Ankitha Gowda: ನಟನೆ ಜೊತೆ ಎಸ್‌ಎಸ್‌ಎಲ್‌ಸಿಯಲ್ಲಿ ಅದ್ಭುತ ಸಾಧನೆ ಮಾಡಿದ 'ಅಣ್ಣಯ್ಯ ಸೀರಿಯಲ್' ನಟಿ ಅಂಕಿತಾ ಗೌಡ

Ankitha Gowda: ಜಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಅಣ್ಣಯ್ಯ' ಧಾರಾವಾಹಿ ಖ್ಯಾತಿಯ ನಟಿ ಅಂಕಿತಾ ಅವರು 2026ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ 86ರಷ್ಟು ಅಂಕಗಳನ್ನು ಗಳಿಸುವ ಮೂಲಕ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ ಆಗಿದ್ದಾರೆ. ಹಾಗಾದ್ರೆ ಯಾವ ವಿಷಯದಲ್ಲಿ ಎಷ್ಟು ಅಂಕಗಳನ್ನ ಪಡೆದಿದ್ದಾರೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ತಿಳಿಯಿರಿ.

ರಾಜ್ಯದಲ್ಲಿ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶನ್ನು ಏಪ್ರಿಲ್‌ 23ರ ಗುರುವಾರ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಅಧಿಕೃತವಾಗಿ ಪ್ರಟಕ ಮಾಡಿದ್ದಾರೆ. ಮೊದಲು ಆನ್​​ಲೈನ್‌​ನಲ್ಲಿ ಫಲಿತಾಂಶ ಪ್ರಕಟವಾಗಿದ್ದು, ನಂತರ ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿದರು.

Ankita Scores 86 in SSLC 2026 Annayya Serial Actress Secures Distinction with 537 Marks

ಅಂಕಿತಾ ಫಲಿತಾಂಶ ವೈರಲ್‌

ಇದೀಗ 'ಅಣ್ಣಯ್ಯ' ಧಾರಾವಾಹಿ ಖ್ಯಾತಿಯ ನಟಿ ಅಂಕಿತಾ ಗೌಡ ಅವರ ಫಲಿತಾಂಶ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಅಲ್ಲದೆ, ಸ್ವತಃ ಅಂಕಿತಾ ಅವರೇ ತಮ್ಮ ಇನ್ಸ್‌ಸ್ಟಾಗ್ರಾಂ ಖಾತೆಯ ಸ್ಟೋರಿಯಲ್ಲಿ ಶುಭಾಹಾರೈಸಿದವರಿಗೆ ಧನ್ಯವಾದ ತಿಳಿಸುವ ಸುದೀರ್ಘ ಬರಹರದ ಪೋಸ್ಟರ್‌ವೊಂದನ್ನ ಹಂಚಿಕೊಂಡಿದ್ದಾರೆ.

ಅಂಕಿತಾ ಇನ್‌ಸ್ಟಾ ಸ್ಟೋರಿಯಲ್ಲಿ ಬರೆದುಕೊಂಡಿರುವುದೇನು?

ಅಂಕಿತಾ ಗೌಡ (Ankitha Meena) ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪರೀಕ್ಷೆಯ ಫಲಿತಾಂಶದ ದಿನದಂದು ತಮಗೆ ಶುಭ ಹಾರೈಸಿ, ಪ್ರೋತ್ಸಾಹಿಸಿದ ಧನ್ಯವಾದ ತಿಳಿಸಿದ್ದಾರೆ. "ನನ್ನ ಫಲಿತಾಂಶದ ದಿನದಂದು ಶುಭ ಹಾರೈಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ನಿಮ್ಮ ಪ್ರೀತಿ ಮತ್ತು ಹಾರೈಕೆಗಳು ನನಗೆ ತುಂಬಾ ಅಮೂಲ್ಯವಾದವು," ಎಂದು ಅವರು ಬರೆದುಕೊಂಡಿದ್ದಾರೆ.

ಅವರ ಈ ಸಾಧನೆಗೆ ಕುಟುಂಬಸ್ಥರು, ಅಭಿಮಾನಿಗಳಿಂದ ಶುಭಾಶಯಗಳ ಮರಾಪೂರವೇ ಹರಿದುಬರುತ್ತಲಿದೆ. ಆದ್ದರಿಂದ ಅವರು "ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ಉತ್ತರ ನೀಡಲು ಸಾಧ್ಯವಾಗುತ್ತಿಲ್ಲ, ಅದಕ್ಕಾಗಿ ಕ್ಷಮಿಸಿ. ಆದರೆ ನಿಮ್ಮೆಲ್ಲರ ಹಾರೈಕೆಗಳು ನನಗೆ ಆಶೀರ್ವಾದ ಇದ್ದಂತೆ," ಎಂದು ಅವರು ಬರೆದುಕೊಂಡಿದ್ದಾರೆ. ಈ ಸಂದೇಶ ಈಗ ಭಾರೀ ವೈರಲ್‌ ಆಗಿದೆ.

