ನಿರೀಕ್ಷಿಸಿ! 1,000 ರೂಪಾಯಿ ನೋಟು ಮತ್ತೆ ಬರಲಿದೆ

Posted By:
Subscribe to Oneindia Kannada

ನವದೆಹಲಿ, ನವೆಂಬರ್ 10: ಪ್ರಧಾನಿ ನರೇಂದ್ರ ಮೋದಿ ಅವರು 500 ಹಾಗೂ 1000 ರೂಪಾಯಿ ನೋಟುಗಳ ಚಾಲನೆಯನ್ನು ರದ್ದುಗೊಳಿಸಿ ಮಂಗಳವಾರ ಆದೇಶ ಹೊರಡಿಸಿದ್ದು ತಿಳಿದಿರಬಹುದು. ಇದಾದ ಬಳಿಕ ಹಳೆ ನೋಟುಗಳ ಬದಲಾವಣೆ ಪ್ರಕ್ರಿಯೆ ಈಗ ದೇಶದೆಲ್ಲೆಡೆ ಎಗ್ಗಿಲ್ದೆ ಸಾಗಿದೆ. ಹೊಸದಾಗಿ 500 ಹಾಗೂ 2000 ರೂಪಾಯಿ ನೋಟುಗಳು ಗುರುವಾರದಿಂದ ಜನ ಸಾಮಾನ್ಯರ ಕೈ ಸೇರಿದೆ. ಈ ನಡುವೆ 1,000 ರು ಸೇರಿದಂತೆ ಇನ್ನಷ್ಟು ಹೊಸ ನೋಟುಗಳನ್ನು ಆರ್ ಬಿಐ ಹೊರ ಹಾಕಲಿದೆ ಎಂಬ ಸುದ್ದಿ ಬಂದಿದೆ.

New Rs 1,000 note to released in few months

ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ ದಾಸ್ ಅವರು ಈ ಬಗ್ಗೆ ಮಾಹಿತಿ ನೀಡಿ, ಹಳೆ ನೋಟಿಗೆ ಬದಲಿಯಾಗಿ ಹೊಸ 1000 ರೂಪಾಯಿ ನೋಟು ಸೇರಿದಂತೆ, ಎಲ್ಲಾ ಮುಖಬೆಲೆಯ ನೋಟುಗಳನ್ನೂ ಸರ
್ಕಾರ ಹೊಸ ವಿನ್ಯಾಸ, ವರ್ಣ ಮತ್ತು ವೈಶಿಷ್ಠ್ಯ ಗಳೊಂದಿಗೆ ಬಿಡುಗಡೆ ಮಾಡಲಿದೆ ಎಂದಿದ್ದಾರೆ.

ಹೊಸ ಆಯಾಮ ಮತ್ತು ವಿನ್ಯಾಸವುಳ್ಳ 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ಕೆಲವೇ ತಿಂಗಳುಗಳಲ್ಲಿ ಬಿಡುಗಡೆ ಮಾಡಲಾಗುವುದು. ಹೊಸ 1000 ರೂಪಾಯಿಗಳ ನೋಟಿನಲ್ಲಿ ಹೊಸ ವರ್ಣ ಸಂಯೋಜನೆ ಹಾಗೂ ನೂತನ ವಿನ್ಯಾಸ ಇರುತ್ತದೆ. 500 ಮತ್ತು 1000 ರೂಪಾಯಿಗಳ ಹೊಸ ನೋಟು ಜಾರಿಗೆ ತುವ ಹಾಗೂ ಹಳೆ ನೋಟುಗಳನ್ನು ರದ್ದು ಪಡಿಸುವ ಪ್ರಕ್ರಿಯೆ ಕಳೆದ ಕೆಲವು ತಿಂಗಳುಗಳಿಂದ ಜಾರಿಯಲ್ಲಿತ್ತು. ಭಾರತೀಯ ರಿಸರ್ವ್ ಬ್ಯಾಂಕಿನ (ಆರ್​ಬಿಐ) ಕೇವಲ 2-3 ಮಂದಿ ಮಾತ್ರ ನೋಟುಗಳ ವಿನ್ಯಾಸ ರೂಪಿಸುವ ಕೆಲಸದಲ್ಲಿ ಭಾಗಿಗಳಾಗಿದ್ದರು ಎಂದು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A fully re-designed Rs 1,000 note will be introduced in the market in the next few months, Shaktikanta Das, economic affairs secretary announced today. Addressing the media in Delhi, Das said that the new Rs 1,000 note will be introduced with a new dimension, colour and added security features.
Please Wait while comments are loading...