ಪಠಾಣ್ ಕೋಟ್ ವಾಯುನೆಲೆಗೆ ನುಗ್ಗಿದ್ದ ಉಗ್ರರೆಷ್ಟು?
ಬೆಂಗಳೂರು, ಫೆಬ್ರವರಿ 10 : ಪಂಜಾಬಿನ ಪಠಾಣ್ ಕೋಟ್ ವಾಯುನೆಲೆಗೆ ನುಗ್ಗಿದ್ದ ಉಗ್ರರೆಷ್ಟು? ಎಂಬ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ನಡೆಸಲಿದೆ. ವಾಯುನೆಲೆಯಿಂದ ಇಬ್ಬರು ಉಗ್ರರು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ತನಿಖೆ ನಡೆಯಲಿದೆ.
ಎನ್‌ಐಎ ಮುಖ್ಯಸ್ಥ ಶರದ್ ಕುಮಾರ್ ಅವರ ನೇತೃತ್ವದಲ್ಲಿ ಈ ತನಿಖೆ ನಡೆಯಲಿದೆ. ವಾಯುನೆಲೆಗೆ ಒಟ್ಟು 6 ಉಗ್ರರು ನುಗ್ಗಿದ್ದರು ಎಂದು ಅಂದಾಜಿಸಲಾಗಿದೆ. ನಾಲ್ವರು ಉಗ್ರರನ್ನು ಯೋಧರು ಕೊಂದು ಹಾಕಿದ್ದಾರೆ. ಅವರ ಶವಗಳು ಸಿಕ್ಕಿವೆ. ಆದರೆ, ಉಳಿದ ಇಬ್ಬರು ಉಗ್ರರ ಶವಗಳು ಸಿಕ್ಕಿಲ್ಲ. [ಪಠಾಣ್ ಕೋಟ್ ವಾಯುನೆಲೆಯ ವಿಶೇಷತೆಗಳೇನು?]

ವಾಯುನೆಲೆಯಲ್ಲಿ ಮೃತಪಟ್ಟ ಉಗ್ರರಿಂದ 4 ಎಕೆ -47 ರೈಫಲ್ ಮತ್ತು ಮೂರು ಪಿಸ್ತೂಲ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಆದರೆ, ಎರಡನೇ ದಿನ ಇಬ್ಬರು ಉಗ್ರರು ಯೋಧರ ಮೇಲೆ ದಾಳಿ ಮಾಡಿದ್ದಾರೆ ಎಂದು ಶಂಕಿಸಲಾಗಿದ್ದು, ಅವರ ಬಂದೂಕುಗಳು ಸಿಕ್ಕಿಲ್ಲ. [ಪಠಾಣ್ ಕೋಟ್ ಉಗ್ರರ ದಾಳಿ : ಟೈಮ್ ಲೈನ್]
ಇಬ್ಬರು ಉಗ್ರರು ಮೃತಪಟ್ಟ ಸ್ಥಳಕ್ಕೆ ಬೆಂಕಿ ಬಿದ್ದಿದ್ದು ಅಲ್ಲಿ ಸುಟ್ಟ ವಸ್ತುಗಳು ಪತ್ತೆಯಾಗಿವೆ. ಬೂದಿಯಲ್ಲಿ ಕಬ್ಬಿಣದ ತುಂಡುಗಳು ಸಿಕ್ಕಿವೆ. ಈ ಉಗ್ರರು ಸೇನಾ ಸಮವಸ್ತ್ರ ಧರಿಸಿದ್ದರೆ ಎಂಬುದಕ್ಕೆ ನಿಖರವಾದ ಸಾಕ್ಷಿಗಳು ಸಿಕ್ಕಿಲ್ಲ. ಪೊರೆನ್ಸಿಕ್ ತಜ್ಞರು ಬೂದಿಯಲ್ಲಿ ಸಿಕ್ಕ ವಸ್ತುಗಳನ್ನು ಪರಿಶೀಲಿಸುತ್ತಿದ್ದಾರೆ.
ಪೊರೆನ್ಸಿಕ್ ತಜ್ಞರ ವರದಿ ಬಂದ ಬಳಿಕ ಅಂತಿಮ ತೀರ್ಮಾನವನ್ನು ಕೈಗೊಳ್ಳಲು ಎನ್‌ಐಎ ಅಧಿಕಾರಿಗಳ ತಂಡ ನಿರ್ಧರಿಸಿದೆ. ಈ ತನಿಖೆಯಲ್ಲಿ ಸರಿಯಾದ ಸಾಕ್ಷಿಗಳು ಲಭ್ಯವಾಗದಿದ್ದರೆ. ವಾಯುನೆಲೆಗೆ 4 ಉಗ್ರರು ಮಾತ್ರ ನುಗ್ಗಿದ್ದರು ಎಂದು ತೀರ್ಮಾನಕ್ಕೆ ಎನ್‌ಐಎ ಬರಲಿದೆ.
ಜನವರಿ 1 ಮತ್ತು 2ರಂದು ಭಾರತ ಮತ್ತು ಪಾಕಿಸ್ತಾನದ ಗಡಿಭಾಗದಿಂದ ಕೇವಲ 40 ಕಿ.ಮೀ.ದೂರದಲ್ಲಿರುವ ಪಠಾಣ್ ಕೋಟ್ ವಾಯುನೆಲೆ ಮೇಲೆ ಉಗ್ರರ ದಾಳಿ ನಡೆದಿತ್ತು. ಇದು ದೇಶದ ಮಹತ್ವದ ಸೇನಾ ನೆಲೆಯಾಗಿದ್ದು, ವಾಯುಪಡೆಯ ಅತ್ಯುನ್ನತ ಯುದ್ಧ ವಿಮಾನಗಳು, ಹೆಲಿಕಾಪ್ಟರ್‌ಗಳು ಈ ವಾಯುನೆಲೆಯಲ್ಲಿವೆ.












Click it and Unblock the Notifications