ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಜ್ರಿವಾಲ್ ಆಮ್ ಆದ್ಮಿಯನ್ನು ಅಧಿಕಾರಕ್ಕೆ ತರುತ್ತಾರಾ?

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ದೇಶದ ರಾಜಧಾನಿ ನವದೆಹಲಿಯಲ್ಲಿ ವಿಧಾನಸಭೆ ಚುನಾವಣಾ ಲೆಕ್ಕಾಚಾರ ಆರಂಭವಾಗಿದೆ. ಈ ಬಾರಿಯ ದೆಹಲಿ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ಅದರಲ್ಲೂ ಕಳೆದ ಬಾರಿ ಅಧಿಕಾರ ನಡೆಸಿದ ಆಮ್ ಆದ್ಮಿ ಪಕ್ಷ ನಡೆಸಿದ ಹೈಡ್ರಾಮಗಳ ನಂತರ ಈ ಬಾರಿಯ ಚುನಾವಣೆಯಲ್ಲಿ ಯಾರಿಗೆ ಸರ್ಕಾರ ರಚಿಸುವ ಅವಕಾಶ ದೊರೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.

ಜಾರ್ಖಂಡ್ ಮತ್ತು ಜಮ್ಮ ಕಾಶ್ಮೀರ ಚುನಾವಣೆಗಳ ಬಗ್ಗೆ ಒನ್ ಇಂಡಿಯಾಗೆ ವಿಶ್ಲೇಷಣೆಗಳನ್ನು ನೀಡಿದ್ದ ವಿಶ್ಲೇಷಕ ಡಾ.ಸಂದೀಪ್ ಶಾಸ್ತ್ರೀ ಅವರು ದೆಹಲಿ ಚುನಾವಣೆಗಳ ಬಗ್ಗೆಯೂ ತಮ್ಮ ವಿಶ್ಲೇಷಣೆಯನ್ನು ಹಂಚಿಕೊಂಡಿದ್ದಾರೆ. ಈ ಬಾರಿ ದೆಹಲಿಯಲ್ಲಿ ಬಿಜೆಪಿ ಮತ್ತು ಎಎಪಿ ಮುಖಾಮುಖಿಯಾಗಲಿದ್ದು, ಕಾಂಗ್ರೆಸ್ ವೋಟ್‌ಬ್ಯಾಂಕ್‌ ಅನ್ನು ಎಎಪಿ ವಶಪಡಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ.

ಆಮ್ ಆದ್ಮಿಗೆ ಹಿನ್ನಡೆ : ಕಳೆದ ವಿಧಾನಸಭೆ ಚುನಾವಣೆಯಲ್ಲಿ ದೆಹಲಿಯಲ್ಲಿ ಪ್ರಭಾವ ಬೀರಿದ್ದ ಆಮ್ ಆದ್ಮಿ ಪಕ್ಷ ಈ ಬಾರಿ ಹಿನ್ನಡೆ ಅನುಭವಿಸಲಿದೆ. ಅದರಲ್ಲೂ ಕಳೆದ ಬಾರಿ ಅಧಿಕಾರ ಸಿಕ್ಕಾಗ, ಅವಧಿಗೂ ಮುನ್ನ ರಾಜೀನಾಮೆ ನೀಡಿದ ಪಕ್ಷ ಈ ಚುನಾವಣೆಯಲ್ಲಿ ಅದಕ್ಕೆ ಸರಿಯಾದ ಬೆಲೆ ಕಟ್ಟಬೇಕಾಗುತ್ತದೆ.

ಅವಧಿಗೂ ಮುನ್ನ ರಾಜೀನಾಮೆ ನೀಡಿದ್ದು ಅವಸರದ ನಿರ್ಧಾರ ಎಂಬುದು ಸ್ವತಃ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರಿಗೂ ತಿಳಿದಿದೆ. ಅದಕ್ಕೆ ಅವರು ಲೋಕಸಭೆ ಚುನಾವಣೆಯಲ್ಲಿ ಬೆಲೆ ಕಟ್ಟಿಯೂ ಆಗಿದೆ. ಈಗ ಎದುರಾಗಿರುವ ವಿಧಾನಸಭೆ ಚುನಾವಣೆಯಲ್ಲಿಯೂ ಜನರು ಪಕ್ಷಕ್ಕೆ ಪಾಠ ಕಲಿಸಲಿದ್ದಾರೆ.

