ಈ ವರ್ಷ ನೀಟ್ ತಲೆಬಿಸಿ ಇಲ್ಲ, ಸಿಇಟಿ ಸಾಕು

Written By:
Subscribe to Oneindia Kannada

ನವದೆಹಲಿ, ಮೇ 24: ಅಂತೂ ಇಂತು ವಿದ್ಯಾರ್ಥಿಗಳು ಅಂತಿಮವಾಗಿ ನಿಟ್ಟುಸಿರು ಬಿಡುವಂತೆ ಆಗಿದೆ.ಮೆಡಿಕಲ್ [ಡೆಂಟಲ್ ]ಪ್ರವೇಶಕ್ಕೆ ಸಂಬಂಧಿಸಿದ ನೀಟ್(ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ) ಪರೀಕ್ಷೆ ಕುರಿತು ಕೇಂದ್ರ ಸರ್ಕಾರ ಹೊರಡಿಸಿದ್ದ ಸುಗ್ರಿವಾಜ್ಞೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮಂಗಳವಾರ ಅಂಕಿತ ಹಾಕಿದ್ದಾರೆ.

ಸುಗ್ರೀವಾಜ್ಞೆ ಹೊರಡಿಸಲು ಕಾರಣವಾದ ಅಂಶಗಳ ಬಗ್ಗೆಕೇಂದ್ರ ಆರೋಗ್ಯ ಖಾತೆ ಸಚಿವ ಜೆ.ಪಿ.ನಡ್ಡಾ ಅವರು ಸೋಮವಾರ ರಾಷ್ಟ್ರಪತಿ ಮುಖರ್ಜಿ ಅವರನ್ನು ಭೇಟಿ ಮಾಡಿ ಮಾಹಿತಿ ನೀಡಿದ್ದರು.[ಕರ್ನಾಟಕ ಪಿಯು ಪತ್ರಿಕೆ ಸೋರಿಕೆ ಕತೆ ವ್ಯಥೆ]

exam

ಆದರೆ ಸುಗ್ರಿವಾಜ್ಞೆ ಈ ವರ್ಷಕ್ಕೆ ಮಾತ್ರ ಅನ್ವಯವಾಗಲಿದೆ. ಸುಪ್ರೀಂ ಕೋರ್ಟ್ ನೀಟ್ ನಡೆಸಲು ಆದೇಶ ನೀಡಿದ್ದರೆ ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳು ವಿರೋಧ ವ್ಯಕ್ತಪಡಿಸಿದ್ದವು. ಪೂರ್ವ ಸಿದ್ಧತೆ ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಪರೀಕ್ಷೆ ಬೇಡ ಎಂದು ಹೇಳಿದ್ದವು.

ವೈದ್ಯಕೀಯ ವಿಭಾಗಗಕ್ಕೆ ಪ್ರವೇಶ ಪಡೆಯುವವರು ನೀಟ್ ಬರೆಯುವುದು ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಪರಿಣಾಮ ವಿದ್ಯಾರ್ಥಿಗಳಿಗೆ ನೀಟ್ ಮತ್ತು ಸಿಇಟಿ ಎರಡನ್ನೂ ಬರೆಯಬೇಕಾದ ಅನಿವಾರ್ಯತೆ ಎದುರಾಗಿತ್ತು. ಈ ಅಂಕಿತ ಲಕ್ಷಾಂತರ ವಿದ್ಯಾರ್ಥಿಗಳಿಗೆ ರಿಲೀಫ್ ನೀಡಿದೆ.[ಸಿಇಟಿ ಫಲಿತಾಂಶಕ್ಕೂ ಮೊದಲು ಪಿಯು ಫಲಿತಾಂಶ ಪ್ರಕಟ]

ವಿದ್ಯಾರ್ಥಿಗಳು ಮೊದಲ ಹಂತದ ನೀಟ್ ಪರೀಕ್ಷೆಯನ್ನು ಮೇ. 1 ರಂದು ಬರೆದಿದ್ದರು. ನಿಗದಿಯಂತೆ ಜುಲೈ 24 ರಂದು ಎರಡನೇ ಹಂತದ ನೀಟ್ ನಡೆಯುವುದಿತ್ತು. ನೀಟ್ ಬೇಡ ಎಂದು ಕರ್ನಾಟಕ, ಜಮ್ಮು ಕಾಶ್ಮೀರ, ತಮಿಳುನಾಡು ಮತ್ತು ಕೇರಳ ರಾಜ್ಯಗಳು ಒತ್ತಾಯ ಮಾಡುತ್ತಲೇ ಬಂದಿದ್ದವು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
President Pranab Mukherjee signs Ordinance on common medical entrance examination NEET. NEET is the National Eligibility-cum-Entrance Test for admission to medical colleges.The ordinance- or executive order - cleared by the Cabinet on May 20, is aimed at "partially" overturning a Supreme Court order.
Please Wait while comments are loading...