ನವಿ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿದೇಶಿ ವಿಮಾನ ನಿಲ್ದಾಣಗಳಿಗೂ ಪೈಪೋಟಿ!
ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಒಂದಾಗಿರುವ ನವಿ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಭಾರತದಲ್ಲಿ ಪ್ರಮುಖ ಸುಸ್ಥಿರ ವಾಯುಯಾನ ಕೇಂದ್ರವಾಗಲು (ಸಸ್ಟೇನೆಬಲ್ ಅವಿಯೇಷನ್ ಹಬ್) ಭರ್ಜರಿ ಸಿದ್ಧತೆ ನಡೆದಿದೆ. ಇದು ಮುಂದುವರಿದ ತಂತ್ರಜ್ಞಾನ ಮತ್ತು ಪರಿಸರ ಸಂರಕ್ಷಣೆಯ ಬದ್ಧತೆಯನ್ನು ಒಳಗೊಂಡಿದೆ. ವಾರ್ಷಿಕವಾಗಿ 90 ಮಿಲಿಯನ್ ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿರುವ ಈ ವಿಮಾನ ನಿಲ್ದಾಣವು ಜಾಗತಿಕ ಸಂಪರ್ಕವನ್ನು ಹೆಚ್ಚಿಸುವ ಮತ್ತು ಸ್ಥಳೀಯ ಸಂಸ್ಕೃತಿಯನ್ನು ಸಂರಕ್ಷಿಸುವ ಗುರಿಯನ್ನು ಹೊಂದಿದೆ.
ಭಾರತದ ಮುಂದಿನ ಪ್ರಮುಖ ವಾಯುಯಾನ ಕೇಂದ್ರವಾದ ನವಿ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (NMIA) ವಿಶ್ವದ ಅತ್ಯಂತ ಮುಂದುವರಿದ ಮತ್ತು ಸುಸ್ಥಿರ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ಈ ಯೋಜನೆಯನ್ನು ನವಿ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (NMIAL) ಕಾರ್ಯನಿರ್ವಹಿಸುತ್ತಿದೆ. ಇದು ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಅದಾನಿ ವಿಮಾನ ನಿಲ್ದಾಣ ಹೋಲ್ಡಿಂಗ್ಸ್ ಲಿಮಿಟೆಡ್‌ನ ಅಂಗಸಂಸ್ಥೆ) ಮತ್ತು CIDCO (ಮಹಾರಾಷ್ಟ್ರ ನಗರ ಮತ್ತು ಕೈಗಾರಿಕಾ ಅಭಿವೃದ್ಧಿ ನಿಗಮ ಲಿಮಿಟೆಡ್) ನಡುವಿನ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಅಡಿಯಲ್ಲಿ ಅಭಿವೃದ್ಧಿ ಆಗಿದ್ದು, ಇದು ಕ್ರಮವಾಗಿ 74% ಮತ್ತು 26% ಪಾಲನ್ನು ಹೊಂದಿದೆ.

ನವಿ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಭಾರತದಲ್ಲಿ ಪ್ರಮುಖ ಸುಸ್ಥಿರ ವಾಯುಯಾನ ಕೇಂದ್ರವಾಗಲು ಸಜ್ಜಾಗಿದೆ. ಇದು ಮುಂದುವರಿದ ತಂತ್ರಜ್ಞಾನ ಮತ್ತು ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಬದ್ಧತೆಯನ್ನು ಒಳಗೊಂಡಿದೆ. ಅಲ್ಲದೇ ವಾರ್ಷಿಕವಾಗಿ 90 ಮಿಲಿಯನ್ ಪ್ರಯಾಣಿಕರ ಸಾಮರ್ಥ್ಯ ಇದಕ್ಕೆ ಇದೆ.
