New Parliament Inauguration: ಭಾಗವಹಿಸುವ, ಬಹಿಷ್ಕರಿಸುವ ಪಕ್ಷಗಳ ಪಟ್ಟಿ
ನವದೆಹಲಿ, ಮೇ 25: ಇದೇ ಬರುವ ಮೇ28ರಂದು ನೂತನ ಸಂಸತ್ ಭವನ ಉದ್ಘಾಟನೆಗೊಳ್ಳಲಿದೆ. ಸೆಂಟ್ರಲ್ ವಿಸ್ತಾ ಯೋಜನೆಯಡಿ ನಿರ್ಮಾಣಗೊಂಡಿರುವ ಈ ಕಾಂಪ್ಲೆಕ್ಸ್ ಅನ್ನು ಟಾಟಾ ಪ್ರಾಜೆಕ್ಟ್ ಲಿಮಿಟೆಡ್ ಸಂಸ್ಥೆ ನಿರ್ಮಿಸಿದೆ.
ಕಟ್ಟಡ ಉದ್ಘಾಟನೆಯ ವಿಚಾರದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಆರೋಪ/ಪ್ರತ್ಯಾರೋಪಗಳು ಮುಂದುವರಿದಿದ್ದು, ಹತ್ತೊಂಬತ್ತು ವಿಪಕ್ಷಗಳು ಉದ್ಘಾಟನಾ ಕಾರ್ಯಕ್ರಮಕ್ಕೆ ಗೈರಾಗುವುದಾಗಿ ಜಂಟಿ ಹೇಳಿಕೆಯನ್ನು ನೀಡಿದೆ.

ನೂತನ ಕಾಂಪ್ಲೆಕ್ಸ್ ನಲ್ಲಿ ದೊಡ್ಡ ಸಭಾಂಗಣಗಳು, ಗ್ರಂಥಾಲಯ, ಸಮಿತಿ ಕೊಠಡಿ, ಭಾರತದ ಪ್ರಜಾಪ್ರಭುತ್ವ ಪರಂಪರೆಯನ್ನು ಪ್ರದರ್ಶಿಸಲು ಭವ್ಯವಾದ ಸಂವಿಧಾನ ಭವನ, ಸಂಸತ್ತಿನ ಸದಸ್ಯರಿಗೆ ವಿಶ್ರಾಂತಿ ಕೋಣೆ, ಗ್ರಂಥಾಲಯ, ಬಹು ಕಮಿಟಿ ಕೊಠಡಿಗಳು, ಊಟದ ಪ್ರದೇಶಗಳು ಮತ್ತು ಸಾಕಷ್ಟು ಪಾರ್ಕಿಂಗ್ ಸ್ಥಳವನ್ನು ಹೊಂದಿದೆ.
ನೂತನ ಸಂಸತ್ತು ಉದ್ಘಾಟನೆ ಕಾರ್ಯಕ್ರಮಕ್ಕೆ ಗೈರಾಗುತ್ತಿರುವ ಮತ್ತು ಭಾಗವಹಿಸುತ್ತಿರುವ ಪಕ್ಷಗಳ ಪಟ್ಟಿ ಇಂತಿದೆ:
| ಕ್ರ.ಸಂಖ್ಯೆ | ಭಾಗವಹಿಸುತ್ತಿರುವ ಪಕ್ಷಗಳು | ಗೈರಾಗುತ್ತಿರುವ ಪಕ್ಷಗಳು |
| 1 | ಭಾರತೀಯ ಜನತಾ ಪಕ್ಷ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ |
| 2 | ಬಿಜು ಜನತಾದಳ | ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) |
| 3 | ವೈಎಸ್ ಆರ್ ಸಿಪಿ | ಆಮ್ ಆದ್ಮಿ ಪಾರ್ಟಿ |
| 4 | ಬಹುಜನ ಸಮಾಜ ಪಕ್ಷ | ಶಿವಸೇನೆ (ಉದ್ದವ್ ಠಾಕ್ರೆ ಬಣ) |
| 5 | ಜಾತ್ಯಾತೀಯ ಜನತಾದಳ (ಜೆಡಿಎಸ್) | ಸಮಾಜವಾದಿ ಪಾರ್ಟಿ |
| 6 | ಶಿರೋಮಣಿ ಅಕಾಲಿದಳ | ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) |
| 7 | ಲೋಕ ಜನಶಕ್ತಿ ಪಾರ್ಟಿ | ಜಾರ್ಖಂಡ್ ಮುಕ್ತಿ ಮೋರ್ಚಾ |
| 8 | ತೆಲುಗುದೇಶಂ | ಕೇರಳ ಕಾಂಗ್ರೆಸ್ (ಮಣಿ ಬಣ) |
