ರಾಷ್ಟ್ರಪತಿ ಚುನಾವಣೆ ಮತ ಲೆಕ್ಕಾಚಾರ, ಕೋವಿಂದ್ ರಿಗೆ ಸುಲಭ ಗೆಲುವು
ನವದೆಹಲಿ, ಜೂನ್ 26: ಮುಂದಿನ ರಾಷ್ಟ್ರಪತಿ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ರಾಮ್ ನಾಥ್ ಕೋವಿಂದ್ ಸುಲಭ ಗೆಲುವು ಸಾಧಿಸಲಿದ್ದಾರೆ. ವಿಪಕ್ಷಗಳ ಜಂಟಿ ಅಭ್ಯರ್ಥಿ ಮೀರಾ ಕುಮಾರ್ ವಿರುದ್ಧ ಸ್ಪರ್ಧಿಸಲಿರುವ ಬಿಹಾರದ ಮಾಜಿ ರಾಜ್ಯಪಾಲರ ಗೆಲುವು ನಿಚ್ಚಳವಾಗಿದೆ.
ಕೋವಿಂದ್ ಶೇಕಡಾ 62 ಮತಗಳನ್ನು ಪಡೆಯಲಿದ್ದಾರೆ. 2012ರಲ್ಲಿ ಪ್ರಣಬ್ ಮುಖರ್ಜಿ ಶೇಕಡಾ 69 ಮತಗಳನ್ನು ಪಡೆದಿದ್ದರು. ಇಷ್ಟು ಮತಗಳನ್ನು ಪಡೆಯಲು ಕೋವಿಂದ್ ರಿಗೆ ಸಾಧ್ಯವಿಲ್ಲವಾದರೂ ಗೆಲುವಿಗೇನೂ ಅಡ್ಡಿಯಿಲ್ಲ.

ಕೋವಿಂದ್ ಅವರು 10,98,903 ಎಲೆಕ್ಟೋರಲ್ ಕಾಲೇಜು ಮತಗಳಲ್ಲಿ ಸುಮಾರು 7 ಲಕ್ಷ ಮತಗಳನ್ನು ಪಡೆಯುವ ಸಾಧ್ಯತೆ ಇದೆ. ವಿಪಕ್ಷಗಳ ಅಭ್ಯರ್ಥಿ ಮೀರಾ ಕುಮಾರ್ ಸುಮಾರು 4 ಲಕ್ಷ ಮತಗಳನ್ನು ಪಡೆಯಲಿದ್ದಾರೆ. ಎಸ್ಪಿ, ಬಿಎಸ್ಪಿ, ಆರ್.ಜೆಡಿ, ಟಿಎಂಸಿ ಮತ್ತು ಸಿಪಿಎಂ ನಂಥ ಪ್ರಾದೇಶಿಕ ಪಕ್ಷಗಳ ಬೆಂಬಲ ಅವರಿಗಿದೆ.
ಇನ್ನು ಕೋವಿಂದ್ ವಿಚಾರಕ್ಕೆ ಬಂದರೆ ಜೆಡಿಯು, ಬಿಜೆಡಿ, ಎಐಎಡಿಎಂಕೆ, ಟಿಆರ್.ಎಸ್, ಮತ್ತು ವೈಎಸ್ಆರ್ ಕಾಂಗ್ರೆಸ್ ಬೆಂಬಲ ಅವರಿಗಿದೆ.
ಮತಗಳ ಲೆಕ್ಕಾಚಾರದ ಪ್ರಕಾರ ಕೋವಿಂದ್ ಬುಟ್ಟಿಯಲ್ಲಿ 6,82,677 ಮತಗಳಿದ್ದರೆ, ಮೀರಾ ಕುಮಾರ್ ಬಳಿಯಲ್ಲಿ 3,76,261 ಮತಗಳಿವೆ.
ಇನ್ನು ಅಂದಾಜು 39,965 ಮತಗಳು ಇತರ ಪಕ್ಷಗಳಿಗೆ ಸೇರಿದ್ದು ಇವರು ಯಾರಿಗೆ ಮತದಾನ ಮಾಡುತ್ತಾರೆ ಕಾದು ನೋಡಬೇಕಾಗಿದೆ. ಆದರೆ ಇವರು ಯಾರಿಗೇ ಮತದಾನ ಮಾಡಿದರೂ ಸೋಲು ಗೆಲುವಿನಲ್ಲೇನೂ ಬದಲಾವಣೆಯಾಗುವುದಿಲ್ಲ.
ಇನ್ನು ಒಟ್ಟು 776 ಸಂಸತ್ ಸದಸ್ಯರಲ್ಲಿ ಕೋವಿಂದ್ ಗೆ 524 ಜನರ ಬೆಂಬಲವಿದ್ದರೆ, ಮೀರಾ ಕುಮಾರ್ ಗೆ 235 ಸದಸ್ಯರ ಬೆಂಬಲವಿದೆ.
-
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Asha Bosle Net Worth: ದೇಶ-ವಿದೇಶಗಳಲ್ಲಿ ರೆಸ್ಟೊರೆಂಟ್ಸ್, ನೂರಾರು ಕೋಟಿ ಒಡತಿ ಆಶಾ ಭೋಸ್ಲೆ ಒಟ್ಟು ಆಸ್ತಿ ವಿವರ ಹೀಗಿದೆ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ












Click it and Unblock the Notifications