರು ಬಹಿಷ್ಕಾರ ವಿಚಾರ ಬಗ್ಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಈ ಕಾರಣಕ್ಕೆ ಇಂಡಿಯಾ ಪಕ್ಷಗಳ ಬಗ್ಗೆ ಬಿಜೆಪಿ ವ್ಯಂಗ್ಯವಾಡಿದೆ.

ಈ ಕುರಿತು ನಿತಿಶ್ ಕುಮಾರ್ ಹೇಳಿಕೆ ವಿಡಿಯೋ ಪೋಸ್ಟ್ ಮಾಡಿರುವ ಬಿಜೆಪಿ ಮೈತ್ರಿ ಆಡಳಿತ ಬಗ್ಗೆ ಲೇವಡಿ ಮಾಡಿದೆ. I.N.D.I ಮೈತ್ರಿಯು ವಿರೋಧಾಭಾಸಗಳು ಮತ್ತು ಗೊಂದಲಗಳ ಮೈತ್ರಿಗಿಂತ ಹೆಚ್ಚೇನೂ ಅಲ್ಲ. ರಾಹುಲ್ ಗಾಂಧಿ ಅವರ ಅಹಂಕಾರವನ್ನು ತೃಪ್ತಿಪಡಿಸಲು, ಕಾಂಗ್ರೆಸ್ ಪತ್ರಕರ್ತರನ್ನು ಬಹಿಷ್ಕರಿಸುವ ನಿರ್ಣಯವನ್ನು ಮುಂದಿಟ್ಟಿದೆ ಎಂದು ಹೇಳಿದೆ.

Nitish Kumar Publicly Rejects Congress Idea of Media Boycott Showing Congress Its Place, BJP slams

ಈ ಬಹಿಷ್ಕಾರ ನಿರ್ಣಯವನ್ನು ಸಮಾಜವಾದಿ ಪಕ್ಷವು ತಮ್ಮ ವಕ್ತಾರರೊಬ್ಬರನ್ನು 14 ಸುದ್ದಿ ನಿರೂಪಕರ ಕಾರ್ಯಕ್ರಮಕ್ಕೆ ಕಳಹಿಸುವ ಮೂಲಕ ಬಹಿರಂಗವಾಗಿ ಉಲ್ಲಂಘಿಸುತ್ತದೆ. ಈಗ, ಬಿಹಾರ ಸಿಎಂ ಅವರು ನಿತೀಶ್ ಕುಮಾರ್ ಅವರು ಕಾಂಗ್ರೆಸ್ ಹೇಳಿರುವ ಸುದ್ದಿ ಸಂಪಾದಕರ ಬಹಿಷ್ಕಾರ ಕಲ್ಪನೆಯನ್ನು ಸಾರ್ವಜನಿಕವಾಗಿ ತಿರಸ್ಕರಿಸಿದ್ದಾರೆ ಎಂದು ತಿಳಿಸಿದೆ.

ಇಂಡಿಯಾ ಮೈತ್ರಿ ಕೂಟದಲ್ಲಿ ತಮ್ಮ ಸ್ವಂತ ನಿರ್ಣಯಗಳನ್ನು ಅನುಸರಿಸಲು ಒಬ್ಬರಿಗೊಬ್ಬರು ಮನವೊಲಿಸಲು ಸಾಧ್ಯವಾಗದಿರುವಾಗ ಸ್ವಾರ್ಥಿ ಸೋತವರ ಈ ಒಕ್ಕೂಟವು ಮುನ್ನಡೆಸುವುದನ್ನು ಹೇಗೆ ನಿರೀಕ್ಷಿಸಬಹುದಾಗಿದೆ ಎಂದು ಬಿಜೆಪಿ ಕುಟುಕಿದೆ.

ಮಾಧ್ಯಮಗಳಿಗೆ ನಿತಿಶ್ ಕುಮಾರ್ ಬೆಂಬಲ

ಇತ್ತೀಚೆಗೆ ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ ಅವರು ಇಂಡಿಯಾ ಮೈತ್ರಿ ಕೂಟದ ಮಾಧ್ಯಮಗಳ ಬಹಿಷ್ಕಾರ ಬಗ್ಗೆ ಪ್ರಶ್ನೆ ಕೇಳಿದಾಗ ಈ ಬಗ್ಗೆ ನನಗೆ ಯಾವ ಐಡಿಯಾ ಇಲ್ಲ ಎಂದು ತಿಳಿಸಿದ್ದಾರೆ. ನಾನು ಮಾಧ್ಯಮಗಳನ್ನು ಬೆಂಬಲಿಸುತ್ತೇನೆ ಎಂದು ತಿಳಿಸಿದ್ದಾರೆ. ಈ ಹೇಳಿಕೆ ಇದೀಗ ಇಂಡಿಯಾ ಕೂಟಕ್ಕೆ ತಲೆನೋವಾಗಿ ಪರಿಣಮಿಸಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+