ಮೋದಿ, ಕೇಜ್ರಿ, ಮುಲಾಯಂ ಭವಿಷ್ಯ ಮೇ 12ಕ್ಕೆ ನಿರ್ಧಾರ

ನವದೆಹಲಿ, ಮೇ 12: ದೇಶದ ಅತ್ಯಂತ ದೀರ್ಘ ಅವಧಿಯ ಹದಿನಾರನೇ ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನ ಸೋಮವಾರ (ಮೇ 12) ಆರಂಭವಾಗಿದೆ. ಒಟ್ಟು 41 ಕ್ಷೇತ್ರಗಳಲ್ಲಿ ಮತದಾನ ಚಾಲ್ತಿಯಲ್ಲಿದೆ.

ಮೂರು ರಾಜ್ಯಗಳ ಸುಮಾರು 6.61 ಕೋಟಿ ಮತದಾರರು ಕಣದಲ್ಲಿರುವ 606 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಇಂದು ನಡೆಯುತ್ತಿರುವ ಮತದಾನದಲ್ಲಿ ದೇಶದ ಗಮನವನ್ನು ತನ್ನತ್ತ ಸೆಳೆದಿರುವ ವಾರಣಾಸಿ ಕ್ಷೇತ್ರ ಕೂಡಾ ಒಂದು.

ಇದುವರೆಗೆ ನಡೆದ ಎಂಟು ಹಂತದ ಮತದಾನದಲ್ಲಿ ಶೇಕಡಾವಾರು 66ರಷ್ಟು ಮತಚಲಾವಣೆಯಾಗಿರುವುದು ಗಮನಾರ್ಹ. ಉತ್ತರಪ್ರದೇಶದ 18, ಪಶ್ಚಿಮ ಬಂಗಾಳದ 17 ಮತ್ತು ಬಿಹಾರದ 6 ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದೆ.

ಕೊನೆಯ ಹಂತದಲ್ಲಿ ಮತದಾರರು ದಾಖಲೆ ಪ್ರಮಾಣದಲ್ಲಿ ಮತದಾನ ಮಾಡಿ, ನೀವೂ ಬನ್ನಿ, ನಿಮ್ಮ ಮನೆಯವರು, ಗೆಳೆಯರನ್ನೂ ಮತ ಹಾಕುವಂತೆ ಮಾಡಿ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ತನ್ನ ಬ್ಲಾಗಿನಲ್ಲಿ ಮನವಿ ಮಾಡಿದ್ದಾರೆ.

ಇಂದು ಆರು ಗಂಟೆಗೆ ಮತದಾನ ಮುಗಿದ ಮೂವತ್ತು ನಿಮಿಷದ ನಂತರ ಮತಗಟ್ಟೆ ಸಮೀಕ್ಷೆ ನಡೆಸಬಹುದಾಗಿದೆ ಎಂದು ಚುನಾವಣಾ ಆಯೋಗ ಈಗಾಗಲೇ ಸ್ಪಷ್ಟನೆ ನೀಡಿದೆ. (ಸಮೀಕ್ಷೆಗೆ ಆಯೋಗ ಗ್ರೀನ್ ಸಿಗ್ನಲ್)

ಕೊನೆಯ ಹಂತದ ಮತದಾನದಲ್ಲಿ ಕಣದಲ್ಲಿರುವ ಪ್ರಮುಖರು

ವಾರಣಾಸಿ (ಉತ್ತರಪ್ರದೇಶ)

ವಾರಣಾಸಿ (ಉತ್ತರಪ್ರದೇಶ)

ಬಿಜೆಪಿ : ನರೇಂದ್ರ ಮೋದಿ
ಆಮ್ ಆದ್ಮಿ : ಅರವಿಂದ್ ಕೇಜ್ರಿವಾಲ್
ಕಾಂಗ್ರೆಸ್ : ಅಜಯ್ ರಾಯ್

ಅಜಂಗಡ (ಉತ್ತರಪ್ರದೇಶ)

ಅಜಂಗಡ (ಉತ್ತರಪ್ರದೇಶ)

ಎಸ್ಪಿ: ಮುಲಾಯಂ ಸಿಂಗ್ ಯಾದವ್
ಬಿಜೆಪಿ: ರಮಾಕಾಂತ್ ಯಾದವ್
ಬಿಎಸ್ಪಿ : ಗುಡ್ಡು ಜಮಾಲಿ
ಕಾಂಗ್ರೆಸ್ : ಅರವಿಂದ್ ಜೈಸ್ವಾಲ್

ಬೆಹ್ರಾಂಪುರ (ಪಶ್ಚಿಮ ಬಂಗಾಳ)

ಬೆಹ್ರಾಂಪುರ (ಪಶ್ಚಿಮ ಬಂಗಾಳ)

ಕಾಂಗ್ರೆಸ್: ಅಧೀರ್ ರಂಜನ್ ಚೌಧುರಿ
ಟಿಎಂಸಿ : ಇಂದ್ರಾನಿಲ್ ಸೇನ್
ಬಿಜೆಪಿ: ಧೇಬಿಸ್ ಅಧಿಕಾರಿ

ದೊಮರಿಯಾಗಂಜ್ (ಉತ್ತರಪ್ರದೇಶ)

ದೊಮರಿಯಾಗಂಜ್ (ಉತ್ತರಪ್ರದೇಶ)

ಬಿಎಸ್ಪಿ: ಮೊಹಮ್ಮದ್ ಮುಖೀಂ
ಬಿಜೆಪಿ: ಜಗದಾಂಬಿಕಾ ಪಾಲ್
ಕಾಂಗ್ರೆಸ್: ವಸುಂಧರಾ ಕುಮಾರಿ
ಎಸ್ಪಿ: ಮಾತಾ ಪ್ರಸಾದ್ ಪಾಂಡೆ

ವೈಶಾಲಿ (ಬಿಹಾರ)

ವೈಶಾಲಿ (ಬಿಹಾರ)

ಆರ್ಜೆಡಿ: ರಘುವಂಶ ಪ್ರಸಾದ್
ಎಲ್ಜೆಪಿ : ರಾಂ ಕಿಶೋರ್ ಸಿಂಗ್
ಜೆಡಿಯು: ವಿಜಯ್ ಕುಮಾರ್ ಸಹಾನಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+