ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವ್ಯಾಬ್ ಟೆಸ್ಟ್‌ ಭಯವೇ, ಗಾರ್ಗ್ಲಿಂಗ್ ಮಾಡಿಯೂ ಕೋವಿಡ್ ಪರೀಕ್ಷೆ ಮಾಡಬಹುದು!

|
Google Oneindia Kannada News

ವದೆಹಲಿ, ಮೇ 21: ಸ್ವ್ಯಾಬ್ ಪರೀಕ್ಷೆ ಎಂದರೆ ಭಯವೇ, ಹಾಗಾದರೆ ಇನ್ಮುಂದೆ ಗಾರ್ಗ್ಲಿಂಗ್ ಮಾಡಿಯೂ ಕೂಡ ಕೋವಿಡ್ ಫಲಿತಾಂಶವನ್ನು ಪಡೆಯಬಹುದು. ಸಿಎಸ್‌ಐಆರ್-ಎನ್‌ಎಎಆರ್‌ನ ಪರಿಸರ ಶಾಸ್ತ್ರ ವಿಭಾಗವು ಈ ಹೊಸ ಸಂಶೋಧನೆಯನ್ನು ಮಾಡಿದೆ.

ಕೋವಿಡ್ ಪರೀಕ್ಷೆಯನ್ನು ಇನ್ನುಮುಂದೆ ಮತ್ತಷ್ಟು ಸುಲಭಗೊಳಿಸಬಹುದು, ಕೆಮಿಕಲ್ ದ್ರಾವಣವನ್ನು ಬಾಯಲ್ಲಿ ಹಾಕಿಕೊಂಡು ಗಾರ್ಗ್ಲಿಂಗ್ ಮಾಡುವ ಮೂಲಕ ಕೋವಿಡ್ ವರದಿ ಪಡೆಯಬಹುದು.

ಹಿರಿಯ ವಿಜ್ಞಾನಿ ಡಾ. ಕೃಷ್ಣ ಖೈರ್ನರ್ ಮತ್ತು ಅವರ ತಂಡ ಈ ಹೊಸ ಮಾದರಿಯ ಕೋವಿಡ್ ಪರೀಕ್ಷೆ ಅಭಿವೃದ್ಧಿಪಡಿಸಿದೆ.ಈ ಹೊಸ ತಂತ್ರದಲ್ಲಿ ಅಸ್ತಿತ್ವದಲ್ಲಿರುವ ಮಾದರಿಗಳ ಪರೀಕ್ಷೆಯಂತೆ ಯಾವುದೇ ಆರ್‌ಎನ್‌ಎ ಹೊರತೆಗೆಯುವ ಅಗತ್ಯವಿಲ್ಲ.

ನೀವು ಮನೆಯಲ್ಲಿಯೇ ಕೊರೊನಾ ಪರೀಕ್ಷೆ ಮಾಡಬಹುದು, ಹೇಗೆ? ಇಲ್ಲಿದೆ ಮಾಹಿತಿನೀವು ಮನೆಯಲ್ಲಿಯೇ ಕೊರೊನಾ ಪರೀಕ್ಷೆ ಮಾಡಬಹುದು, ಹೇಗೆ? ಇಲ್ಲಿದೆ ಮಾಹಿತಿ

ಇದರಿಂದ ವೇಗವಾಗಿ ಮಾದರಿ ಸಂಗ್ರಹಿಸಬಹುದು, ಮಾದರಿ ಸಂಗ್ರಹ ಕೇಂದ್ರಗಳಲ್ಲಿನ ವ್ಯಕ್ತಿಗಳ ದೀರ್ಘ ಸರತಿ ಸಾಲುಗಳನ್ನು ಕಡಿಮೆ ಮಾಡಬಹುದು. ಯಾವುದೇ ಆರ್‌ಎನ್‌ಎ ಹೊರತೆಗೆಯುವ ಕಿಟ್ ಅಗತ್ಯವಿಲ್ಲ, ಇದು ಸಮಯ ಮತ್ತು ಹಣ ಎರಡನ್ನೂ ಉಳಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ..

 ಕೋವಿಡ್ ಪರೀಕ್ಷೆ ಹೇಗೆ?

ಕೋವಿಡ್ ಪರೀಕ್ಷೆ ಹೇಗೆ?

ಕೋವಿಡ್ ಪರೀಕ್ಷೆಯನ್ನು ಇದೀಗ ಸುಲಭವಾಗಿ ಮಾಡಬಹುದು, ಕೆಮಿಕಲ್ ದ್ರಾವಣವನ್ನು ಬಾಯಲ್ಲಿ ಹಾಕಿಕೊಂಡು ಗಾರ್ಗ್ಲಿಂಗ್ ಮಾಡುವ ಮೂಲಕ ಪ್ರಯೋಗಾಲಯ ಮಾದರಿ ಸಂಗ್ರಹಿಸಿ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಿ ಫಲಿತಾಂಶ ಪಡೆಯುವ ಹೊಸ ಪದ್ಧತಿಯನ್ನು ಅಭಿವೃದ್ಧಿಪಡಿಸಲಾಗಿದೆ.

