Get Updates
Get notified of breaking news, exclusive insights, and must-see stories!

ಆಹಾರ ಪದಾರ್ಥ ಪಾರ್ಸೆಲ್‌ ಕಟ್ಟಲು ದಿನಪತ್ರಿಕೆಗಳನ್ನು ಬಳಸುವಂತಿಲ್ಲ: FSSAI ಹೊಸ ಸೂಚನೆ

ನವದೆಹಲಿ, ಸೆಪ್ಟೆಂಬರ್‌ 28: ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಹೋಟೆಲ್‌ಗಳಲ್ಲಿ ಆಹಾರ ಪದಾರ್ಥಗಳನ್ನು ಪಾರ್ಸೆಲ್‌ ಮಾಡಿಕೊಡಲು ದಿನಪತ್ರಿಕೆಗಳನ್ನು ಬಳಸಬಾರದು ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಹೊಸ ಸೂಚನೆ ನೀಡಿದೆ.

ದಿನಪತ್ರಿಕೆಗಳಲ್ಲಿ ಆಹಾರ ಪಧಾರ್ಥಗಳನ್ನು ಪಾರ್ಸೆಲ್‌ ಮಾಡಿಕೊಡುವುದರಿಂದ ಗ್ರಾಹಕರಿಗೆ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಅಪಾಯಗಳನ್ನು ಉಲ್ಲೇಖಿಸಿ ಆಹಾರ ಪದಾರ್ಥಗಳ ಪ್ಯಾಕಿಂಗ್, ಸೇವೆ ಮತ್ತು ಶೇಖರಣೆಗಾಗಿ ಪತ್ರಿಕೆಗಳನ್ನು ಬಳಸುವುದನ್ನು ತಕ್ಷಣವೇ ನಿಲ್ಲಿಸುವಂತೆ ಎಫ್‌ಎಸ್‌ಎಸ್‌ಎಐ ಕೇಳಿಕೊಂಡಿದೆ.

Newspapers cannot be used to wrap food parcels FSSAI new notice

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ರಾಜ್ಯಗಳ ಆಹಾರ ಅಧಿಕಾರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತದೆ. ಸುರಕ್ಷತೆ ನಿಬಂಧನೆಗಳನ್ನು ಜಾರಿಗೊಳಿಸುತ್ತದೆ. ಈ ಸಂಬಂಧ ಎಫ್‌ಎಸ್‌ಎಸ್‌ಎಐ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಜಿ ಕಮಲ ವರ್ಧನ ರಾವ್ ಅವರು 'ದೇಶಾದ್ಯಂತ ಗ್ರಾಹಕರು ಮತ್ತು ಆಹಾರ ಮಾರಾಟಗಾರರು ಆಹಾರ ಪದಾರ್ಥಗಳನ್ನು ಪ್ಯಾಕಿಂಗ್ ಮಾಡಲು, ಬಡಿಸಲು ಮತ್ತು ಸಂಗ್ರಹಿಸಲು ಪತ್ರಿಕೆಗಳನ್ನು ಬಳಸುವುದನ್ನು ತಕ್ಷಣವೇ ನಿಲ್ಲಿಸಬೇಕು' ಎಂದು ನಿರ್ದೇಶನ ನೀಡಿದ್ದಾರೆ.

ಅವರು ಆಹಾರವನ್ನು ಕಟ್ಟುವಾಗ ಸುತ್ತುವ ಅಥವಾ ಪ್ಯಾಕೇಜಿಂಗ್ ಮಾಡಲು ಪತ್ರಿಕೆಗಳನ್ನು ಬಳಸುವುದರಿಂದ ಅದನ್ನು ಕೊಂಡು ತಿನ್ನುವ ಜನರಿಗೆ ಗಮನಾರ್ಹವಾದ ಆರೋಗ್ಯ ಅಪಾಯಗಳು ಬರುತ್ತವೆ ಎಂದು ಅವರು ಎಚ್ಚರಿಸಿದರು. ಪತ್ರಿಕೆಗಳಲ್ಲಿ ಬಳಸುವ ಕಪ್ಪು ಶಾಯಿಯು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ವಿವಿಧ ಜೈವಿಕ ಸಕ್ರಿಯ ವಸ್ತುಗಳನ್ನು ಒಳಗೊಂಡಿದೆ. ಇದು ಆಹಾರವನ್ನು ಕಲುಷಿತಗೊಳ್ಳಲಿದ್ದು, ಅದನ್ನು ಸೇವಿಸಿದಾಗ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಎಫ್‌ಎಸ್‌ಎಸ್‌ಎಐ ಬುಧವಾರ ಎಚ್ಚರಿಸಿದೆ.

