ನಿರ್ಮಲಾ ಸೀತಾರಾಮನ್ ರಿಂದ ಪ್ರತಿದಿನ ಸೇನಾ ಮುಖ್ಯಸ್ಥರ ಭೇಟಿ
ನವದೆಹಲಿ, ಸೆಪ್ಟೆಂಬರ್ 12: ಪ್ರತಿದಿನ ಎಲ್ಲಾ ಮೂರು ಸೇನೆಗಳ ಮುಖ್ಯಸ್ಥರನ್ನು ಭೇಟಿಯಾಗಲು ನೂತನ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನಿರ್ಧರಿಸಿದ್ದಾರೆ.
"ನಾನು ರಕ್ಷಣಾ ನಿರ್ಧಾರಗಳನ್ನು ತೆಗೆದುಕೊಳ್ಳುವ ಉನ್ನತ ಸಮಿತಿ ಡಿಫೆನ್ಸ್ ಅಕ್ವಸಿಷನ್ ಕೌನ್ಸಿಲ್ ನ್ನು ಪ್ರತಿ 15 ದಿನಕ್ಕೊಮ್ಮೆ ಭೇಟಿಯಾಗಲು ನಿರ್ಧರಿಸಿದ್ದೇನೆ," ಎಂದೂ ಇದೇ ಸಂದರ್ಭದಲ್ಲಿ ನಿರ್ಮಲಾ ಸೀತರಾಮನ್ ತಿಳಿಸಿದ್ದಾರೆ. ಈ ಮೂಲಕ ಸೇನೆಗೆ ಸಂಬಂಧಿಸಿದ ಖರೀದಿಗಳನ್ನು ಕಾಲಮಿತಿಯೊಳಗೆ ಪೂರೈಸಲು ಅವರು ಹೊರಟಿದ್ದಾರೆ.

ಇದಲ್ಲದೆ ಪ್ರತ್ಯೇಕವಾಗಿ ರಕ್ಷಣಾ ಕಾರ್ಯದರ್ಶಿಗಳ ಜತೆಯೂ ಪ್ರತಿದಿನ ಸಭೆ ನಡೆಸುವುದಾಗಿ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ..
"ರಕ್ಷಣೆಗೆ ಸಂಬಂಧಿಸಿದ ತಕ್ಷಣದ ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರತಿದಿನ ಬೆಳಿಗ್ಗೆ ಮೂರೂ ಸೇನೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸುವ ಅಭ್ಯಾಸವನ್ನು ಆರಂಭಿಸಲಾಗುತ್ತದೆ. ಇದಲ್ಲದೆ ಪ್ರತ್ಯೇಕವಾಗಿ ಸೇನಾ ಕಾರ್ಯದರ್ಶಿಗಳ ಜತೆಯೂ ಸಭೆ ನಡೆಯಲಿದೆ," ಎಂದು ರಕ್ಷಣಾ ಸಚಿವಾಲಯ ಹೇಳಿದೆ.












Click it and Unblock the Notifications