ಚಿತ್ರಸುದ್ದಿ : ಅಮೆರಿಕದ ಟೆಕ್ಸಾಸ್ ನಲ್ಲಿ ಪಂಚವಳಿಗಳ ಬಳುವಳಿ
ನವದೆಹಲಿ,
ಜು. 07: ಮಧ್ಯ ಏಷ್ಯಾ ಪ್ರವಾಸದಲ್ಲಿರುವ ನರೇಂದ್ರ ಮೋದಿ ತಾಷ್ಕೆಂಟ್ ನಲ್ಲಿ ವಿದ್ಯಾರ್ಥಿಗಳು ಮತ್ತು ಭಾರತೀಯ ಮೂಲದವರ ಜತೆ ಮಾತುಕತೆ ನಡೆಸಿದರು. ಜಿಂಬಾಬ್ವೆ ಪ್ರವಾಸಕ್ಕೆ ತೆರಳಲು ಸಿದ್ಧವಾಗಿರುವ ಭಾರತದ ಕ್ರಿಕೆಟ್ ಆಟಗಾರರು ಮುಂಬೈ ನಲ್ಲಿ ಮಾಧ್ಯಮಗಳ ಎದುರು ಕಾಣಿಸಿಕೊಂಡರು. ಭಾರತ ತಂಡದ ನಾಯಕ ಅಂಜಿಕ್ಯ ರಹಾನೆ ತಂಡದ ಮುಂದಿನ ಕಾರ್ಯತಂತ್ರಗಳನ್ನು ಬಿಚ್ಚಿಟ್ಟರು. id="toptextpromo"> id='are-slot-1' class='oiad oi-axt oiadv'>ಭೂಕಂಪದಿಂದ
ನಲುಗಿ ಹೋಗಿದ್ದ ನೇಪಾಳದಲ್ಲಿ ಜನ ಜೀವನ ಸಹಜ ಸ್ಥಿತಿಗೆ ಮರಳಿದೆ. ಧರ್ಮ ಗುರು ದಲೈ ಲಾಮಾ ಅವರ ಜನ್ಮದಿನವನ್ನು ಮೆರವಣಿಗೆ ನಡೆಸಿ ಆಚರಣೆ ಮಾಡಿದ ಟಿಬೇಟಿಯನ್ ಮಹಿಳೆಯರು. ಬೆಂಗಳೂರಿನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಭಾಗವಹಿಸಿದ್ದ ಬಾಲಿವುಡ್ ನಟ ಅಭಿಷೇಕ್ ಬಚ್ಚನ್, ಕ್ರಿಕೆಟಿಗ ಆರ್ ಅಶ್ವಿನ್. ಇನ್ನು ಹಲವು ಸುದ್ದಿಗಳು ಚಿತ್ರದೊಂದಿಗೆ. (ಪಿಟಿಐ ಚಿತ್ರಗಳು) id='are-slot-2' class='oiad oi-axt oiadv'>
ನರೇಂದ್ರ ಮೋದಿ ಮಾತುಕತೆ
ಉಜಕಿಸ್ತಾನಕ್ಕೆ ಭೇಟಿ ನೀಡಿರುವ ಪ್ರಧಾನಿ ಭಾರತೀಯ ಮೂಲದವರನ್ನು ಭೇಟಿಯಾಗಿ ಮಾತಿಕತೆ ನಡೆಸಿದರು. ನಂತರ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ವಿವಿಧ ಯೋಜನೆಗಳ ಕುರಿತು ಮಾತನಾಡಿದರು.

ಸ್ವಾಗತವೂ ನಿಮಗೆ
ಉಜಕಿಸ್ತಾನಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆ ದೇಶದ ಮುಖಂಡರು ಮತ್ತು ಹಿರಿಯ ಅಧಿಕಾರಿಗಳು ಬರಮಾಡಿಕೊಂಡರು.

ಗೆದ್ದೇ ಬರುತ್ತೇವೆ
ಬಾಂಗ್ಲಾ ಪ್ರವಾಸದ ಕಹಿ ನೆನಪು ಕಳೆದುಕೊಂಡು ಜಿಂಬಾಬ್ವೆ ಪ್ರವಾಸಕ್ಕೆ ತೆರಳಲು ಸಿದ್ಧವಾಗಿರುವ ಭಾರತದ ಕ್ರಿಕೆಟ್ ಆಟಗಾರರು ಮುಂಬೈ ನಲ್ಲಿ ಮಾಧ್ಯಮಗಳ ಎದುರು ಕಾಣಿಸಿಕೊಂಡರು.

ಕ್ರಿಕೆಟ್ + ಬಾಲಿವುಡ್
ಬೆಂಗಳೂರಿನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಭಾಗವಹಿಸಿದ್ದ ಬಾಲಿವುಡ್ ನಟ ಅಭಿಷೇಕ್ ಬಚ್ಚನ್, ಕ್ರಿಕೆಟಿಗ ಆರ್ ಅಶ್ವಿನ್.

ರಾಜಧಾನಿಯಲ್ಲಿ ಮಳೆ
ರಾಜಾಧಾನಿ ನವದೆಹಲಿಯಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ನಗರದಾದ್ಯಂತ ಸಾರಿಗೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ದೇಶದಲ್ಲಿ ಮುಂಗಾರು ಮಳೆ ಕೊರೆತೆ ಎದುರಾಗಿದೆ.

ಗೋವಿಂದಾಚಾರ್ಯ ಮಾತು
ಚಿಂತಕ ಕೆ.ಎನ್.ಗೋವಿಂದಾಚಾರ್ಯ ಬೆಂಗಳೂರಿನ ಪ್ರೆಸ್ ಕ್ಮಬ್ ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಸ್ತುತ ಸಮಾಜ ಎದುರಿಸುತ್ತಿರುವ ಸಮಸ್ಯೆಗಳನ್ನು ತಮ್ಮ ಭಾಷಣದ ಉದ್ದಕ್ಕೂ ಬಿಚ್ಚಿಟ್ಟರು.

ಮನೆ ಸೇರಿದ ಮಕ್ಕಳು
ಅಮೇರಿಕಾದ ಡೇನಿಯಲ್ ಬಸ್ಬಿ-ಆಡಂ ಬಸ್ಬಿ ದಂಪತಿಗೆ ಏಪ್ರಿಲ್ 15ರಂದು ಐವರು ಜನಸಿದ್ದ ಐವರು ಹೆಣ್ಣು ಮಕ್ಕಳನ್ನು ಸುಮಾರು 3 ತಿಂಗಳು ಕಾಲ ತುರ್ತು ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಸಂಪೂರ್ಣ ಆರೈಕೆ ನಂತರ ಮಕ್ಕಳು ಪಾಲಕರೊಂದಿಗೆ ಮನೆ ಸೇರಿವೆ.












Click it and Unblock the Notifications