88ರಲ್ಲಿ ಹಸೆಮಣೇಯೇರಿದ ಕಾಂಗ್ರೆಸ್ ನಾಯಕ!
ಲಖನೌ, ಮೇ 16: ಅವರಿಗೀಗ ಬರೋಬ್ಬರಿ 88 ವರ್ಷ ವಯಸ್ಸು. ಆದರೂ ತಾವುಯಾರಿಗೇನು ಕಮ್ಮಿಯಿಲ್ಲ ಅಂತಾರೆ. ಈ ಇಳಿವಯಸ್ಸಲ್ಲೂ ಈ ಹಿಂದೆ ತಾವು ತಿರಸ್ಕರಿಸಿದ ಮಹಿಳೆಯನ್ನು ಪತ್ನಿಯನ್ನಾಗಿ ಸ್ವೀಕರಿಸಿ, ಅವರ ಕೈಹಿಡಿದಿದ್ದಾರೆ. ಅಂದರೆ ಅಕ್ಷರಶಃ ಅವರ ಜತೆ ಹಸೆಮಣೆಯೇರಿ ಶುಭ ವಿವಾಹವಾಗಿದ್ದಾರೆ.
ಹೌದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಎನ್ ಡಿ ತಿವಾರಿ ಅವರು ಉಜ್ವಲ ಶರ್ಮಾ (62) ಅವರನ್ನು ಇಂದು ಗುರುವಾರ ಬೆಳಗ್ಗೆ 11 ಗಂಟೆಯ ಶುಭ ಘಳಿಗೆಯಲ್ಲಿ ವಿವಾಹವಾಗಿದ್ದಾರೆ. ಶಾಸ್ತ್ರೋಕ್ತವಾಗಿ, ನವವಧೂವರರಂತೆ ಕಂಗೊಳಿಸುತ್ತಿದ್ದ ತಿವಾರಿ ಮತ್ತು ಉಜ್ವಲ ಶರ್ಮಾ ಅವರು ಮದುವೆಯಾಗಿದ್ದಾರೆ. ಗಮನಾರ್ಹವೆಂದರೆ 32 ವರ್ಷಗಳ ಹಿಂದೆ ಈ ದಂಪತಿಗೆ ಜನಿಸಿದ ರೋಹಿತ್ ಶರ್ಮಾ ಅವರು ಮದುವೆ ಸಮಾರಂಭದಲ್ಲಿ ವಿಶೇಷ ಅತಿಥಿಯಾಗಿ ದಂಪತಿಗೆ ಅರ್ಥಾತ್ ತಮ್ಮ ಅಪ್ಪ-ಅಮ್ಮನಿಗೆ ಶುಭ ಹಾರೈಸಿದ್ದಾರೆ.

2 ತಿಂಗಳ ಹಿಂದೆ ಸುಪ್ರೀಂಕೋರ್ಟ್ ಸೂಚನೆಯಂತೆ ಕೊನೆಗೂ ರೋಹಿತ್ ಶರ್ಮಾ ಅವರನ್ನು ತಮ್ಮ ಮಗನೆಂದು ಸ್ವೀಕರಿಸಿದ ಬಳಿಕ ಉಜ್ವಲ ಶರ್ಮಾ ಅವರನ್ನು ತನ್ನ ಪತ್ನಿಯನ್ನಾಗಿ ಒಪ್ಪುವುದಕ್ಕೆ ತಿವಾರಿ ಅವರು ಸಾಕಷ್ಟು ಹಿಂದೇಟು ಹಾಕಿದ್ದರು. ಕೊನೆಗೆ ಇತ್ತೀಚೆಗೆ ಉಜ್ವಲ ಶರ್ಮಾ ಅವರ ವಿರುದ್ಧ ಪೊಲೀಸ್ ಬಲ ಪ್ರಯೋಗ ಸಹ ಮಾಡಿದ್ದರು. ಆದರೆ ಪಟ್ಟು ಬಿಡದ ಉಜ್ವಲಾ ಅವರು ತಿವಾರಿ ಮಣಿಯುವಂತೆ ಮಾಡಿದ್ದಾರೆ. ಹಾಗಾಗಿ ಇಂದು ದಿಢೀರ್ ಎಂದು ಮದುವೆ ನಡೆದಿದೆ.
ಈ ಮಧ್ಯೆ, ಗಮನಾರ್ಹ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ಪಕ್ಷದ ಮತ್ತೊಬ್ಬ ಹಿರಿಯ ಇದೇ ರೀತಿ ಹಸೆಮಣೆಯೇರಬೇಕಿತ್ತು. ಆದರೆ ಸ್ವಾಮೀಜಿಯೊಬ್ಬರ ಮಾತಿಗೆ ಓಗೊಟ್ಟು ಕೊನೆಯ ಘಳಿಗೆಯಲ್ಲಿ ತಮ್ಮ ನಿರ್ಧಾರದಿಂದ ದೂರ ಸರಿದಿದ್ದಾರೆ. ಆವರಿಗೂ ಶೀಘ್ರಮೇವ ಕಲ್ಯಾಣಪ್ರಾಪ್ತಿ ರಸ್ತು ಎಂದು ಹಾರೈಸೋಣ.












Click it and Unblock the Notifications