• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೂಚನೆ ಮೀರಿ ಚೀನಾಕ್ಕೆ ಹೋದರೆ ಭಾರತೀಯರಿಗೂ ಹಿಂದಿರುಗಲು ಅವಕಾಶವಿಲ್ಲ!

|

ಬೆಂಗಳೂರು, ಫೆ. 05: ಕರೋನಾ ವೈರಸ್ ಭೀತಿ ಹೆಚ್ಚಾಗುತ್ತಿದ್ದಂತೆಯೆ ಚೀನಾದಿಂದ ಭಾರತಕ್ಕೆ ಬರುವ ಪ್ರಯಾಣಿಕರ ವೀಸಾ ರದ್ದು ಮಾಡಿರುವ ಕೇಂದ್ರ ಸರ್ಕಾರ, ಭಾರತೀಯರು ಚೀನಾಕ್ಕೆ ತೆರಳದಂತೆ ನಿಷೇಧ ಹೇರಿದೆ. ಸಧ್ಯದ ಪರಿಸ್ಥಿತಿಯಲ್ಲಿ ಸೂಚನೆ ಮೀರಿಯೂ ಭಾರತದಿಂದ ಚೀನಾಕ್ಕೆ ತೆರಳುವ ಭಾರತೀಯರಿಗೂ ಹಿಂದಿರುಗಲು ಅವಕಾಶವಿಲ್ಲ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ಕೊಟ್ಟಿದೆ.

ನಮ್ಮ ದೇಶದಲ್ಲೂ ಕೊರೊನಾ ವೈರಸ್ ಇದೆ: ದೃಢಪಡಿಸಿದ 25 ರಾಷ್ಟ್ರಗಳು

ಈಗಾಗಲೇ ಭಾರತಕ್ಕೆ ಬರಲು ಕೊಟ್ಟಿರುವ ವೀಸಾಗಳು ಕೂಡ ರದ್ದಾಗಿವೆ, ಸಧ್ಯದ ವೈದ್ಯಕೀಯ ತುರ್ತು ಪರಿಸ್ಥಿತಿ ಮುಗಿಯುವವರೆಗೆ ಇದು ಜಾರಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.

ಚೀನಾಕ್ಕೆ ತೆರಳುವ ಭಾರತೀಯರಿಗೂ ಹಿಂದಿರುಗಲು ಅವಕಾಶವಿಲ್ಲ

ಚೀನಾಕ್ಕೆ ತೆರಳುವ ಭಾರತೀಯರಿಗೂ ಹಿಂದಿರುಗಲು ಅವಕಾಶವಿಲ್ಲ

ಭಾರತ ಸರ್ಕಾರದ ಸೂಚನೆ ಬಳಿಕವೂ ಚೀನಾ ದೇಶಕ್ಕೆ ತೆರಳುವ ಭಾರತೀಯರು ಸೇರಿದಂತೆ, ಹಿಂದಿರುಗಲು ನಿಷೇಧ ಹೇರಲಾಗಿದೆ. ಅಂತಾರಾಷ್ಟ್ರೀಯ ವೈದ್ಯಕೀಯ ತುರ್ತು ಪರಿಸ್ಥಿತಿ ಘೋಷಣೆ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಹೀಗಾಗಿ ಭಾರತೀಯರು ಚೀನಾಕ್ಕೆ ತೆರಳಲೇಬಾರದು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.

ಬೀಜಿಂಗ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಸಂಪರ್ಕಿಸಲು ಸೂಚನೆ

ಬೀಜಿಂಗ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಸಂಪರ್ಕಿಸಲು ಸೂಚನೆ

ಇನ್ನು ಈಗಾಗಲೇ ಚೀನಾಕ್ಕೆ ತೆರಳಿರುವ ಭಾರತೀಯರು ಬೀಜಿಂಗ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ (visa@beijing.mea.gov.in) ಸಂಪರ್ಕ ಮಾಡಲು ಸೂಚನೆ ಕೊಡಲಾಗಿದೆ. ಅಲ್ಲಿ ಆಗದಿದ್ದರೇ ಶಾಂಘೈನಲ್ಲಿರುವ ಭಾರತೀಯ ಧೂತಾವಾಸ ಕಚೇರಿ(Ccons.shanghai@mea.gov.in)ಗೆ ಸಂಪರ್ಕಿಸಲು ಸೂಚನೆ ಕೊಡಲಾಗಿದೆ.

'ಕೊರೊನಾ ವೈರಸ್' ಇದೇ ಹೆಸರೇಕೆ ಬಂತು?

 24×7 ಹಾಟ್ ಲೈನ್ ಸೌಲಭ್ಯ ಕೂಡ ಇದೆ

24×7 ಹಾಟ್ ಲೈನ್ ಸೌಲಭ್ಯ ಕೂಡ ಇದೆ

ಚೀನಾದಲ್ಲಿರುವ ಭಾರತೀಯರು ಅಗತ್ಯವಿದ್ದಾಗ ಭಾರತೀಯ ರಾಯಭಾರ ಕಚೇರಿಯಲ್ಲಿನ ಎರಡು ಹಾಟ್ ಲೈನ್ ಗೆಳಿಗೆ ದೂರವಾಣಿ ಮಾಡಬಹುದಾಗಿದೆ. +8618612083629, +86186110952903 ನಂಬರ್ ಗಳಿಗೆ ದೂರವಾಣಿ ಕರೆ ಮಾಡಬಹುದು. ಈ ಹಾಟ್ ಲೈನ್ ಗಳು 24×7 ಗಂಟೆಗಳ ಕಾಲ ಕೆಲಸ ನಿರ್ವಹಿಸುತ್ತಿವೆ.

ಜಗತ್ತಿನ 23 ದೇಶಗಳಿಗೆ ಕರೋನಾ ವೈರಸ್ ಹರಡಿದೆ ಎಂದ WHO

ಜಗತ್ತಿನ 23 ದೇಶಗಳಿಗೆ ಕರೋನಾ ವೈರಸ್ ಹರಡಿದೆ ಎಂದ WHO

ಜಗತ್ತಿನ 23 ದೇಶಗಳಿಗೆ ಕರೋನಾ ವೈರಸ್ ಹರಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿದೆ. ಕರೋನಾ ವೈರಸ್ ಪೀಡಿತ ಪ್ರದೇಶದಿಂದ ಈ ವರೆಗೆ ರಾಜ್ಯಕ್ಕೆ 87 ಜನರು ಬಂದಿದ್ದಾರೆ. ಅವರಲ್ಲಿ 4 ಚೀನಾ ದೇಶದ ಪ್ರಜೆಗಳು ತಮ್ಮ ದೇಶಕ್ಕೆ ತೆರಳಿದ್ದಾರೆ. ಉಳಿದ 83 ಜನರು ಐಸೊಲೇಶನ್ ಸ್ಥಿತಿಯಲ್ಲಿ ಇರಿಸಲಾಗಿದೆ. 83 ಜನರಲ್ಲಿ ಶಂಕಿತ 74 ಜನರ ರಕ್ತ ಪರೀಕ್ಷೆಗೆ ಕಳಿಸಿದ್ದು 52 ಜನರ ವರದಿ ನೆಗಟಿವ್ ಬಂದಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.

ಕೊರೊನಾ ವೈರಸ್ ; ರಾಜ್ಯ ವಿಪತ್ತು ಎಂದು ಘೋಷಿಸಿದ ಕೇರಳ

English summary
Cabinet secretary holds high level meeting to review actions and preparedness on Corona virus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X