ರಾಜಧಾನಿಗೆ ಮತ್ತೆ ಕಳಂಕ: 4 ವರ್ಷದ ಬಾಲಕಿ ಗ್ಯಾಂಗ್ ರೇಪ್
ನವದೆಹಲಿ, ಅಕ್ಟೋಬರ್. 11: ರಾಜಧಾನಿ ದೆಹಲಿ ಮತ್ತೆ ಹೇಯ ಕೃತ್ಯಕ್ಕೆ ಬೆಚ್ಚಿ ಬಿದ್ದಿದೆ. ನಾಲ್ಕು ವರ್ಷದ ಬಾಲಕಿಯ ಮೇಲೆ ಗ್ಯಾಂಗ್ ರೇಪ್ ನಡೆದಿದೆ. ಶುಕ್ರವಾರ ಸಂಜೆ ನಡೆದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ದೆಹಲಿಯ ಸಫದರ್‌ಜಂಗ್ ಆಸ್ಪತ್ರೆಯಲ್ಲಿ ಗ್ಯಾಂಗ್ ರೇಪ್ ಗೊಳಗಾಗಿರುವ ನಾಲ್ಕು ವರ್ಷದ ಹೆಣ್ಣು ಮಗು ಸಾವು ಬದುಕಿನ ಮಧ್ಯೆ ಹೋರಾಡುತ್ತಿದೆ. ಶುಕ್ರವಾರ ಸಂಜೆ ದೆಹಲಿಯ ಕೇಶವ ಪುರಂ ಎಂಬಲ್ಲಿ ಮಗುವಿನ ಮೇಲೆ ಸಾಮೂಹಿಕ ಅತ್ಯಚಾರ ನಡೆದಿದ್ದು ,ಮನೆಯ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.[ಪಾಂಡವಪುರದಲ್ಲಿ ಯುವತಿ ಮೇಲೆ ಪುಂಡರ ಅತ್ಯಾಚಾರ]

ಬಾಲಕಿಯ ಮನೆಗೆ ಮತ್ತು ಆಸ್ಪತ್ರಗೆ ಭೇಟಿ ನೀಡಿರುವ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಸಾಂತ್ವನ ಹೇಳಿದ್ದಾರೆ. ಇದೊಂದು ಭೀಭತ್ಸ ಕೃತ್ಯ , ದೆಹಲಿಯಲ್ಲಿ ಇಂಥ ಘಟನೆಗಳಿಗೆ ಅಂತ್ಯವೇ ಇಲ್ಲವೇ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿದ್ದಾರೆ.[ವಿಡಿಯೋ ವಿಡಂಬನೆ : ಅತ್ಯಾಚಾರಕ್ಕೆ ಕಾರಣ ಯಾರು?]
ಬಾಲಕಿ ಮದ್ಯದಂಗಡಿ ಇದ್ದು ಅಲ್ಲಿಗೆ ಬಂದಿದ್ದ ಕುಡುಕರು ಕೃತ್ಯ ಎಸಗಿರುವ ಸಾಧ್ಯತೆಗಳಿವೆ ಎಂದು ಬಾಲಕಿಯ ಪೋಷಕರು ಅನುಮಾನ ವ್ಯಕ್ತ ಪಡಿಸಿದ್ದಾರೆ.
ಆಸ್ಪತ್ರೆಯಲ್ಲಿ ವೈದ್ಯರ ಪರೀಕ್ಷೆಯ ವೇಳೆ ಗ್ಯಾಂಗ್ ರೇಪ್ ನಡೆದಿರುವುದು ಧೃಡ ಪಟ್ಟಿದ್ದು, ಇದೀಗ ಬಾಲಕಿಯನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.
Visited 4 night shelter for women n family at Nizamudin n Jama Mazjid. Met such strong women. Sleeping in 1 night shelter. Good Night Delhi
— Swati Maliwal (@SwatiJaiHind) October 10, 2015 











Click it and Unblock the Notifications