ಶೇಕಡಾ 54 ಮತಗಳೊಂದಿಗೆ ರಾಷ್ಟ್ರಪತಿ ಸ್ಥಾನ ಬಿಜೆಪಿ ಪಾಲು

ನವದೆಹಲಿ, ಮೇ 29: ಹಲವು ಪ್ರಮುಖ ಪಕ್ಷಗಳನ್ನು ತನ್ನ ಕಡೆಗೆ ಸೆಳೆದುಕೊಂಡಿರುವ ಬಿಜೆಪಿ ನೇತೃತ್ವದ ಎನ್ಡಿಎ ಸುಲಭವಾಗಿ ರಾಷ್ಟ್ರಪತಿ ಸ್ಥಾನ ತನ್ನದಾಗಿಸಿಕೊಳ್ಳಲಿದೆ. ಜುಲೈ 15ರ ನಂತರ ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು ಎಲೆಕ್ಟೋರಲ್ ಕಾಲೇಜು ವ್ಯವಸ್ಥೆಯಲ್ಲಿ ಶೇಕಡಾ 54 ಮತಗಳನ್ನು ಪಡೆಯುವುದಾಗಿ ಬಿಜೆಪಿ ಹೇಳಿಕೊಂಡಿದೆ.

ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್'ಎಸ್) ಹಾಗೂ ಎಐಎಡಿಎಂಕೆ ಬಿಜೆಪಿಯನ್ನು ಬೆಂಬಲಿಸಿರುವುದರಿಂದ ಶೇಕಡಾ 54 ಮತಗಳನ್ನು ಪಡೆದು ಜಯಶಾಲಿಯಾಗುವ ಹುರುಪಿನಲ್ಲಿ ಬಿಜೆಪಿ ಇದೆ. ಎಲೆಕ್ಟೋರಲ್ ಕಾಲೇಜಿನ ಒಟ್ಟು 10,98,882 ಮತಗಳಿದ್ದು ಇದರಲ್ಲಿ ಬಹುಮತಕ್ಕೆ 5,49,442 ಮೌಲ್ಯದ ಮತಗಳು ಪಡೆಯುವುದು ಅಗತ್ಯವಾಗಿದೆ.

Next President of India: BJP will win with 54 per cent of votes

ಇನ್ನು ರಾಷ್ಟ್ರಪತಿ ಅಭ್ಯರ್ಥಿ ಯಾರಾಗಬೇಕು ಎಂಬ ಚರ್ಚೆ ಬಿಜೆಪಿಯಲ್ಲಿ ನಡೆಯುತ್ತಿದೆ. ಸದ್ಯಕ್ಕೆ ಜಾರ್ಖಂಡ್ ರಾಜ್ಯಪಾಲೆ ದ್ರೌಪದಿ ಮುರ್ಮು ಹೆಸರು ರಾಷ್ಟ್ರಪತಿ ಸ್ಥಾನಕ್ಕೆ ಅಂತಿಮವಾಗಲಿದೆ ಎನ್ನಲಾಗಿದೆ.

ಇನ್ನು ಬಿಜೆಪಿ ಮೂಲಗಳ ಪ್ರಕಾರ ರಾಷ್ಟ್ರಪತಿ ಅ್ಯರ್ಥಿ ಯಾರಾಗಬೇಕು ಎಂಬ ಚರ್ಚೆಗಳು ನಡೆಯುತ್ತಿವೆ. ಸದ್ಯ ವಿದೇಶ ಪ್ರವಾಸದಲ್ಲಿರುವ ನರೇಂದ್ರ ಮೋದಿ ಭಾರತಕ್ಕೆ ವಾಪಾಸಾಗುತ್ತಿದ್ದಂತೆ ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಅಂತಿಮಗೊಳಿಸಲಾಗುವುದು ಎಂದು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+