ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇಪಾಳ ವಿಮಾನ ಪತನ: ನಾಪತ್ತೆಯಾದವರಿಗಾಗಿ ಶೋಧ- 2 ಕಪ್ಪು ಪೆಟ್ಟಿಗೆ ಪತ್ತೆ

|
Google Oneindia Kannada News

ನೇಪಾಳದಲ್ಲಿ ಇಂದು ಬೆಳಿಗ್ಗೆ ವಿಮಾನವೊಂದು ಪತನಗೊಂಡಿದ್ದು ನಾಪತ್ತೆಯಾದವರ ಹುಡುಕಾಟ ಕಾರ್ಯ ಮುಂದುವರೆದಿದೆ. ಈ ವೇಳೆ ರಕ್ಷಕರು ಅಪಘಾತದ ಸ್ಥಳದಿಂದ ಕಪ್ಪು ಪೆಟ್ಟಿಗೆಯನ್ನು ಪತ್ತೆಹಚ್ಚಿದ್ದಾರೆ. ಕಪ್ಪು ಪೆಟ್ಟಿಗೆಯಿಂದ ಕಾಕ್‌ಪಿಟ್ ಧ್ವನಿ ರೆಕಾರ್ಡರ್ ಮತ್ತು ಫ್ಲೈಟ್ ಡೇಟಾ ರೆಕಾರ್ಡರ್ ಮೂಲಕ ಅಪಘಾತದ ಕಾರಣವನ್ನು ತಿಳಿಯಬಹುದಾಗಿದೆ.

ಟ್ವಿನ್ ಇಂಜಿನ್ ಎಟಿಆರ್ 72 ವಿಮಾನ ಕಠ್ಮಂಡುವಿನಿಂದ ಪ್ರವಾಸಿ ಪಟ್ಟಣವಾದ ಪೋಖರಾಗೆ ಹಾರುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ತಾಂತ್ರಿಕ ದೋಷಗಳಿಂದ ಹೊಸದಾಗಿ ತೆರೆಯಲಾದ ವಿಮಾನ ನಿಲ್ದಾಣದಲ್ಲಿ ಇಳಿಯಲು ಪ್ರಯತ್ನಿಸುವಾಗ ಅದು ಪತನಗೊಂಡಿದೆ. ವಿಮಾನದಲ್ಲಿ 15 ವಿದೇಶಿ ಪ್ರಜೆಗಳು ಮತ್ತು ನಾಲ್ವರು ಸಿಬ್ಬಂದಿ ಸೇರಿದಂತೆ 68 ಪ್ರಯಾಣಿಕರು ಇದ್ದರು ಎಂದು ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ.

Breaking; ನೇಪಾಳ, ರನ್‌ವೇಯಲ್ಲಿ 68 ಪ್ರಯಾಣಿಕರಿದ್ದ ವಿಮಾನ ಪತನBreaking; ನೇಪಾಳ, ರನ್‌ವೇಯಲ್ಲಿ 68 ಪ್ರಯಾಣಿಕರಿದ್ದ ವಿಮಾನ ಪತನ

ಕಠ್ಮಂಡು ಪೋಸ್ಟ್ ಪ್ರಕಾರ, ರಕ್ಷಕರು ಇದುವರೆಗೆ ಅಪಘಾತದ ಅವಶೇಷಗಳಿಂದ 68 ಶವಗಳನ್ನು ಹೊರತೆಗೆದಿದ್ದಾರೆ, ಉಳಿದ ನಾಲ್ವರ ಹುಡುಕಾಟವನ್ನು ಮುಂದುರೆದಿದೆ. ವಿದೇಶಿಗರಲ್ಲಿ ಐವರು ಭಾರತೀಯರು, ನಾಲ್ವರು ರಷ್ಯನ್ನರು, ಇಬ್ಬರು ದಕ್ಷಿಣ ಕೊರಿಯಾದವರು ಮತ್ತು ಐರ್ಲೆಂಡ್, ಆಸ್ಟ್ರೇಲಿಯಾ, ಅರ್ಜೆಂಟೀನಾ ಮತ್ತು ಫ್ರಾನ್ಸ್‌ನ ತಲಾ ಒಬ್ಬರು ಸೇರಿದ್ದಾರೆ.

Nepal plane crash: Search for missing continues - 2 black boxes found

ಐವರು ಭಾರತೀಯರ ಪೈಕಿ ನಾಲ್ವರು ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆಯವರಾಗಿದ್ದು, ಜನವರಿ 13ರಂದು ರಜೆಯ ಮೇಲೆ ನೇಪಾಳಕ್ಕೆ ತೆರಳಿದ್ದರು ಎಂದು ತಿಳಿದು ಬಂದಿದೆ. "ಕಪ್ಪು ಪೆಟ್ಟಿಗೆಗಳನ್ನು ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರಕ್ಕೆ (CAAN) ಹಸ್ತಾಂತರಿಸಲಾಗಿದೆ" ಎಂದು ಯೇತಿ ಏರ್‌ಲೈನ್ಸ್ ವಕ್ತಾರ ಸುದರ್ಶನ್ ಬರ್ತೌಲಾ ತಿಳಿಸಿದ್ದಾರೆ.

English summary
A plane crashed in Nepal this morning and the search continues for those missing. Rescuers recovered a black box from the accident site.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X