ಜಮ್ಮುವಿನಲ್ಲಿ ಭೀಕರ ದುರಂತ, 9 ಜನ ಸಾವು
ಜಮ್ಮು, ಸೆ.21: ಇಲ್ಲಿನ ರಿಯಾಸಿ ಜಿಲ್ಲೆಯಲ್ಲಿ ಮಿನಿ ಬಸ್ ವೊಂದು ಕಮರಿಗೆ ಬಿದ್ದ ಪರಿಣಾಮ 8 ಜನ ಸ್ಥಳದಲ್ಲೇ ಮೃತಪಟ್ಟಿದ್ದು ಮತ್ತೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಹಲವರಿಗೆ ಗಾಯಗಳಾಗಿರುವ ಘಟನೆ ನಡೆದಿದೆ.
ಶನಿವಾರದ ಅಪ್ಲ್ಡೇಡ್ ಸಮಯ 12.25 : ಜಮ್ಮುವಿನಿಂದ ಸುಮಾರು 68 ಕಿ.ಮೀ ದೂರದಲ್ಲಿರುವ ರಿಯಾಸಿಗೂ 15 ಕಿ.ಮೀ ಮುಂಚೆ ಪನಾಸ ಗಲ್ಲಿಯಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಬಸ್ ದುರಂತದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ 11ಕ್ಕೇರಿದೆ.
ಪನಸಾ ಗ್ರಾಮದಿಂದ ರಿಯಾಸಿ ಪಟ್ಟಣದ ಕಡೆಗೆ ಬಸ್ ಪ್ರಯಾಣಿಸುತ್ತಿತ್ತು. ಹವಾಮಾನ ವೈಪರೀತ್ಯದಿಂದಾಗಿ ಚಾಲಕನಿಗೆ ಬಸ್ ಮೇಲೆ ನಿಯಂತ್ರಣ ತಪ್ಪಿದೆ. ಈ ಸಂದರ್ಭದಲ್ಲಿ ನಲ್ಲಾಹ್ ಬಳಿ ತಿರುವು ರಸ್ತೆಯಲ್ಲಿ ಸಾಗುವಾಗ ಬಸ್ ಸುಮಾರು 300 ಅಡಿ ಆಳದ ಕದಂಕಕ್ಕೆ ಬಿದ್ದಿದೆ.
ಈ ದುರ್ಘಟನೆಯಲ್ಲಿ 8 ಜನ ಸ್ಥಳದಲ್ಲೇ ಮೃತಪಟ್ಟಿದ್ದು ಸುಮಾರು 21 ಜನಕ್ಕೆ ಗಾಯಗಳಾಗಿವೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ. ಶನಿವಾರ ಬೆಳಗ್ಗೆನಿಂದಲೂ ಪ್ರತಿಕೂಲ ಹವಾಮಾನ ಇರುವುದರಿಂದ ಪರಿಹಾರ ಕಾರ್ಯ ವಿಳಂಬವಾಗಿದೆ. ಬಸ್ ಓವರ್ ಲೋಡ್ ಆಗಿದ್ದು ಕೂಡಾ ದುರ್ಘಟನೆಗೆ ಕಾರಣ ಇರಬಹುದು ಎಂದು ಶಂಕಿಸಲಾಗಿದೆ.

ಇನ್ನೊಂದು ಅಪಘಾತದಲ್ಲಿ ಸಾಂಬಾ ಜಿಲ್ಲೆಯ ಜಮ್ಮು ಪಥಾನ್ ಕೋಟ್ ಹೆದ್ದಾರಿಯಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಮಟಡೋರ್ ವಾಹನವೊಂದು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, 29ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.ಈ ಪೈಕಿ 7 ಜನರು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
45 ವರ್ಷ ವಯಸ್ಸಿನ ಮೃತ ವ್ಯಕ್ತಿಯನ್ನು ಜನಕ್ ರಾಜ್ ಎಂದು ಗುರುತಿಸಲಾಗಿದೆ. ಅಖ್ನೂರ್ ನಿಂದ ಥಂಡಿ ಖೊಯ್ ಕಡೆಗೆ ತೆರಳುತ್ತಿದ್ದರು. ಬರಿ ಬ್ರಹ್ಮಣ ಪ್ರದೇಶದ ಆಶ್ರಮದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿತ್ತು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. (ಪಿಟಿಐ)












Click it and Unblock the Notifications