NIT ವಾರಂಗಲ್ ಕ್ಯಾಂಪಸ್ ಸೆಲೆಕ್ಷನ್: 1.27 ಕೋಟಿ ರೂ. ಬಂಪರ್ ಪ್ಯಾಕೇಜ್ ಪಡೆದ ವಿದ್ಯಾರ್ಥಿ!

ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್‌ಐಟಿ) ವಾರಂಗಲ್ 2025-26ನೇ ಸಾಲಿನ ಉದ್ಯೋಗ ನೇಮಕಾತಿ ಪ್ರಕ್ರಿಯೆಯಲ್ಲಿ ಅತ್ಯುತ್ತಮ ಸಾಧನೆ ದಾಖಲಿಸಿದೆ. ಪ್ರಸಕ್ತ ಸಾಲಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಶೇಕಡಾ 93.75 ರಷ್ಟು ಮಂದಿ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಬಾರಿಯ ಪ್ಲೇಸ್‌ಮೆಂಟ್‌ನ ಪ್ರಮುಖ ಆಕರ್ಷಣೆಯೆಂದರೆ, ಸಂಸ್ಥೆಯ ವಿದ್ಯಾರ್ಥಿಯೊಬ್ಬರು ವಾರ್ಷಿಕ 1.27 ಕೋಟಿ ರೂ.ಗಳ ಬೃಹತ್ ದೇಶೀಯ ಪ್ಯಾಕೇಜ್ ಪಡೆದುಕೊಂಡಿದ್ದಾರೆ. ಇದು ಎನ್‌ಐಟಿ ವಾರಂಗಲ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತದ ಆಫರ್ ಆಗಿದೆ.

NIT Warangal

ಎನ್‌ಐಟಿ ವಾರಂಗಲ್ ಯುಜಿ ಪ್ಲೇಸ್‌ಮೆಂಟ್ ವಿವರ

ಕಂಪ್ಯೂಟರ್ ಸೈನ್ಸ್ ಅಂಡ್ ಎಂಜಿನಿಯರಿಂಗ್ (ಸಿಎಸ್‌ಇ) ವಿಭಾಗದ ವಿದ್ಯಾರ್ಥಿ ನಯನ್ ತ್ಯಾಗಿ ಅವರು 1.27 ಕೋಟಿ ರೂ. ದಾಖಲೆಯ ಪ್ಯಾಕೇಜ್ ಪಡೆದು ಗಮನ ಸೆಳೆದಿದ್ದಾರೆ. ಮತ್ತೊಂದೆಡೆ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್ (ಇಸಿಇ) ವಿಭಾಗದ ನಶ್ವಾನ್ ಎಂಬ ವಿದ್ಯಾರ್ಥಿ 1 ಕೋಟಿ ರೂ. ಪ್ಯಾಕೇಜ್ ಪಡೆದುಕೊಂಡಿದ್ದಾರೆ.

NEET ಎಕ್ಸಾಮೇ ಅಂತಿಮವಲ್ಲ ಎಂದು ಜಗತ್ತಿಗೆ ತೋರಿಸಿದ ತೀರ್ಥಹಳ್ಳಿಯ ಕುವರಿ: ಇಂದು ರೋಲ್ಸ್ ರಾಯ್ಸ್‌ನಲ್ಲಿ ಕೈತುಂಬಾ ಸಂಬಳ
NEET ಎಕ್ಸಾಮೇ ಅಂತಿಮವಲ್ಲ ಎಂದು ಜಗತ್ತಿಗೆ ತೋರಿಸಿದ ತೀರ್ಥಹಳ್ಳಿಯ ಕುವರಿ: ಇಂದು ರೋಲ್ಸ್ ರಾಯ್ಸ್‌ನಲ್ಲಿ ಕೈತುಂಬಾ ಸಂಬಳ