| 9 | ಶಿವಸೇನೆ | ವಿಧುತಲೈ ಚಿರುತಾಯಿಗಲ್ ಕಚ್ಚಿ |
| 10 | ನ್ಯಾಶನಲ್ ಪೀಪಲ್ಸ್ ಪಾರ್ಟಿ | ರಾಷ್ಟ್ರೀಯ ಲೋಕದಳ |
| 11 | ನ್ಯಾಶನಲಿಸ್ಟ್ ಡೆಮೊಕ್ರಾಟಿಕ್ ಪ್ರೊಗ್ರೆಸ್ಸೀವ್ ಪಾರ್ಟಿ | ತೃಣಮೂಲ ಕಾಂಗ್ರೆಸ್ |
| 12 | ಸಿಕ್ಕಿಂ ಕ್ರಾಂತಿಕಾರಿ ಮೋರ್ಚ | ಜನತಾದಳ (ಸಂಯುಕ್ತ) |
| 13 | ಜನನಾಯಕ ಜನತಾ ಪಾರ್ಟಿ | ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ |
| 14 | ಎಐಎಡಿಎಂಕೆ | ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ-ಎಂ) |
| 15 | ಐಎಂಕೆಎಂಕೆ | ರಾಷ್ಟ್ರೀಯ ಜನತಾದಳ |
| 16 | ಆರ್ ಪಿಐ | ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ |
| 17 | ಮಿಜೋ ನ್ಯಾಶನಲ್ ಫ್ರಂಟ್ | ನ್ಯಾಷನಲ್ ಕಾನ್ಫರೆನ್ಸ್ |
| 18 | ತಮಿಳ್ ಮನಿಲಾ ಕಾಂಗ್ರೆಸ್ | ರಿವ್ಯಾಲ್ಯೂಶೇನರಿ ಸೋಶಿಯಲಿಸ್ಟ್ ಪಾರ್ಟಿ |
| 19 | ಐಟಿ ಎಫ್ ಟಿ (ತ್ರಿಪುರ) | ಮರುಮಾಲಾರ್ಚಿ ದ್ರಾವಿಡ ಮುನ್ನೇತ್ರ ಕಳಗಂ (ಎಂಡಿಎಂಕೆ) |
| 20 | ಬೋಡೋ ಪೀಪಲ್ಸ್ ಪಾರ್ಟಿ | |
| 21 | ಪಟ್ಟಾಲಿ ಮಕ್ಕಳ ಕಚ್ಚಿ | |
| 22 | ಎಂಜಿಪಿ | |
| 23 | ಅಪ್ನಾದಳ | |
| 24 | ಎಜಿಪಿ |
ಉದ್ಘಾಟನೆ ಕಾರ್ಯಕ್ರಮವನ್ನು ಮೊದಲು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಹಿಷ್ಕರಿಸುವುದಾಗಿ ಹೇಳಿದ್ದರು. "ಸಂಸತ್ತು ಕೇವಲ ಹೊಸ ಕಟ್ಟಡವಲ್ಲ. ಇದು ಹಳೆಯ ಸಂಪ್ರದಾಯಗಳು, ಮೌಲ್ಯಗಳು, ಪೂರ್ವನಿದರ್ಶನಗಳು ಮತ್ತು ನಿಯಮಗಳೊಂದಿಗೆ ಸ್ಥಾಪನೆಯಾಗಿದೆ.
"ಇದು ಭಾರತೀಯ ಪ್ರಜಾಪ್ರಭುತ್ವದ ಅಡಿಪಾಯವಾಗಿದೆ. ಪ್ರಧಾನಿ ಮೋದಿ ಅವರಿಗೆ ಅದು ಅರ್ಥವಾಗುವುದಿಲ್ಲ. ಅವರಿಗೆ ಹೊಸ ಕಟ್ಟಡದ ಉದ್ಘಾಟನೆಯು ನಾ, ನಾನು, ನನ್ನದು ಎಂಬುದಾಗಿದೆ. ಆದ್ದರಿಂದ ನಾವು ಅದರಲ್ಲಿ ಭಾಗಿಯಾಗುವುದಿಲ್ಲ" ಎಂದು ಪಕ್ಷದ ಟಿಎಂಸಿ ಸಂಸದ ಡೆರೆಕ್ ಒಬ್ರೇನ್ ಟ್ವೀಟ್ ಮಾಡಿದ್ದರು.












Click it and Unblock the Notifications