World Book Fair 2026: ನವದೆಹಲಿ ವಿಶ್ವ ಪುಸ್ತಕ ಮೇಳ ಯಶಸ್ವಿ ಮುಕ್ತಾಯ, 20% ಸಂದರ್ಶಕರ ಹೆಚ್ಚಳ
ನವದೆಹಲಿ: ನವದೆಹಲಿಯ ಪ್ರಗತಿ ಮೈದಾನದಲ್ಲಿ ಜ್ಞಾನದ ಹಬ್ಬವಾಗಿ ಮಾರ್ಪಟ್ಟಿದ್ದ 53ನೇ ಆವೃತ್ತಿಯ ವಿಶ್ವ ಪುಸ್ತಕ ಮೇಳಕ್ಕೆ (Book Fair 2026) ಭಾನುವಾರ ಅತ್ಯಂತ ಯಶಸ್ವಿಯಾಗಿ ತೆರೆ ಬಿದ್ದಿದೆ. ಈ ವರ್ಷ ಮೊದಲ ಬಾರಿಗೆ ಜಾರಿಗೆ ತಂದ 'ಉಚಿತ ಪ್ರವೇಶ'ದ ನಿರ್ಧಾರವು ಮೇಳದ ಯಶಸ್ಸಿಗೆ ಪ್ರಮುಖ ಕಾರಣವಾಯಿತು. ಕಳೆದ 2025ಕ್ಕೆ ಹೋಲಿಸಿದರೆ ಸಂದರ್ಶಕರ ಸಂಖ್ಯೆಯಲ್ಲಿ ಸುಮಾರು ಶೇಕಡಾ 20 ರಷ್ಟು ಹೆಚ್ಚಾಗಿದ್ದು ಕಂಡು ಬಂತು. ವಿಶೇಷವಾಗಿ ವಿದ್ಯಾರ್ಥಿಗಳು, ಕುಟುಂಬಗಳು ಮತ್ತು ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕೇಂದ್ರ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ನ್ಯಾಷನಲ್ ಬುಕ್ ಟ್ರಸ್ಟ್ (NBT) ಈ ಪುಸ್ತಕ ಮೇಳ ಆಯೋಜಿಸಿತ್ತು. ಸಾಹಿತ್ಯ ಪ್ರೇಮಿಗಳಿಂದ ವ್ಯಾಪಕ ಸ್ಪಂದನೆ ವ್ಯಕ್ತವಾಯಿತು.
ಈ ಪುಸ್ತಕ ಮೇಳಕ್ಕೆ ಉಚಿತ ಪ್ರವೇಶ ಇದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಜನರನ್ನು ಸೆಳೆಯಿತು. ಇನ್ನೂ ಮೇಳಕ್ಕೆ ಬಂದ ಪ್ರೇಕ್ಷಕರು ಕೇವಲ ವೀಕ್ಷಕರಾಗಿ ಉಳಿಯದೆ, ತಮ್ಮಿಷ್ಟದ ಪುಸ್ತಕಗಳನ್ನು ಖರೀದಿಯಲ್ಲೂ ಆಸಕ್ತಿ ತೋರಿದರು. ಎನ್‌ಬಿಟಿ ಮಳಿಗೆಗಳಲ್ಲಿ ಪುಸ್ತಕಗಳ ಮಾರಾಟ ಶೇಕಡಾ 30ರಷ್ಟು ಏರಿಕೆ ಕಂಡು ಬಂತು. ಇದರಿಂದ ಪ್ರಕಾಶಕರು ಕೂಡ ಉತ್ತಮ ಲಾಭ ಗಳಿಸಿದ್ದಾರೆ. ಮಕ್ಕಳ ಪುಸ್ತಕಗಳು ಮತ್ತು ಸಾಮಾನ್ಯ ಜ್ಞಾನದ ಕೃತಿಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿತ್ತು. ಹೊಸ ರೀತಿಯ ಮಳಿಗೆಗಳನ್ನು ತೆರೆಯಲಾಗಿತ್ತು. ಕತಾರ್, ಭಾರತೀಯ ಸಂಸ್ಕೃತಿ ಸಚಿವಾಲಯ, ಹಾರ್ಪರ್‌ಕಾಲಿನ್ಸ್ ಮತ್ತು ರಾಜ್‌ಕಮಲ್ ಪ್ರಕಾಶನ ಸೇರಿದಂತೆ ಹಲವು ಸಂಸ್ಥೆಗಳಿಗೆ ಅಭಿನಂದನೆಯ ಪ್ರಮಾಣ ಪತ್ರಗಳನ್ನು ನೀಡಿ ಸನ್ಮಾನಿಸಲಾಯಿತು.