ದಕ್ಷಿಣ ಮುಂಬೈನಿಂದ ಕೇವಲ 37 ಕಿಲೋಮೀಟರ್ ದೂರದಲ್ಲಿರುವ ನವಿ ಮುಂಬೈನ ಉಲ್ವೆಯಲ್ಲಿರುವ NMIA, ಮುಂಬೈ ಮಹಾನಗರ ಪ್ರದೇಶದಲ್ಲಿನ ವಾಯು ಸಂಚಾರ ದಟ್ಟಣೆಯನ್ನು (ವಿಮಾನಗಳ ಸಂಚಾರ ದಟ್ಟಣೆ) ಕಡಿಮೆ ಮಾಡಲಿದೆ. ಅಲ್ಲದೇ ಭಾರತದ ಜಾಗತಿಕ ಸಂಪರ್ಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರವನ್ನು ಈ ವಿಮಾನ ನಿಲ್ದಾಣ ನಿರ್ವಹಿಸಲಿದೆ. 1,160 ಹೆಕ್ಟೇರ್‌ಗಳಲ್ಲಿ (ಸುಮಾರು 2,866 ಎಕರೆ) ವ್ಯಾಪ್ತಿಯಲ್ಲಿರುವ ಈ ವಿಮಾನ ನಿಲ್ದಾಣವು ಎರಡು ಕೋಡ್-ಎಫ್ ಕಂಪ್ಲೈಂಟ್ ರನ್‌ವೇಗಳನ್ನು ಹೊಂದಿದೆ. ಏಕಕಾಲಕ್ಕೆ ಹಲವು ವಿಮಾನಗಳ ಕಾರ್ಯಾಚರಣೆಗೆ ಇದು ಸಹಕಾರಿಯಾಗಿದೆ.
ಇನ್ನು ಮುಂದುವರಿದು ಮುಖ್ಯವಾಗಿ ಭಾರತದ ಅತಿದೊಡ್ಡ ವಾಯುಯಾನ ಯೋಜನೆಗಳಲ್ಲಿ NMIA ಪ್ರಮುಖವಾಗಿದೆ. ಆರಂಭಿಕ ಹಂತವು ವಾರ್ಷಿಕವಾಗಿ 20 ಮಿಲಿಯನ್ ಪ್ರಯಾಣಿಕರು ಈ ವಿಮಾನ ನಿಲ್ದಾಣದ ಮೂಲಕ ಪ್ರಯಾಣ ಮಾಡಬಹುದಾಗಿದೆ. ಆದರೆ ಸಂಪೂರ್ಣವಾಗಿ ಈ ವಿಮಾನ ನಿಲ್ದಾಣದ ಕಾಮಗಾರಿಗಳು ಪೂರ್ಣಗೊಂಡ ನಂತರದಲ್ಲಿ ವರ್ಷಕ್ಕೆ 90 ಮಿಲಿಯನ್ ಪ್ರಯಾಣಿಕರು ಕಾರ್ಯಾಚರಣೆಗೆ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಅಲ್ಲದೇ ನಾಲ್ಕು ಟರ್ಮಿನಲ್‌ಗಳು ದೇಶೀಯ ಮತ್ತು ಅಂತರರಾಷ್ಟ್ರೀಯ ಕಾರ್ಯಾಚರಣೆಗಳನ್ನು ಸರಾಗವಾಗಿ ಹೊಂದಾಣಿಕೆ ಮಾಡುವ ಯೋಜನೆಯನ್ನೂ ಹಾಕಿಕೊಳ್ಳಲಾಗಿದೆ.
NMIAಯ ವಾಸ್ತುಶಿಲ್ಪ ಶೈಲಿಯು ಭಾರತದ ರಾಷ್ಟ್ರೀಯ ಹೂವು - ಶುದ್ಧತೆ ಮತ್ತು ಪರಿಪೂರ್ಣತೆಯ ಸಂಕೇತವಾದ ಕಮಲದಿಂದ ಸ್ಫೂರ್ತಿ ಪಡೆದಿದೆ. ಟರ್ಮಿನಲ್‌ಗಳ ವಿನ್ಯಾಸವನ್ನು ಅರಳಿದ ಕಮಲದ ಮಾದರಿಯನ್ನು ಹೋಲುವಂತಿದೆ. 12 ಶಿಲ್ಪಕಲೆ ವೈಶಿಷ್ಟ್ಯದ ಕಾಲಮ್‌ಗಳು ಮತ್ತು ವಿಸ್ತಾರವಾದ ಕಮಲದ ಆಕಾರದ ಛಾವಣಿಯ ಮೇಲಾವರಣವನ್ನು ಒಳಗೊಂಡಿದ್ದು, 17 ಮೆಗಾ ಕಾಲಮ್‌ಗಳು ಇದರಲ್ಲಿ ಇದೆ. ಒಳಗೆ, ಪ್ರಯಾಣಿಕರು ಎಂಜಾಯ್ ಮಾಡುವುದಕ್ಕೆ ಡಿಜಿಟಲ್ ಕಲಾ ಕೃತಿಗಳು, ಮಹಾರಾಷ್ಟ್ರ ಮತ್ತು ಭಾರತದ ಕಥೆಗಳನ್ನು ನಿರೂಪಿಸುವ ವಸ್ತುಗಳು, ವಿನ್ಯಾಸ ಸೇರಿದಂತೆ ಹಲವು ವಿಶೇಷ ವೈಶಿಷ್ಟ್ಯಗಳನ್ನು ಇದು ಒಳಗೊಂಡಿದೆ. ಸ್ಥಳೀಯ ಸಂಸ್ಕೃತಿಯನ್ನು ಪ್ರದರ್ಶಿಸುವ ನವೀನ ಡಿಜಿಟಲ್ ಕಲಾ ಕೃತಿಗಳನ್ನು ಸಹ ಇದರಲ್ಲಿ ಕಾಣಬಹುದಾಗಿದೆ.