ಅಧಿಕೃತ ಮಾಹಿತಿಯ ಪ್ರಕಾರ, ಈ ವರ್ಷದ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆದಿದ್ದ 704 ಯುಜಿ ವಿದ್ಯಾರ್ಥಿಗಳಲ್ಲಿ 660 ವಿದ್ಯಾರ್ಥಿಗಳು ಉದ್ಯೋಗ ಪಡೆದುಕೊಂಡಿದ್ದಾರೆ. ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ 6 ವಿದ್ಯಾರ್ಥಿಗಳು 70 ಲಕ್ಷ ರೂ.ಗಿಂತ ಹೆಚ್ಚಿನ ಆಫರ್ ಪಡೆದಿದ್ದರೆ, 27 ವಿದ್ಯಾರ್ಥಿಗಳು 50 ಲಕ್ಷ ರೂ.ಗಿಂತ ಹೆಚ್ಚಿನ ಪ್ಯಾಕೇಜ್ ಪಡೆದಿದ್ದಾರೆ.

130ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ 30 ಲಕ್ಷ ರೂ. ಮೇಲ್ಪಟ್ಟ ಆಫರ್ ಸಿಕ್ಕಿದ್ದರೆ, 720ಕ್ಕೂ ಹೆಚ್ಚು ವಿದ್ಯಾರ್ಥಿಗಳು 10 ಲಕ್ಷ ರೂ. ಮೇಲ್ಪಟ್ಟ ಪ್ಯಾಕೇಜ್ ಪಡೆದಿದ್ದಾರೆ. ಯುಜಿ ವಿದ್ಯಾರ್ಥಿಗಳ ಸರಾಸರಿ ವಾರ್ಷಿಕ ಪ್ಯಾಕೇಜ್ 18.54 ಲಕ್ಷ ರೂ.ಗಳಷ್ಟಿದ್ದು, ಮೀಡಿಯನ್ ಪ್ಯಾಕೇಜ್ 15 ಲಕ್ಷ ರೂ. ಆಗಿದೆ.

ಸ್ನಾತಕೋತ್ತರ ವಿದ್ಯಾರ್ಥಿಗಳ ಸಾಧನೆ

ಪದವಿ ವಿದ್ಯಾರ್ಥಿಗಳ ಜೊತೆಗೆ, ಸ್ನಾತಕೋತ್ತರ ವಿಭಾಗದಲ್ಲೂ ಅದ್ಭುತ ಫಲಿತಾಂಶ ಕಂಡುಬಂದಿದೆ. ಒಟ್ಟು 860 ಸ್ನಾತಕೋತ್ತರ ವಿದ್ಯಾರ್ಥಿಗಳ ಪೈಕಿ 677 ವಿದ್ಯಾರ್ಥಿಗಳು ಉದ್ಯೋಗವನ್ನು ಪಡೆದುಕೊಂಡಿದ್ದು, ಪ್ಲೇಸ್‌ಮೆಂಟ್ ಪ್ರಮಾಣವು ಶೇಕಡಾ 78.72 ರಷ್ಟಿದೆ. ಪಿಜಿ ವಿದ್ಯಾರ್ಥಿಗಳಿಗೆ ಸಿಕ್ಕಿರುವ ಅತಿ ಹೆಚ್ಚು ಮೊತ್ತದ ಪ್ಯಾಕೇಜ್ 64.7 ಲಕ್ಷ ರೂ. ಆಗಿದ್ದು, ಸರಾಸರಿ ಪ್ಯಾಕೇಜ್ 12.13 ಲಕ್ಷ ರೂ. ಆಗಿದೆ.

ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಭಾರಿ ಬೇಡಿಕೆ

ಈ ಬಾರಿ 360ಕ್ಕೂ ಹೆಚ್ಚು ಕಂಪನಿಗಳು ಕ್ಯಾಂಪಸ್ ನೇಮಕಾತಿಯಲ್ಲಿ ಭಾಗವಹಿಸಿದ್ದವು. ಇದು ಕಳೆದ ವರ್ಷಗಳಿಗಿಂತ ಅಂದರೆ 2025ರಲ್ಲಿ 290, 2024ರಲ್ಲಿ 305 ಕಂಪನಿಗಳು ಭಾಗವಹಿಸಿದ್ದವು. ಆದರೆ ಈ ಬಾರಿ ತುಂಬ ಏರಿಕೆಯನ್ನು ಕಂಡಿದೆ. ವಿದ್ಯಾರ್ಥಿಗಳು ವಿವಿಧ ವಲಯಗಳಲ್ಲಿ ಅತ್ಯುತ್ತಮ ಉದ್ಯೋಗಾವಕಾಶಗಳನ್ನು ಪಡೆದಿದ್ದಾರೆ. ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಕ್ಷೇತ್ರದಲ್ಲಿ 410 ಆಫರ್‌ಗಳು, ಕೋರ್ ಎಂಜಿನಿಯರಿಂಗ್‌ನಲ್ಲಿ 480 ಆಫರ್‌ಗಳು ಮತ್ತು ಅನಾಲಿಟಿಕ್ಸ್ ವಲಯದಲ್ಲಿ 230 ಆಫರ್‌ಗಳು ಲಭಿಸಿವೆ.

ಬಿಟ್ಸ್ ಪಿಲಾನಿ ಪದವೀಧರೆಗೆ 30 ಲಕ್ಷದ ಕೆಲಸಕ್ಕಿಂತ 'ಡಾಕ್ಟರ್' ಪಟ್ಟವೇ ಹೆಚ್ಚಾಯ್ತು! 30ನೇ ವಯಸ್ಸಿಗೆ NEET ಪಾಸ್ ಮಾಡಿದ ಆಕೃತಿ
ಬಿಟ್ಸ್ ಪಿಲಾನಿ ಪದವೀಧರೆಗೆ 30 ಲಕ್ಷದ ಕೆಲಸಕ್ಕಿಂತ 'ಡಾಕ್ಟರ್' ಪಟ್ಟವೇ ಹೆಚ್ಚಾಯ್ತು! 30ನೇ ವಯಸ್ಸಿಗೆ NEET ಪಾಸ್ ಮಾಡಿದ ಆಕೃತಿ

ಎನ್‌ಐಟಿ ವಾರಂಗಲ್ ನಿರ್ದೇಶಕ ಬಿದ್ಯಾಧರ್ ಸುಬುಧಿ ಅವರು ಈ ಯಶಸ್ಸಿಗೆ ಸಂಸ್ಥೆ ಹಾಗೂ ಸೆಂಟರ್ ಫಾರ್ ಕರಿಯರ್ ಪ್ಲಾನಿಂಗ್ ಅಂಡ್ ಡೆವಲಪ್‌ಮೆಂಟ್‌ನ ಸಾಂಘಿಕ ಪ್ರಯತ್ನವೇ ಕಾರಣ ಎಂದಿದ್ದಾರೆ. ಶೈಕ್ಷಣಿಕ ಗುಣಮಟ್ಟ, ಕೌಶಲ್ಯ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಪರಿಶ್ರಮವು ಈ ಉತ್ತಮ ಪ್ಲೇಸ್‌ಮೆಂಟ್ ಸಾಧ್ಯವಾಗಿಸಿದೆ. ಆಫ್-ಕ್ಯಾಂಪಸ್ ಪ್ಲೇಸ್‌ಮೆಂಟ್ ಮತ್ತು ಉನ್ನತ ವ್ಯಾಸಂಗಕ್ಕೆ ಹೋಗುವ ವಿದ್ಯಾರ್ಥಿಗಳ ಲೆಕ್ಕಾಚಾರ ಮುಗಿದ ಬಳಿಕ ಈ ಪ್ರಮಾಣ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+