ಮೇಳದಲ್ಲಿ ವಿನ್ಯಾಸ ಮಾಡಿದ್ದ "ಭಾರತೀಯ ಮಿಲಿಟರಿ ಇತಿಹಾಸ: ಶೌರ್ಯ ಮತ್ತು ಬುದ್ಧಿವಂತಿಕೆ @75" ಎಂಬ ವಿಶೇಷ ಥೀಮ್ ಪೆವಿಲಿಯನ್ ಈ ವರ್ಷದ ಮೇಳದ ಪ್ರಮುಖ ಆಕರ್ಷಣೆ ಆಗಿತ್ತು. ಭಾರತೀಯ ಸೇನೆಯ ಇತಿಹಾಸವನ್ನು ಬಿಂಬಿಸುವ 500ಕ್ಕೂ ಹೆಚ್ಚು ಪುಸ್ತಕಗಳು ಜೋಡಿಸಿಟ್ಟು ಐಎನ್‌ಎಸ್ ವಿಕ್ರಾಂತ್, ಅಧುನಿಕ ಟ್ಯಾಂಕ್‌ಗಳ ಮಾದರಿಗಳನ್ನು ಪ್ರದರ್ಶಿಸಿ ಪುಸ್ತಕ ಪ್ರೇಮಿಗಳನ್ನು ಸೆಳೆಯಲಾಯಿತು. ಪರಮವೀರ ಚಕ್ರ ವಿಜೇತರ ಶೌರ್ಯದ ಕಥೆಗಳನ್ನು ವಿವರಿಸುವ ಕಾರ್ಯಕ್ರಮಗಳು ಯುವಕರಲ್ಲಿ ದೇಶಭಕ್ತಿ ಬಡಿದೆಬ್ಬಿಸಿದವು. ರಕ್ಷಣಾ ಪಡೆಗಳ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದು, ಆಗಮಿಸಿದ್ದ ಓದುಗರಲ್ಲಿ ಜ್ಞಾನ ಮತ್ತು ಶಿಸ್ತಿನ ಮಹತ್ವ ವಿವರಿಸಿದರು.
ವಿದೇಶಿ ಸಾಹಿತ್ಯ ವಿನಿಮಯ
2026 ಜನವರಿ 10 ರಿಂದ 18ರವರೆಗೆ ನಡೆದ ಮಳೆದಲ್ಲಿ 35 ಕ್ಕೂ ಹೆಚ್ಚು ದೇಶಗಳಿಂದ 1,000 ಕ್ಕೂ ಹೆಚ್ಚು ಪ್ರಕಾಶಕರ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು, 600ಕ್ಕೂ ಕಾರ್ಯಕ್ರಮಗಳು ನಡೆದವು. 1,000ಕ್ಕೂ ಅಧಿಕ ಭಾಷಣಕಾರರು ಅನೇಕ ವಿಷಯಗಳನ್ನು ಚರ್ಚಿಸಿದರು. ಮೇಳದ ಉದ್ದಕ್ಕೂ ಓದುಗರು, ವಿದ್ಯಾರ್ಥಿಗಳು, ಕುಟುಂಬಗಳು, ಲೇಖಕರು ಮತ್ತು ಪ್ರಕಾಶನ ವೃತ್ತಿಪರರು ನೆರೆದಿದ್ದರು, ಉತ್ಸಾಹಭರಿತ ಮತ್ತು ಎಲ್ಲರನ್ನೂ ಒಳಗೊಳ್ಳುವ ಸಾಹಿತ್ಯಿಕ ವಾತಾವರಣವನ್ನು ಸೃಷ್ಟಿಸಿದರು.
