ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಸ್ ಟಿ ಜಾರಿ: ನಿತೀಶ್ ಕುಮಾರ್, ಲಾಲು ಪ್ರಸಾದ್ ಮತ್ತೆ ಭಿನ್ನರಾಗ

ಸರಕು ಮತ್ತು ಸೇವಾ ತೆರಿಗೆ ಬೆಂಬಲ ವಿಚಾರದಲ್ಲಿ ಲಾಲು ಮತ್ತು ನಿತೀಶ್ ಕುಮಾರ್ ನಡುವೆ ಭಿನ್ನಾಭಿಪ್ರಾಯ. ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿ. ಲಾಲು ಪ್ರಸಾದ್ ಆರ್ ಜಿಡಿ ಪಕ್ಷದ ನಾಯಕ. ಜಿಎಸ್ ಟಿ ಪರವಾಗಿ ನಿತೀಶ್ ಇದ್ದರೆ, ಲಾಲು ಅದಕ್ಕೆ ವಿರ

|
Google Oneindia Kannada News

ಪಾಟ್ನಾ, ಜೂನ್ 30: ಬಿಹಾರದಲ್ಲಿ ಅಸ್ತಿತ್ವದಲ್ಲಿರುವ ಸಮ್ಮಿಶ್ರ ಸರ್ಕಾರದ ರೂವಾರಿಗಳಾದ ಅಲ್ಲಿನ ಮುಖ್ಯಮಂತ್ರಿ ಹಾಗೂ ಜೆಡಿಯು ಪಕ್ಷದ ನಾಯಕ ನಿತೀಶ್ ಕುಮಾರ್ ಹಾಗೂ ಆರ್ ಜೆಡಿ ಪಕ್ಷದ ನಾಯಕ ಲಾಲು ಪ್ರಸಾದ್ ಯಾದವ್ ರಾಜಕೀಯ ಕಾರಣಗಳಿಗಾಗಿ ಈಗ ಮತ್ತೊಮ್ಮೆ ಪರಸ್ಪರ ಭಿನ್ನರಾಗ ಹಾಡಲಾರಂಭಿಸಿದ್ದಾರೆ.

ಜಿಎಸ್ ಟಿ: ತೆರಿಗೆದಾರರ 10 ಪ್ರಶ್ನೆಗಳಿಗೆ ನಮ್ಮ ಉತ್ತರಜಿಎಸ್ ಟಿ: ತೆರಿಗೆದಾರರ 10 ಪ್ರಶ್ನೆಗಳಿಗೆ ನಮ್ಮ ಉತ್ತರ

ಜುಲೈ 1ರಿಂದ ಜಿಎಸ್ ಟಿ ಜಾರಿಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಜೂನ್ 30ರ ಮಧ್ಯರಾತ್ರಿಯಂದು ವಿಶೇಷ ಸಂಸತ್ ಅಧಿವೇಶನ ಕರೆದಿರುವ ಕೇಂದ್ರ ಸರ್ಕಾರದ ಆಹ್ವಾನವನ್ನು ಲಾಲು ಪ್ರಸಾದ್ ತಿರಸ್ಕರಿಸಿದ್ದಾರೆ. ಆದರೆ, ಇದೇ ವೇಳೆ ಕೇಂದ್ರದ ಆಹ್ವಾನವನ್ನು ನಿತೀಶ್ ಕುಮಾರ್ ಸ್ವಾಗತಿಸಿದ್ದಾರೆ. ಇದು ಇವರಿಬ್ಬರ ರಾಜಕೀಯ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.

Nitish And Lalu On Opposite Sides On GST

ಇದಲ್ಲದೆ, ನಿತೀಶ್ ಕುಮಾರ್ ಅವರು ಜಿಎಸ್ ಟಿಯನ್ನು ತಾವು ಬೆಂಬಲಿಸುವುದಾಗಿ ತಿಳಿಸಿದ್ದಾರೆ. ಆದರೆ, ಲಾಲು ಅವರು ಜಿಎಸ್ ಟಿ ವಿರೋಧಿಸಿದ್ದಾರೆ.

ಇತ್ತೀಚೆಗೆ, ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿಯಾಗಿರುವ ರಾಮ್ ನಾಥ್ ಕೋವಿಂದ್ ಅವರನ್ನು ಬೆಂಬಲಿಸುವ ವಿಚಾರದಲ್ಲಿ ಇಬ್ಬರೂ ನಾಯಕರೂ ಭಿನ್ನ ಅಭಿಪ್ರಾಯಗಳನ್ನು ತಳೆದಿದ್ದರು.

GST ಗೊಂದಲ: ಜುಲೈ 1ರಿಂದ ಹೋಟೆಲ್ ತಿಂಡಿ ಗ್ರಾಹಕರಿಗೆ ಭಾರ GST ಗೊಂದಲ: ಜುಲೈ 1ರಿಂದ ಹೋಟೆಲ್ ತಿಂಡಿ ಗ್ರಾಹಕರಿಗೆ ಭಾರ

ನಿತೀಶ್ ಅವರು ಕೋವಿಂದ್ ಅವರನ್ನು ಬೆಂಬಲಿಸುವುದಾಗಿ ಹೇಳಿದ್ದರೆ, ಲಾಲು ಪ್ರಸಾದ್ ಅವರು ಕಾಂಗ್ರೆಸ್ ನೇತೃತ್ವದ ಯುಪಿಎ ಅಭ್ಯರ್ಥಿಯಾದ ಮೀರಾ ಕುಮಾರ್ ಅವರನ್ನು ಬೆಂಬಲಿಸಬೇಕೆಂದು ಹಠ ಹಿಡಿದಿದ್ದರು. ಆದರೆ, ನಿತೀಶ್ ತಮ್ಮ ನಿಲುವು ಬದಲಿಸಿರಲಿಲ್ಲ.

ಆದರೀಗ, ಈ ಇಬ್ಬರ ನಡುವೆ ಮತ್ತೊಮ್ಮೆ ಅಂಥದ್ದೇ ಭಿನ್ನ ನಿಲುವುಗಳೂ ಹೊರಹೊಮ್ಮಿವೆ.

English summary
Bihar Chief Minister Nitish Kumar and ally Lalu Yadav have found a new point of disagreement regarding GST.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X