Vande Bharat Bullet Train: ಶೀಘ್ರದಲ್ಲೇ ಟ್ರ್ಯಾಕ್‌ಗಿಳಿಯಲಿರುವ ವಂದೇ ಭಾರತ್ ಮಾದರಿಯ ಬುಲೆಟ್ ಟ್ರೈನ್ ಬಗ್ಗೆ ತಿಳಿಯಿರಿ
Vande Bharat Bullet train: ಇದೀಗ ವಂದೇ ಭಾರತ್ ಎಕ್ಸ್‌ಪ್ರೆಸ್ ಐಸ್ಪೀಡ್ ರೈಲು ದೇಶಾದ್ಯಂತ ಸಂಚಾರ ಮಾಡುತ್ತಿದೆ. ಅಲ್ಲದೆ, ಇದು ಹೈಸ್ಪೀಡ್ ಐಷಾರಾಮಿ ಸೌಲಭ್ಯಗಳನ್ನು ಹೊಂದಿದ್ದು, ಪ್ರಯಾಣಿಕರನ್ನು ತನ್ನೆಡೆಗೆ ಸೆಳೆಯುತ್ತಲಿದ್ದು, ಈ ಮೂಲಕ ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಲಿದೆ. ಹಾಗೆಯೇ ಇದೀಗ ವಂದೇ ಭಾರತ್ ಮಾದರಿಯಲ್ಲೇ ಬುಲೆಟ್ ಟ್ರೈನ್ ಶೀಘ್ರದಲ್ಲೇ ಟ್ರ್ಯಾಕ್‌ಗಿಳಿಯಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಈ ರೈಲು ಏನೆಲ್ಲ ಸೌಲಭ್ಯಗಳನ್ನು ಹೊಂದಿರಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ವಂದೇ ಭಾರತ್ ಶೈಲಿಯ ಸ್ವದೇಶಿ ನಿರ್ಮಿತ ಬುಲೆಟ್ ರೈಲು ಶೀಘ್ರದಲ್ಲೇ ಟ್ರ್ಯಾಕ್‌ಗೆ ಇಳಿಯಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನು ಈ ಸ್ಥಳೀಯ ಬುಲೆಟ್ ರೈಲಿನ ಅಭಿವೃದ್ಧಿಯನ್ನು ಪ್ರಾರಂಭಲಾಗಿದ್ದು, ಇದು ಗಂಟೆಗೆ 250 ಕಿಲೋ ಮೀಟರ್ ವೇಗದ ಸಾಮರ್ಥ್ಯವನ್ನು ಹೊಂದಿದೆ ಎಂದು ರೈಲ್ವೆ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಈ ರೈಲು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ರೈಲುಗಳ ವೇಗವನ್ನು ಹಿಂದಿಕ್ಕುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ.

"ಈ ರೈಲನ್ನು ವಂದೇ ಭಾರತ್ ಮಾದರಿಯಲ್ಲೇ ನಿರ್ಮಾಣ ಮಾಡಲಾಗುತ್ತಿದೆ. ಇದರ ಗರಿಷ್ಠ 220 ಕಿಮೀ ವೇಗ ಇರಲಿದೆ. ಈ ಹೈಸ್ಪೀಡ್ ರೈಲಿನ ವಿನ್ಯಾಸಗಳನ್ನು ಚೆನ್ನೈನಲ್ಲಿರುವ ಭಾರತೀಯ ರೈಲ್ವೆಯ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF)ಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ," ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದೀಗ ನಿರ್ಮಾಣ ಹಂತದಲ್ಲಿರುವ ಅಹಮದಾಬಾದ್-ಮುಂಬೈ ಮಾರ್ಗದಲ್ಲಿ ಕಾರ್ಯನಿರ್ವಹಿಸುವ ಬುಲೆಟ್ ರೈಲುಗಳಿಗೆ ಭಾರತವು ಜಪಾನ್ ತಂತ್ರಜ್ಞಾನವನ್ನು ಅಳವಡಿಕೆ ಮಾಡಿದೆ. ಭಾರತವು ಮುಂಬೈ-ಅಹಮದಾಬಾದ್ ಮಾರ್ಗದಲ್ಲಿ ಪ್ಲಾನ್ ಮಾಡಿರುವ ಶಿಂಕನ್‌ಸೆನ್ E5 ಸರಣಿಯ ಬುಲೆಟ್ ರೈಲುಗಳು ಗಂಟೆಗೆ 320 ಕಿಲೋ ಮೀಟರ್ ವೇಗದಲ್ಲಿ ಸಂಚರಿಸಲಿದೆ.
ಭಾರತೀಯ ರೈಲ್ವೆಯು ರೈಲುಗಳ ವೇಗವನ್ನು ಹೆಚ್ಚಿಸುವುದರ ಮೇಲೆ ಹೆಚ್ಚು ಗಮನಹರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ಪ್ರಸ್ತುತ ವಂದೇ ಭಾರತ್ ರೈಲುಗಳು 100 ಕಿಲೋ ಮೀಟರ್ ವೇಗವನ್ನು 52 ಸೆಕೆಂಡುಗಳಲ್ಲಿ ತಲುಪಲಿವೆ.
ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ವಂದೇ ಭಾರತ್ ರೈಲುಗಳನ್ನು ಐಸಿಎಫ್ ತಯಾರಿಸಿದ್ದು, ಇನ್ನು ಹೊಸದಾಗಿ ಬರಲಿರುವ ಬುಲೆಟ್ ರೈಲುಗಳು ಇತ್ತೀಚೆಗೆ ಘೋಷಿಸಲಾದ ಉತ್ತರ, ದಕ್ಷಿಣ ಮತ್ತು ಪೂರ್ವ ಕಾರಿಡಾರ್‌ಗಳಲ್ಲಿ ಕಾರ್ಯನಿರ್ವಹಿಸಲಿವೆ. ಹೊಸ ಕಾರಿಡಾರ್‌ಗಳಿಗೆ ಹೆಚ್ಚು ಭಾರತೀಯ ತಂತ್ರಜ್ಞಾನವನ್ನು ಅಳವಡಿಕೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕಾರಿಡಾರ್‌ಗಳು ಪಶ್ಚಿಮ ಕಾರಿಡಾರ್‌ಗೆ ಪೂರಕವಾಗಿರುತ್ತವೆ, ಇದನ್ನು ಜಪಾನ್‌ನ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು ಯೋಜನೆಗಾಗಿ ಜಪಾನ್ ಇಂಟರ್‌ನ್ಯಾಷನಲ್ ಕೋಆಪರೇಷನ್ ಏಜೆನ್ಸಿ (JICA) ಸುಮಾರು 40,000 ಕೋಟಿ ರೂಪಾಯಿ ಸಾಲವನ್ನು ಒದಗಿಸುತ್ತಿದೆ.
ಒಟ್ಟು ಯೋಜನಾ ವೆಚ್ಚ 1.08 ಲಕ್ಷ ಕೋಟಿ ರೂಪಾಯಿಯಲ್ಲಿ ಭಾರತದ ಮೊದಲ ಬುಲೆಟ್ ಟ್ರೈನ್ ಯೋಜನೆಯನ್ನು ಕಾರ್ಯಗತಗೊಳಿಸುವ ಜವಾಬ್ದಾರಿಯನ್ನು ಹೊಂದಿದೆ.












Click it and Unblock the Notifications