ಭಾರತದ ಮುಂದಿನ ರಾಷ್ಟಪತಿ ಯಾರು? ಈ ಮೂವರಿಗೆ ಗೊತ್ತು

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಜೂನ್ 18: ಭಾರತದ ಮುಂದಿನ ರಾಷ್ಟಪತಿ ಯಾರಾಗಲಿದ್ದಾರೆ? ಎಂಬ ಕುತೂಹಲದ ಪ್ರಶ್ನೆಗೆ ಉತ್ತರ ಈ ಮೂವರಿಗೆ ಮಾತ್ರ ಗೊತ್ತಿದೆ. ಅಮಿತ್ ಶಾ, ನರೇಂದ್ರ ಮೋದಿ ಹಾಗೂ ಮೋಹನ್ ಭಾಗ್ವತ್.

ರಾಷ್ಟ್ರಪತಿ ಅಯ್ಕೆ ಹೇಗೆ? ಎಲೆಕ್ಟ್ರೋಲ್ ಕಾಲೇಜ್ ಹೇಗಿದೆ?

ಕೊನೆ ಕ್ಷಣದ ವರೆಗೂ ಬಿಜೆಪಿಯ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರ ಹೆಸರು ಕೇಳಿ ಬಂದಿತ್ತು. ಆದರೆ, ಅಡ್ವಾಣಿ ಅವರು ರಾಷ್ಟ್ರಪತಿಯಾಗಲು ಸಾಧ್ಯವಿಲ್ಲ ಎಂಬುದು ಈಗ ಮನದಟ್ಟಾಗಿದೆ.

Next President of India: Only these three persons know who it is

ಬಿಜೆಪಿಯ ಮೂಲಗಳಿಂದ ಒನ್ಇಂಡಿಯಾಕ್ಕೆ ಲಭ್ಯವಾದ ಮಾಹಿತಿಯಂತೆ ಈ ಮೂವರು ಪ್ರಮುಖರಿಗೆ ಈಗಾಗಲೇ ಮುಂದಿನ ರಾಷ್ಟ್ರಪತಿ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಹೆಸರು ನಿಶ್ಚಿತವಾಗಿದ್ದು, ಭಾಗ್ವತ್ ಅವರು ಬಿಜೆಪಿಯ ಹಿರಿಯ ನಾಯಕರ ಜತೆ ಸಭೆ ಕೂಡಾ ನಡೆಸಿದ್ದಾರೆ.

ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ 'ಎಲೆಕ್ಷನ್ ಕಿಂಗ್'

ಒಟ್ಟು ಮೂರು ಹೆಸರುಗಳು ಅಂತಿಮಗೊಂಡಿದ್ದು, ಅಚ್ಚರಿಯ ಹೆಸರು ಕೂಡಾ ಅದರಲ್ಲಿದೆ. ದಲಿತ ಅಥವಾ ಹಿಂದುಳಿದ ವರ್ಗಕ್ಕೆ ಒತ್ತು ನೀಡಲಿದೆ ಎಂಬ ಆರಂಭಿಕ ವರದಿಗೆ ವ್ಯತಿರಿಕ್ತವಾಗಿ ಹಿಂದುತ್ವಕ್ಕೆ ಹೆಚ್ಚಿನ ಬೆಲೆ ನೀಡಲಿದೆ ಎಂದು ಮಾಹಿತಿ ಸಿಕ್ಕಿದೆ.

ಜುಲೈ 17ಕ್ಕೆ ರಾಷ್ಟ್ರಪತಿ ಚುನಾವಣೆ, 20 ರಂದು ಮತ ಎಣಿಕೆ

ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರನ್ನು ಮುಖ್ಯಮಂತ್ರಿ ಮಾಡಿ ಅಚ್ಚರಿ ಮೂಡಿಸಿದಂತೆ, ಈ ಬಾರಿ ರಾಷ್ಟ್ರಪತಿ ಆಯ್ಕೆಯಲ್ಲೂ ಅಚ್ಚರಿ ಕಾದಿದೆ. ಜುಲೈ 17ರಂದು ರಾಷ್ಟ್ರಪತಿ ಆಯ್ಕೆಯಾಗಿ ಚುನಾವಣೆ ನಡೆಯಲಿದ್ದು, ಜುಲೈ 20ರಂದು ಮತ ಎಣಿಕೆ ನಡೆಯಲಿದೆ. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Only three persons know who will be the next President of India. Names have been doing the rounds since the past two months. This morning the name of L K Advani cropped up yet again, but once again it appeared to be speculative in nature.
Please Wait while comments are loading...