ವಿಶ್ವ ಪುಸ್ತಕ ಮೇಳಕ್ಕೆ ಅಂತಾರಾಷ್ಟ್ರೀಯ ಮೆರಗು ನೀಡಲು ಕತಾರ್ ಮತ್ತು ಸ್ಪೇನ್ ದೇಶಗಳು ಕ್ರಮವಾಗಿ ಅತಿಥಿ ದೇಶ ಮತ್ತು ಫೋಕಸ್ ದೇಶಗಳಾಗಿ ಭಾಗವಹಿಸಿದ್ದವು. ಕವಿತೆ, ರಂಗಭೂಮಿ ಮತ್ತು ಕೃತಕ ಬುದ್ಧಿಮತ್ತೆಯ (AI) ಬಳಕೆ ಕುರಿತು ಸಮಾಲೋಚಿಸಿದರು. ಭಾರತ ಮತ್ತು ಪಶ್ಚಿಮ ಏಷ್ಯಾ ದೇಶಗಳ ನಡುವಿನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಎತ್ತಿ ತೋರಿಸುವ ಹಲವು ಗೋಷ್ಠಿಗಳು ನಡೆದವು.
ಇನ್ನೂ ಪುಸ್ತಕ ಮೇಳದಲ್ಲಿ ಮಕ್ಕಳಿಗಾಗಿ "ಕಿಡ್ಜ್ ಎಕ್ಸ್‌ಪ್ರೆಸ್" ಎಂಬ ಪ್ರತ್ಯೇಕ ಮಂಟಪವನ್ನು ಸ್ಥಾಪಿಸಲಾಗಿತ್ತು. ಕಿಡ್ ಜೋನ್ ರೀತಿಯಲ್ಲಿತ್ತು. ಅಲ್ಲಿ ಕಥೆ ಹೇಳುವ ಸ್ಪರ್ಧೆಗಳು, ಗಣಿತದ ಕಾರ್ಯಾಗಾರಗಳು ಮತ್ತು ಕಲಾ ಚಟುವಟಿಕೆಗಳು ನಡೆದವು. ಇವು ಮಕ್ಕಳನ್ನು ರಂಜಿಸುವಲ್ಲಿ ಯಶಸ್ವಿಯಾದವು. ಇದರೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ರಿಕಿ ಕೇಜ್ ಅವರಂತಹ ಪ್ರಸಿದ್ಧ ಕಲಾವಿದರು ಮತ್ತು ಸೇನಾ ಬ್ಯಾಂಡ್‌ಗಳ ಪ್ರದರ್ಶನವು ಸಂಜೆಯ ಹೊತ್ತು ಮೇಳಕ್ಕೆ ಮೆರಗು ನೀಡಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ, ಧರ್ಮೇಂದ್ರ ಪ್ರಧಾನ್ ಸೇರಿದಂತೆ ಹಲವು ಗಣ್ಯರು ಪುಸ್ತಕ ಮೇಳ ಕಣ್ತುಂಬಿಕೊಂಡರು.
ನವದೆಹಲಿ ವಿಶ್ವ ಪುಸಕ್ತ ಮೇಳ 2026 (NDWBF) ಅನ್ನು ಮೊದಲ ದಿನ ಕತಾರ್ ಮತ್ತು ಸ್ಪೇನ್‌ನ ಗೌರವಾನ್ವಿತ ಸಂಸ್ಕೃತಿ ಸಚಿವರ ಸಮ್ಮುಖದಲ್ಲಿ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್ ಉದ್ಘಾಟಿಸಿದರು. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್, ಭಾರತೀಯ ಸಶಸ್ತ್ರ ಪಡೆಗಳ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ಸೇನಾ ಸಿಬ್ಬಂದಿಯ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ, ಮಿಜೋರಾಂನ ರಾಜ್ಯಪಾಲರಾದ ಜನರಲ್ (ನಿವೃತ್ತ) ವಿ.ಕೆ. ಸಿಂಗ್, ತಮಿಳುನಾಡಿನ ರಾಜ್ಯಪಾಲರಾದ ಆರ್. ಎನ್. ರವಿ ಹೀಗೆ ಅನೇಕ ರಾಜ್ಯಗಳ ಪ್ರಮುಖ ಗಣ್ಯರು ಆಗಮಿಸಿದ್ದರು. ಪ್ರಕಾಶಕರು ಹಾಗೂ ಪುಸ್ತಕ ಪ್ರೇಮಿಗಳಿಗೆ ಶುಭ ಕೋರಿದ್ದರು.
