ರಾಷ್ಟ್ರಮಟ್ಟದ ಈಜುಗಾರ್ತಿ ನೇಣುಬಿಗಿದುಕೊಂಡು ಆತ್ಮಹತ್ಯೆ
ಕೋಲ್ಕತಾ, ಮೇ 01: ರಾಷ್ಟ್ರಮಟ್ಟದ ಈಜುಗಾರ್ತಿ ಮೌಪ್ರಿಯಾ ಮಿತ್ರ ಅವರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಷ್ಟ್ರಮಟ್ಟದ ಡೈವಿಂಗ್ ಪಟುವಾಗಿದ್ದರು.
ಕೋಲ್ಕತ್ತಾದಿಂದ 50 ಕಿ.ಮೀ ದೂರದ ಹೂಗ್ಲಿ ಜಿಲ್ಲೆಯ ತಮ್ಮ ನಿವಾಸದಲ್ಲಿ 15 ವರ್ಷ ವಯಸ್ಸಿನ ಮೌಪ್ರಿಯಾ ಮಿತ್ರ ಅವರು ಸೋಮವಾರದಂದು ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಅವರನ್ನು ಚಿನ್ಸುರಾ ಇಮಾಂಬರ ಆಸ್ಪತ್ರೆಯಲ್ಲಿ ಮರಣೋತ್ತರ ಚಿಕಿತ್ಸೆ ನಡೆಸಲಾಗಿದ್ದು, ಅಟಾಪ್ಸಿ ವರದಿಗಾಗಿ ಕಾಯಲಾಗುತ್ತಿದೆ. ಮೌಪ್ರಿಯಾ ಅವರು ಬಂಡೆಲ್ ಮನ್ಸುಪುರ ಪ್ರದೇಶದಲ್ಲಿರುವ ತಮ್ಮ ಮನೆಯ ರೂಮಿನಲ್ಲಿರುವ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆಗೆ ಕಾರಣ ಏನು ಎಂಬುದು ಇನ್ನೂ ಪತ್ತೆಯಾಗಿಲ್ಲ. ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿಲ್ಲ.
ಮೌಪ್ರಿಯಾ ಮಿತ್ರ ಅವರು ದಕ್ಷಿಣ ಏಷ್ಯಾ ಈಜು ಸ್ಪರ್ಧೆ(SAAC) ಯಲ್ಲಿ ಭಾರತವನ್ನು ಪ್ರತಿನಿಧಿ ಒಂದು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಗೆದ್ದುಕೊಂಡಿದ್ದರು.
10ನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಮೌಪ್ರಿಯಾ ಅವರು ಜಿಮ್ನಾಸ್ಟಿಕ್ ಪಟುವಾಗಿದ್ದರು. ಆದರೆ, ಅಪಘಾತವೊಂದರಲ್ಲಿ ಕಾಲಿಗೆ ಪೆಟ್ಟಾಗಿದ್ದರಿಂದ ಜಿಮ್ನಾಸ್ಟಿಕ್ ಅಭ್ಯಾಸ ನಿಲ್ಲಿಸಿದ್ದರು. ನಂತರ ಈಜುಪಟುವಾಗಿ ಡೈವಿಂಗ್ ಅಭ್ಯಾಸ ಮಾಡಿದ್ದರು.












Click it and Unblock the Notifications