ಕೊರೊನಾ ವೈರಸ್ ಗುಣಪಡಿಸಲು ನಿತ್ಯಾನಂದ ಸರಳ ಸೂತ್ರ!
ಬೆಂಗಳೂರು, ಫೆಬ್ರವರಿ 06: ದೇಶ ಬಿಟ್ಟು ಪರಾರಿಯಾಗಿರುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ವಿಶ್ವವನ್ನೇ ಆತಂಕಕ್ಕೆ ತಳ್ಳಿರುವ ಕೊರೊನಾ ವೈರಸ್ ಅನ್ನು ಮಣಿಸಲು ಸರಳ ಸೂತ್ರವೊಂದನ್ನು ಕಂಡುಹಿಡಿದಿದ್ದಾರೆ.
ಪಠಣ ಮಾಡಿ ಅದರಿಂದ ಧನಾತ್ಮಕ ಶಕ್ತಿ ಹುಟ್ಟುವಂತೆ ಮಾಡಿ ಆ ಮೂಲಕ ಕೊರೊನಾ ವೈರಸ್ ಅನ್ನು ವಿಶ್ವದಿಂದಲೇ ಹೊಡೆದೋಡಿಸುವುದಾಗಿ ನಿತ್ಯಾನಂದ ಹೇಳಿದ್ದಾರೆ.
ನಿತ್ಯಾನಂದ ಅವರ ಅಧಿಕೃತ ಫೇಸ್‌ಬುಕ್ ಖಾತೆ 'ದಿ ಅವತಾರ್ ಕ್ಲಿಕ್ಸ್' ನಲ್ಲಿ ಈ ಬಗ್ಗೆ ವಿಡಿಯೋ ಪೋಸ್ಟ್ ಮಾಡಿರುವ ನಿತ್ಯಾನಂದ, 'ಓಂ ನಿತ್ಯಾನಂದ ಪರಮ ಶಿವೋಹಂ' ಎಂದು ಸತತ 48 ಗಂಟೆ ಪಠಣ ಮಾಡಿ ಧನಾತ್ಮಕ ಆಧ್ಯಾತ್ಮಿಕ ಶಕ್ತಿ ಉತ್ಪತ್ತಿಯಾಗುವಂತೆ ಮಾಡಿ ಅದರ ಮೂಲಕ ಕೊರೊನಾ ವೈರಸ್ ಅನ್ನು ಗುಣಪಡಿಸಬಹುದು ಎಂದು ವಿಡಿಯೋ ದಲ್ಲಿ ಹೇಳಿದ್ದಾರೆ.

ಫೆಬ್ರವರಿ 7 ಮತ್ತು ಅಂತರರಾಷ್ಟ್ರೀಯ ಸಮಯ 9 ಪಿ.ಎಂ ಗೆ ಪ್ರಾರಂಭವಾಗುವ ಪಠಣ ಫೆಬ್ರವರಿ 9 ರ ವರೆಗೆ ನಡೆಯಲಿದೆ. ಇದರಲ್ಲಿ ಸಕಲರೂ ಭಾಗವಹಿಸಿ ಎಂದು ನಿತ್ಯಾನಂದ ಕರೆ ನೀಡಿದ್ದಾರೆ.
ನಿತ್ಯಾನಂದ ಗೆ ನೀಡಿದ್ದ ಜಾಮೀನನ್ನು ರದ್ದು ಮಾಡಲಾಗಿದ್ದು, ಅವರ ವಿರುದ್ಧ ಬ್ಲೂ ಕಾರ್ನರ್ ನೊಟೀಸ್ ಹೊರಡಿಸಲಾಗಿದೆ. ಪೊಲೀಸರು ನಿತ್ಯಾನಂದ ನನ್ನು ಬಂಧಿಸಲು ಹಲವು ಯತ್ನಗಳನ್ನು ಮಾಡಿದ್ದಾರೆ.












Click it and Unblock the Notifications