ಪ್ರಧಾನಿ ನರೇಂದ್ರ ಮೋದಿಯವರು "ನಾಗರಿಕರು ಓದಿದರೆ ದೇಶವು ಮುನ್ನಡೆಯುತ್ತದೆ" ಎಂಬ ಹೇಳಿಕೆಯಂತೆ ಹಾಗೂ ಆಶಯದಂತೆ ಈ ಮೇಳವು ಭಾರತದ ಓದುವ ಸಂಸ್ಕೃತಿಯನ್ನು ಎತ್ತಿ ಹಿಡಿಯಿತು. ಅನೇಕ ಓದುಗರನ್ನು ತಲುಪಿತು. ಮೇಳದ ಯಶಸ್ಸಿನ ಬೆನ್ನಲ್ಲೇ ಮುಂದಿನ ವರ್ಷದ ಪುಸ್ತಕ ಮೇಳದ ದಿನಾಂಕವನ್ನು ಘೋಷಿಸಲಾಗಿದೆ. 2027ರ ಜನವರಿ 16 ರಿಂದ 24 ರವರೆಗೆ 54ನೇ ಆವೃತ್ತಿಯ ವಿಶ್ವ ಪುಸ್ತಕ ಮೇಳ ನಡೆಸಲು ತಿರ್ಮಾನಿಸಲಾಗಿದೆ ಎಂದು ಇದೇ ಮೇಳದಲ್ಲಿ ಮಾಹಿತಿ ನೀಡಲಾಯಿತು. ಮುಂದಿನ ವರ್ಷವೂ ಸಹ ಸಾರ್ವಜನಿಕರಿಗೆ ಪ್ರವೇಶ ಉಚಿತವಾಗಿರಲಿದೆ ಎಂದು ಆಯೋಜಕ ಸಂಸ್ಥೆ ನ್ಯಾಷನಲ್ ಬುಕ್ ಟ್ರಸ್ಟ್ ಮಾಹಿತಿ ನೀಡಿತು.
-
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
ಭಾರತದ ಸ್ಪೈಸ್ ಗಾರ್ಡನ್ ಕೇರಳ: ಇತಿಹಾಸ ಮತ್ತು ಪ್ರಕೃತಿಯ ಸುಂದರ ಕಥೆ -
RCB ಮ್ಯಾಚ್ ನೋಡಲು ಬರುವವರ ಗಮನಕ್ಕೆ: 44 ಮೆಟ್ರೋ ನಿಲ್ದಾಣಗಳಲ್ಲಿದೆ ಪಾರ್ಕಿಂಗ್ ವ್ಯವಸ್ಥೆ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
IPL ಟಿಕೆಟ್ ಕೇಳಿದ ಶಾಸಕರಿಗೆ ಸರ್ಕಾರ ಸಿಹಿಸುದ್ದಿ: ಆರ್ಸಿಬಿ ಮೊದಲ ಪಂದ್ಯ ವೀಕ್ಷಣೆಗೆ ಸಿಗಲಿದೆ ತಲಾ 2 ಟಿಕೆಟ್ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
B Khata: ಬಿ ಖಾತಾದಿಂದ ಎ ಖಾತಾ: ಹಳೆಯ ಗೈಡ್ಲೈನ್ ವ್ಯಾಲ್ಯೂ ವಿಧಿಸಲು ವಿಧಾನಸಭೆಯಲ್ಲಿ ಚರ್ಚೆ









Click it and Unblock the Notifications