• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಂದಿನ 8-10 ಗಂಟೆಗಳಲ್ಲಿ ಯಾವ್ಯಾವ ರಾಜ್ಯಗಳಲ್ಲಿ ಮಳೆ

|

ಬೆಂಗಳೂರು, ಜೂನ್ 8: ಈಗಾಗಲೇ ಮುಂಗಾರು ಕೇರಳವನ್ನು ಪರವೇಶಿಸಿದ್ದು ಅದರ ಪರಿಣಾಮವಾಗಿ ಮುಂದಿನ 8-10 ಗಂಟೆಗಳಲ್ಲಿ ಛತ್ತೀಗಢ, ಒಡಿಶಾ, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ವೆದರ್ ತಿಳಿಸಿದೆ.

ಕರ್ನಾಟಕದಲ್ಲಿ ವಿಜಯಪುರ, ಕಲಬುರಗಿ, ಸಾವಣಗೆರೆ, ಬಳ್ಳಾರಿ, ಉತ್ತರ ಕನ್ನಡ, ಕೊಪ್ಪಳ ಭಾಗದಲ್ಲಿ ಮಳೆಯಾಗಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ವೆದರ್ ತಿಳಿಸಿದೆ.

ಕೆಲವೇ ಗಂಟೆಗಳಲ್ಲಿ ಕೇರಳಕ್ಕೆ ಮುಂಗಾರು, 4 ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ಒಡಿಶಾದಲ್ಲಿ ಬಾಲೇಶ್ವರ, ಗಜಪತಿ, ಗಂಜಮ್, ಜಾಜಪುರ, ಮಯ್ಯೂರ್ ಭಂಜ್, ನಾಯಾಗರ್, ಪುರಿ, ರಾಯಗಡ, ಸಂಬಲ್‌ಪುರ, ಸುಂದರಗಢದಲ್ಲಿ ಮಳೆಯಾಗಲಿದೆ ಎನ್ನುವ ಮುನ್ಸೂಚನೆ ದೊರೆತಿದೆ.

ಛತ್ತೀಸ್‌ಗಢದಲ್ಲಿ ಗಾಳಿಯು ಗಂಟೆಗೆ 40-50 ವೇಗದಲ್ಲಿ ಬೀಸುತ್ತಿದ್ದು, ಬಲೋಡಾ ಬಜಾರ್, ಚಂಪ, ಕಬೀರ್‌ಧಾಮ, ನಾರಾಯಣಪುರ, ರಾಯ್‌ಗಢ, ರಾಯ್‌ಪುರ, ಸುಕ್ಮಾದಲ್ಲಿ ಮುಂದಿನ 6-8 ತಾಸುಗಳಲ್ಲಿ ಮಳೆಯಾಗಲಿದೆ.

ನೈರುತ್ಯ ಮುಂಗಾರು ಕೇರಳ ಪ್ರವೇಶಿಸಲು 24 ಗಂಟೆ ಬಾಕಿ; ಉತ್ತರ ಭಾರತ ಧಗಧಗ

ಮಹಾರಾಷ್ಟ್ರದಲ್ಲಿ ಅಂಕೋಲಾ, ಅಮರಾವತಿ, ಕೊಲ್ಹಾಪುರ, ಲಾತೂರ್, ನಾಗ್ಪುರ, ಪುಣೆ, ಸಿಂಧುದುರ್ಗ, ವರ್ದಾದಲ್ಲಿ ಮಳೆಯಾಗಲಿದೆ.

English summary
Next 8-10 hours rain alert for 4 states in India, Spell of rain and thundershower with gusty winds is expected at some places over Karnataka, Mahararshtra, Odisha, Chhattisgarh and Telangana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X