ಭಾರತದಲ್ಲಿ ಕೊರೊನಾಗೆ 2ಡಿಜಿ ಪುಡಿ ಔಷಧಿ ಸಿಗುವುದು ಯಾವಾಗ?ಭಾರತದಲ್ಲಿ ಕೊರೊನಾಗೆ 2ಡಿಜಿ ಪುಡಿ ಔಷಧಿ ಸಿಗುವುದು ಯಾವಾಗ?

 ಪದ್ಧತಿ ಅಭಿವೃದ್ಧಿಪಡಿಸಿದವರು

ಪದ್ಧತಿ ಅಭಿವೃದ್ಧಿಪಡಿಸಿದವರು

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ ಭಾಗವಾಗಿರುವ ನಾಗಪುರ ಮೂಲದ ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ, ಸಲೈನ್ ಗಾರ್ಗಲ್ ಆರ್‌ಟಿಪಿಸಿಆರ್ ಪರೀಕ್ಷೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಿಂದ ಅಧಿಕೃತ ಅನುಮೋದನೆ ಪಡೆದುಕೊಂಡಿದೆ.

ರೂಪಾಂತರಗಳ ರೂವಾರಿ: ಭಾರತದಲ್ಲಿ ಕೊರೊನಾವೈರಸ್ ಹರಡುವಿಕೆ ಹಿಂದಿನ ಕಾರಣವೇನು!?ರೂಪಾಂತರಗಳ ರೂವಾರಿ: ಭಾರತದಲ್ಲಿ ಕೊರೊನಾವೈರಸ್ ಹರಡುವಿಕೆ ಹಿಂದಿನ ಕಾರಣವೇನು!?

 ಸಲೈನ್‌ಯುಕ್ತ ದ್ರಾವಣ

ಸಲೈನ್‌ಯುಕ್ತ ದ್ರಾವಣ

ಕಂಟೇನರ್‌ನಲ್ಲಿ ಸಲೈನ್‌ಯುಕ್ತ ನೀರಿನ ದ್ರಾವಣವಿರುತ್ತದೆ, ಅದನ್ನು ನೀವು ಬಾಯಿಗೆ ಹಾಕಿಕೊಂಡು 15 ಸೆಕೆಂಡುಗಳ ಕಾಲ ಗಾರ್ಗ್ಲಿಂಗ್ ಮಾಡಬೇಕು. ಬಾಯಲ್ಲಿರುವ ಲವಣಯುಕ್ತ ದ್ರಾವಣವನ್ನು ಪೂರ್ತಿಯಾಗಿ ಅದೇ ಕಂಟೇನರ್‌ಗೆ ಹಾಕಬೇಕು, ಬಳಿಕ ಮಾದರಿಯನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಬಹುದು.

ಕೊರೊನಾ ನಡುವೆ ಬ್ಲ್ಯಾಕ್ ಫಂಗಸ್ ಪ್ರಕರಣ ಹೆಚ್ಚಳ; ಏಮ್ಸ್ ವೈದ್ಯೆ ಎಚ್ಚರಿಕೆಕೊರೊನಾ ನಡುವೆ ಬ್ಲ್ಯಾಕ್ ಫಂಗಸ್ ಪ್ರಕರಣ ಹೆಚ್ಚಳ; ಏಮ್ಸ್ ವೈದ್ಯೆ ಎಚ್ಚರಿಕೆ

 ಆರೋಗ್ಯ ಕಾರ್ಯಕರ್ತರ ಅಗತ್ಯವಿಲ್ಲ

ಆರೋಗ್ಯ ಕಾರ್ಯಕರ್ತರ ಅಗತ್ಯವಿಲ್ಲ

ಈ ರೀತಿಯ ಮಾದರಿ ಸಂಗ್ರಹಕ್ಕಾಗಿ ನುರಿತ ಆರೋಗ್ಯ ಕಾರ್ಯಕರ್ತರ ಅಗತ್ಯವಿಲ್ಲ, ಈ ಪ್ರಕ್ರಿಯೆ ಸರಳವಾಗಿರುವ ಜೊತೆಗೆ ರೋಗಿಯ ಸ್ನೇಹಿಯಾಗಿದೆ. ಮಾದರಿ ಸಂಗ್ರಹಣೆಯ ಸಮಯದಲ್ಲಿ ತ್ಯಾಜ್ಯ ಉತ್ಪಾದನೆಯನ್ನು ಕಡಿಮೆಗೊಳಿಸುತ್ತದೆ ಎಂದು ಹೇಳಲಾಗಿದೆ.

English summary
Scared of giving your nasopharyngeal (mouth and nose) swab for Covid-19 test as the process is irritating or painful? Soon, you can collect your own mouth sample comfortably and gargle your way for the Covid-19 test .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X