ಪತ್ರಿಕೆಗಳಲ್ಲಿ ಪ್ರಿಂಟಿಂಗ್ ಇಂಕ್‌ಗಳು ಸೀಸ ಮತ್ತು ಭಾರ ಲೋಹಗಳನ್ನು ಒಳಗೊಂಡಂತೆ ರಾಸಾಯನಿಕಗಳನ್ನು ಒಳಗೊಂಡಿರತ್ತದೆ. ಅದು ಆಹಾರಕ್ಕೆ ಸೋರಿಕೆಯಾಗಬಹುದು, ಬಳಿಕ ಇದು ಗಂಭೀರವಾದ ಆರೋಗ್ಯ ಅಪಾಯಗಳನ್ನು ಉಂಟುಮಾಡಬಹುದು. ಇದಲ್ಲದೆ ಆಹಾರ ವಿತರಣೆಯ ಸಮಯದಲ್ಲಿ ಪತ್ರಿಕೆಗಳು ಸಾಮಾನ್ಯವಾಗಿ ವಿವಿಧ ಪರಿಸರ ಪರಿಸ್ಥಿತಿಗಳಿಗೆ ಒಳಗಾಗುತ್ತವೆ. ಅವು ಬ್ಯಾಕ್ಟೀರಿಯಾ, ವೈರಸ್‌ಗಳು ಅಥವಾ ಆಹಾರಕ್ಕೆ ವರ್ಗಾವಣೆಯಾಗುವ ಇತರ ರೋಗಕಾರಕಗಳಿಂದ ಮಾಲಿನ್ಯಕ್ಕೆ ಒಳಗಾಗುತ್ತವೆ. ಇದು ಆಹಾರದಿಂದ ಹರಡುವ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ಎಫ್‌ಎಸ್‌ಎಸ್‌ಎಐ ಹೇಳಿದೆ.

ಎಫ್‌ಎಸ್‌ಎಸ್‌ಎಐ ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಪ್ಯಾಕೇಜಿಂಗ್) ನಿಯಮಾವಳಿಗಳು 2018 ರ ಪ್ರಕಾರ ಆಹಾರವನ್ನು ಪ್ಯಾಕೇಜಿಂಗ್‌ ಮಾಡಲು ಪತ್ರಿಕೆಗಳು ಅಥವಾ ಅಂತಹ ವಸ್ತುಗಳನ್ನು ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸುತ್ತದೆ. ಈ ನಿಯಮಾವಳಿಯ ಪ್ರಕಾರ, ವಾರ್ತಾಪತ್ರಿಕೆಗಳನ್ನು ಆಹಾರವನ್ನು ಕಟ್ಟಲು, ಮುಚ್ಚಲು ಅಥವಾ ಬಡಿಸಲು ಬಳಸಬಾರದು ಅಥವಾ ಕರಿದ ಆಹಾರದಿಂದ ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳಲು ಬಳಸಬಾರದು ಎಂದು ಹೇಳಿದೆ.

ಹೀಗಾಗಿ ಆಹಾರ ಸುರಕ್ಷತೆಯು ಮುಖ್ಯವಾಗಿದ್ದು ತಮ್ಮ ಗ್ರಾಹಕರ ಯೋಗಕ್ಷೇಮಕ್ಕೆ ಆದ್ಯತೆ ನೀಡುವ ಜವಾಬ್ದಾರಿಯುತ ಪ್ಯಾಕೇಜಿಂಗ್ ಕ್ರಮಗಳನ್ನು ಅಳವಡಿ-ಸಿಕೊಳ್ಳುವಂತೆ ಎಲ್ಲಾ ಆಹಾರ ಮಾರಾಟಗಾರರನ್ನು ಅವರು ಒತ್ತಾಯಿಸಿದ್ದಾರೆ. ಆಹಾರ ಪ್ಯಾಕೇಜಿಂಗ್ ಸಾಮಗ್ರಿಗಳಾಗಿ ದಿನಪತ್ರಿಕೆಗಳ ಬಳಕೆಯನ್ನು ನಿಷೇಧಿಸುವ ಮೂಲಕ ಸುರಕ್ಷಿತ ಪರ್ಯಾಯಗಳನ್ನು ಉತ್ತೇಜಿಸಬೇಕು. ಅಲ್ಲದೆ ಆಹಾರ ಪ್ಯಾಕೇಜಿಂಗ್‌ಗೆ ಸೂಕ್ತ ಕಂಟೆನರ್‌ ಬಾಕ್ಸ್‌ಗಳನ್ನು ಬಳಸಬೇಕು ಎಂದು ಎಫ್‌ಎಸ್‌ಎಸ್‌ಎಐ ತಿಳಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+