ತಂತ್ರಜ್ಞಾನ-ಚಾಲಿತ ಪ್ರಯಾಣಿಕರ ಅನುಭವ: ಇನ್ನು ಮುಖ್ಯವಾಗಿ NMIA ಅನ್ನು ಸಂಪೂರ್ಣವಾಗಿ 5G ಸ್ಮಾರ್ಟ್ ವಿಮಾನ ನಿಲ್ದಾಣವಾಗಿ ಕಲ್ಪಿಸಲಾಗಿದೆ. ದಕ್ಷತೆಯನ್ನು ಹೆಚ್ಚಿಸಲು, ಇಂಟರ್‌ನೆಟ್ ಬ್ರೋಸಿಂಗ್ ಸಮಯವನ್ನು ಕಡಿಮೆ ಮಾಡುವ ಹಾಗೂ ತಡೆರಹಿತ, ಸಂಪರ್ಕರಹಿತ ಪ್ರಯಾಣದ ಅನುಭವವನ್ನು ಖಚಿತಪಡಿಸಿಕೊಳ್ಳಲು ಡೇಟಾ-ಚಾಲಿತ ವ್ಯವಸ್ಥೆಗಳನ್ನು ಬಳಸಿಕೊಳ್ಳಲಾಗುತ್ತಿದೆ.
ಈ ವಿಮಾನ ನಿಲ್ದಾಣದಲ್ಲಿ ಇರುವ ಪ್ರಮುಖ ವೈಶಿಷ್ಟ್ಯಗಳು ಈ ರೀತಿ ಇವೆ.
ಶೂನ್ಯ ಹಸ್ತಚಾಲಿತ ID ಮತ್ತು ಬೋರ್ಡಿಂಗ್-ಪಾಸ್ ಪರಿಶೀಲನೆಗಳಿಗಾಗಿ ಡಿಜಿ ಯಾತ್ರಾ ಏಕೀಕರಣ.
ಸ್ವಯಂಚಾಲಿತ ಬ್ಯಾಗೇಜ್ ನಿರ್ವಹಣೆ ಮತ್ತು ರಿಯಲ್ ಟೈಮ್ ಟ್ರ್ಯಾಕಿಂಗ್ ವ್ಯವಸ್ಥೆಗಳು.
ಸುಧಾರಿತ ಸೈಬರ್ ಭದ್ರತೆಯೊಂದಿಗೆ ವೈ-ಫೈ ಸಕ್ರಿಯಗೊಳಿಸಿದ ಟರ್ಮಿನಲ್‌ಗಳು.
ಏವಿಯೊ, ವಿಮಾನ ನಿಲ್ದಾಣದ ಪಾಲುದಾರರಿಗೆ ಕಾರ್ಯಾಚರಣೆಗಾಗಿ ಆಂತರಿಕ ಅಪ್ಲಿಕೇಶನ್.
ನವ ಭಾರತದ ಮೂಲಸೌಕರ್ಯ ದೃಷ್ಟಿಕೋನದ ಸಂಕೇತ.
-
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Hardik vs Krunal: ತಮ್ಮ ಹಾರ್ದಿಕ್ ವಿಕೆಟ್ ಕಿತ್ತ ಬೌಲರ್ಗಿಂತ ಹೆಚ್ಚಾಗಿ ಸಂಭ್ರಮಿಸಿದ ಕೃನಾಲ್ ಪಾಂಡ್ಯ, ಭಾರಿ ವೈರಲ್












Click it and Unblock the Notifications