ಮೋದಿ ಮಂತ್ರ ಜಪಿಸಲಿದೆ ಬಿಜೆಪಿ : ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಮೋದಿ ಮಂತ್ರ ಜಪಿಸಲಿದೆ. ಪ್ರಚಾರ ಕಾರ್ಯದಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಮುಂದಾಳತ್ವ ವಹಿಸಲಿದ್ದಾರೆ. ದೆಹಲಿ ಬಿಜೆಪಿ ಘಟಕ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಮೋದಿ ಅವರನ್ನು ಮುಂದಿಟ್ಟುಕೊಂಡು ಅದು ಚುನಾವಣೆ ಎದುರಿಸಲಿದೆ.

ಕೇಜ್ರೀವಾಲ್, ಮೋದಿ ಫೈಟ್ : ದೇಶದ ಇತರ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಪ್ರಭಾವ ಹೆಚ್ಚಿದೆ. ಆದ್ದರಿಂದ ಈ ಬಾರಿಯ ಚುನಾವಣೆಯ ಕುತೂಹಲದ ಅಂಶವೆಂದರೆ ಅದು ಕೇಜ್ರಿವಾಲ್ ಮತ್ತು ಮೋದಿ ನಡುವಿನ ಸ್ಪರ್ಧೆ.

ಕಾಂಗ್ರೆಸ್‌ಗೆ ಸಂಕಷ್ಟ : ಈ ಬಾರಿಯ ದೆಹಲಿ ಚುನಾವಣೆಯ ಪ್ರಮುಖ ಅಂಶವೆಂದರೆ ಕಾಂಗ್ರೆಸ್. ಜನರು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿ ಆಮ್ ಆದ್ಮಿ ಪಕ್ಷವನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ. ಕಾಂಗ್ರೆಸ್ ವೋಟ್‌ಬ್ಯಾಂಕ್‌ ಅನ್ನು ದೋಚಲಿರುವ ಆಪ್, ಕಾಂಗ್ರೆಸ್ ಅನ್ನು ಮೂರನೇ ಸ್ಥಾನಕ್ಕೆ ತಳ್ಳಲಿದೆ. ಇತ್ತೀಚಿನ ಚುನಾವಣೆಗಳ ಫಲಿತಾಂಶ ನೋಡಿದರೆ ಕಾಂಗ್ರೆಸ್ ಕುಸಿತ ಕಾಣುತ್ತದೆ.

rahul gandhi

ದೆಹಲಿಯಲ್ಲಿ ಈ ಬಾರಿ ಆಪ್ ಮತ್ತು ಬಿಜೆಪಿ ನಡುವೆ ಸ್ಪರ್ಧೆ ನಡೆಯಲಿದೆ. ಈಗಿನ ಜನಮತ ಬಿಜೆಪಿ ಪರವಾಗಿಯೇ ಹೆಚ್ಚಾಗಿದೆ. ಬಿಜೆಪಿ ಚುನಾವಣೆಯಲ್ಲಿ ಗೆದ್ದು, ಸರ್ಕಾರ ರಚನೆ ಮಾಡಿದರೆ, ಅದಕ್ಕೆ ಪ್ರಬಲ ಪೈಪೋಟಿ ನೀಡುವ ಪ್ರತಿಪಕ್ಷ ಆಮ್ ಆದ್ಮಿ ಪಾರ್ಟಿಯಾಗಲಿದೆ.

English summary
While the Delhi elections is still sometime away, it is still a very interesting election especially after all the drama that the Aam Admi Party created. The toss up in Delhi will be between the AAP and the BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X