ಅಣ್ಣಯ್ಯ ಧಾರಾವಾಹಿಯಲ್ಲಿ ನಟನೆ

ಜೀ ಕನ್ನಡದಲ್ಲಿ ಪ್ರಸಾರವಾಗುವ ಅಣ್ಣಯ್ಯ ಧಾರಾವಾಹಿಯಲ್ಲಿ ರಮ್ಯಾ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಂಕಿತಾ ಅವರು ನಟನೆ ಜೊತೆಗೆ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕಗಳನ್ನು ಪಡೆಯುವ ಮೂಲಕ ಅದ್ಭುತ ಸಾಧನೆ ಮಾಡಿದ್ದಾರೆ. ಈ ಸೀರಿಯಲ್‌ನಲ್ಲಿ ಶಿವಣ್ಣಗೆ ನಾಲ್ವರು ಸಹೋದರಿಯರಿದ್ದಾರೆ. ವಿಕಾಶ್ ಉತ್ತಯ್ಯ ಅವರು ಶಿವಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇವರಿಗೆ ಪುಟ್ಟ ತಂಗಿಯಾಗಿ ರಮ್ಯಾ ಪಾತ್ರದಲ್ಲಿ ಅಂಕಿತಾ ಅಭಿನಯಿಸಿದ್ದಾರೆ.

ರತ್ನಾ, ರಾಣಿ, ರಶ್ಮಿ ಮತ್ತು ರಮ್ಯಾ ಒಟ್ಟು ನಾಲ್ವರು ತಂಗಿಯರಾಗಿ ನಟನೆ ಮಾಡುಗ ಮೂಲಕ ರಾಜ್ಯದ ಜನರ ಮನೆ ಮಾತಾಗಿದ್ದಾರೆ. ಇನ್ನೂ ಜೀ ಕುಟುಂಬ ಅವಾರ್ಡ್‌ನಲ್ಲಿ ನಾಲ್ವರಿಗೂ ನೆಚ್ಚಿನ ಸಹೋದರಿ ಎಂಬ ಅವಾರ್ಡ್‌ ಸಹ ಬಂದಿದೆ. ನಿಜ ಜೀವನದಲ್ಲೂ ಅಷ್ಟೇ ಉತ್ತಮ ಬಾಂಧವ್ಯ ಹೊಂದಿರುವ ವಿಶೇಷ ಬಂಧ ಇವರದ್ದು. ಇದೀಗ ಚಿಕ್ಕ ತಂಗಿ ರಮ್ಯಾ ಪಾತ್ರ ಮಾಡುತ್ತಿರುವ ನಟಿ ಅಂಕಿತಾ ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಾಸ್‌ ಆಗಿದ್ದಾರೆ. ಅದು ಡಿಸ್ಟಿಂಕ್ಷನ್ ಅಂಕದ ಜೊತೆಗೆ.

ವಿಜಯ ಕರ್ನಾಟಕದ ವರದಿ ಪ್ರಕಾರ, ಮೂಲತಃ ಮಂಡ್ಯ ಮೂಲದವರಾಗಿರುವ ನಟಿ ಅಂಕಿತಾ ಗೌಡ ಅವರು ಬೆಂಗಳೂರಿನಲ್ಲಿ ವಾಸವಿದ್ದಾರೆ. ಅಭಿನಯದ ಜೊತೆಗೆ ಓದಿನಲ್ಲೂ ಇವರು ಮುಂದಿದ್ದು, ಈ ಬಾರಿ ಉತ್ತಮ ಅಂಕಗಳೊಂದಿಗೆ ಎಸ್‌ಎಸ್‌ಎಲ್‌ಸಿ ಮುಗಿಸಿದ್ದಾರೆ. ಅಂಕಿತಾ ಡಿ ಬಾಸ್ ಅವರ ಅಪ್ಪಟ ಅಭಿಮಾನಿ ಕೂಡ ಆಗಿದ್ದಾರೆ. ಅವರು ತಮ್ಮ ಸಾಮಾಜಿಕ ಜಾಲತಾಣಗಳಾದ ಇನ್ಸ್‌ಸ್ಟಾಂಗ್ರಾಂ ಹಾಗೂ ಫೇಸ್‌ಬುಕ್‌ನಲ್ಲಿ ದರ್ಶನ್‌ ಅವರ ಜೊತೆಗೆ ತೆಗೆಸಿಕೊಂಡಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇನ್ನೂ ಅಂಕಿತಾ ಅವರು ಎಸ್‌ಎಸ್‌ಎಲ್‌ಸಿಯಲ್ಲಿ ಯಾವ ವಿಷಯದಲ್ಲಿ ಎಷ್ಟು ಅಂಕಗಳನ್ನ ಪಡೆದುಕೊಂಡಿದ್ದೇನೆ ಎನ್ನುವ ಮಾಹಿತಿಯನ್ನು ಎಲ್ಲಿಯೂ ಹಂಚಿಕೊಂಡಿಲ್ಲ, ಆದರೆ ಶುಭಾಷಯ ತಿಳಿಸಿದವರಿಗೆ ಮಾತ್ರ ಧನ್ಯವಾದ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+