ರಾಷ್ಟ್ರಪತಿ ಚುನಾವಣೆ: ಬಿಜೆಪಿಯಿಂದ ಚುನಾವಣಾ ಸಮಿತಿ ರಚನೆ

By: ವಿಕಾಸ ನಂಜಪ್ಪ
Subscribe to Oneindia Kannada

ನವದೆಹಲಿ, ಜೂನ್ 12: ರಾಷ್ಟ್ರಪತಿ ಚುನಾವಣೆಗೂ ಮುನ್ನ ಬಿಜೆಪಿ ಮೂವರು ಸದಸ್ಯರ ಚುನಾವಣಾ ಸಮಿತಿ ರಚಿಸಿದೆ. ಅಮಿತ್ ಶಾ ನೇತೃತ್ವದ ಈ ಸಮಿತಿಯಲ್ಲಿ ವೆಂಕಯ್ಯ ನಾಯ್ಡು, ರಾಜನಾಥ್ ಸಿಂಗ್ ಹಾಗೂ ಅರುಣ್ ಜೇಟ್ಲಿ ಇದ್ದಾರೆ.

ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಎನ್.ಡಿ.ಎ ಮಿತ್ರ ಪಕ್ಷಗಳ ಜತೆ ಈ ಸಮಿತಿಯ ಸದಸ್ಯರು ಸಮಾಲೋಚನೆ ನಡೆಸಲಿದ್ದಾರೆ. ವಾರದೊಳಗೆ ಈ ಸಮಾಲೋಚನೆ ನಡೆಯಲಿದ್ದು, ಅದಾದ ನಂತರ ಬಿಜೆಪಿ ತನ್ನ ರಾಷ್ಟ್ರಪತಿ ಅಭ್ಯರ್ಥಿಯನ್ನು ಘೋಷಿಸಲಿದೆ.

ವಿಧಾನಸಭೆ ಚುನಾವಣೆ: ಕ್ಲೀನ್ ಚಿಟ್ ಪಡೆದವರಿಗೆ ಮಾತ್ರ ಬಿಜೆಪಿ ಟಿಕೆಟ್

Next President of India: BJP forms poll panel under Amit Shah

ಜುಲೈ 17ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಇನ್ನು ಮತಗಳ ಎಣಿಕೆ ಜುಲೈ 20ರಂದು ನಡೆಯಲಿದೆ. ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ಕಡೆಯಿಂದ ದ್ರೌಪದಿ ಮುರ್ಮು, ತಾವರ್ ಚಂದ್ ಗೆಹ್ಲೋಟ್, ಸುಮಿತ್ರಾ ಮಹಾಜನ್ ಹೆಸರುಗಳು ತೇಲಿ ಬರುತ್ತಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The BJP has formed a three member poll panel to hold consultations to elect the next President of India. The panel comprises, Venkaiah Naidu, Amit Shah, Rajnath Singh and Arun Jaitley.
Please Wait while comments are loading...