ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ-ಚೀನಾ ಗಡಿ ಸಂಘರ್ಷಕ್ಕೆ ಅಂತ್ಯ ಹಾಡಲು ಹೊಸ ಪ್ರಸ್ತಾಪ

|
Google Oneindia Kannada News

ಲಡಾಖ್, ನವೆಂಬರ್ 11: ಭಾರತ-ಚೀನಾ ಗಡಿ ಭಾಗದ ಪ್ಯಾಂಗಾಂಗ್ ಸರೋವರದ ಉತ್ತರ ತೀರದಲ್ಲಿರುವ ವಿವಾದಾಸ್ಪದ ಎತ್ತರದ ಪ್ರದೇಶವನ್ನು ಇನ್ನು ತಾತ್ಕಾಲಿಕವಾಗಿ ನಿರ್ಜನ ಪ್ರದೇಶ ಎಂದು ಘೋಷಿಸುವ ಸಾಧ್ಯತೆ ಇದೆ. ಇಲ್ಲಿ ಭಾರತ ಅಥವಾ ಚೀನಾ ಪಡೆಗಳು ಪಹರೆ ತಿರುಗುವಂತಿಲ್ಲ. ಸುಮಾರು ಆರು ತಿಂಗಳಿನಿಂದ ಗಡಿಯಲ್ಲಿನ ಸೇನಾ ಬಿಕ್ಕಟ್ಟನ್ನು ಸಡಿಲಗೊಳಿಸುವ ಮತ್ತು ಉದ್ವಿಗ್ನತೆ ಶಮನಗೊಳಿಸುವ ಮಾರ್ಗವಾಗಿ ಈ ನಿರ್ಧಾರಕ್ಕೆ ಬರಲಾಗುತ್ತಿದೆ.

ಕೆಲವು ಸಮಯದವರೆಗೆ ಗಸ್ತು ರಹಿತ ಪ್ರದೇಶವೆಂದು ಕರೆಯುವ ಮೂಲಕ ಫಿಂಗರ್ 4 ರಿಂದ ಫಿಂಗರ್ 8ರವರೆಗಿನ ಪ್ರದೇಶಗಳಲ್ಲಿನ ಸೇನಾ ಪಡೆಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ಕೂಡ ಪ್ರಸ್ತಾಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಭಾರತದ 300 ಚದರ ಕಿ.ಮೀ ಭೂಭಾಗ ಆಕ್ರಮಿಸಿಕೊಂಡ ಚೀನಾಭಾರತದ 300 ಚದರ ಕಿ.ಮೀ ಭೂಭಾಗ ಆಕ್ರಮಿಸಿಕೊಂಡ ಚೀನಾ

ಹೀಗಾಗಿ ಭಾರತ ಮತ್ತು ಚೀನಾ ಪಡೆಗಳು ಪೂರ್ವ ಲಡಾಖ್‌ನ ವಿವಾದಾತಾತ್ಮಕ ಪ್ರದೇಶಗಳಿಂದ ತಮ್ಮ ಪ್ರಸ್ತುತದ ಸ್ಥಿತಿಯಿಂದ ಹಿಂದೆ ಸರಿಯಲಿವೆ. ಈ ಪ್ರಸ್ತಾಪವು ಜಾರಿಗೆ ಬಂದರೆ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ಎಂದು ಭಾರತ ಗುರುತಿಸಿರುವ ಫಿಂಗರ್ 8ರ ಪ್ರದೇಶದಿಂದ ಚೀನಾ ಹಿಂದಕ್ಕೆ ಸರಿಯಬೇಕಾಗಲಿದೆ.

New Proposal To End India-China Deadlock In Ladakh: Pangong Lake Could Be No Mans Land

ಫಿಂಗರ್ 8 ರಿಂದ 4ರ ನಡುವಿನ ಸುಮಾರು ಎಂಟು ಕಿಮೀ ಪ್ರದೇಶದೊಳಗೆ ಚೀನಾ ಬಂದಿದ್ದು, ತನ್ನ ಬಂಕರ್‌ಗಳನ್ನು ಮತ್ತು ಕೋಟೆಗಳನ್ನು ನಿರ್ಮಿಸಿದೆ. ಇದು ಭಾರತ ಕಾಯ್ದುಕೊಂಡಿರುವ ಯಥಾಸ್ಥಿತಿಯ ಸ್ಪಷ್ಟ ಉಲ್ಲಂಘನೆಯಾಗಿದೆ. ಎರಡೂ ಪಡೆಗಳು ಫಿಂಗರ್ 4 ಮತ್ತು ಫಿಂಗರ್ 8ರ ನಡುವೆ ಗಸ್ತು ತಿರುಗುತ್ತಿವೆ. ಆಗಾಗ ಮುಖಾಮುಖಿಯಾಗುವುದರಿಂದ ಉದ್ವಿಗ್ನತೆ ಉಂಟಾಗುತ್ತಿರುತ್ತದೆ.

ಭಾರತದ ಗಡಿಯೊಳಗೆ ಚೀನಾ ಸೇನೆ ಪ್ರವೇಶಿಸಿಯೇ ಇಲ್ಲ: ರಾಜನಾಥ್ ಸಿಂಗ್ಭಾರತದ ಗಡಿಯೊಳಗೆ ಚೀನಾ ಸೇನೆ ಪ್ರವೇಶಿಸಿಯೇ ಇಲ್ಲ: ರಾಜನಾಥ್ ಸಿಂಗ್

ಈ ಪ್ರಸ್ತಾಪಗಳು ಈ ಹಿಂದೆ ನಡೆದ ಎರಡು ಸೇನಾ ಕಮಾಂಡರ್‌ಗಳ ಸಭೆಯಲ್ಲಿ ಚರ್ಚೆಯಾಗಿವೆ. ಕಾರ್ಪ್ಸ್ ಕಮಾಂಡರ್ ಮಟ್ಟದಲ್ಲಿಎಂಟು ಸುತ್ತಿನ ಮಾತುಕತೆಗಳು ನಡೆದಿವೆ. ಈ ಭಾಗದಲ್ಲಿ ಚಳಿ ತೀವ್ರವಾಗುತ್ತಿದ್ದು, ಮೈನಸ್ 20-25 ಡಿಗ್ರಿಗೆ ತಾಪಮಾನ ಕುಸಿಯುವ ಸಾಧ್ಯತೆ ಇದೆ. ಇದರಿಂದ ಎರಡೂ ದೇಶಗಳ ಪಡೆಗಳಿಗೆ ಇಲ್ಲಿ ಉಳಿದುಕೊಳ್ಳುವುದು ಸವಾಲಾಗಲಿದೆ.

ಈ ರೀತಿಯ ಪ್ರಸ್ತಾಪಗಳನ್ನು ಮುಂದಿಡುತ್ತಿರುವುದು ಇದೇ ಮೊದಲಲ್ಲ. ಆದರೆ ಇದುವರೆಗೂ ಯಾವುದೇ ಬದಲಾವಣೆಗಳಾಗಿಲ್ಲ. ಪಡೆಗಳನ್ನು ಹಿಂದಕ್ಕೆ ಪಡೆದುಕೊಳ್ಳುವ ಮತ್ತು ತಾತ್ಕಾಲಿಕ ಗಡಿ ಗುರುತಿಸಿಕೊಂಡು ಅಲ್ಲಿಂದ ಆಚೆಗೆ ಚಟುವಟಿಕೆಗಳನ್ನು ಸೀಮಿತಗೊಳಿಸುವ ಬಗ್ಗೆ ಒಪ್ಪಂದಗಳು ನಡೆದಿಲ್ಲ.

English summary
To ease the tensions in Ladakh new proposal for disputed Pangong Lake area could be temporary no man's land.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X