• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅರುಣ್ ಜೇಟ್ಲಿ ನಿಧನ: ರಾಷ್ಟ್ರ ನಾಯಕರ ಸಂತಾಪ

|

ನವದೆಹಲಿ, ಆಗಸ್ಟ್ 24: ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ(66) ನಿಧನಕ್ಕೆ ರಾಷ್ಟ್ರ ನಾಯಕರು ಸಂತಾಪ ಸೂಚಿಸಿದ್ದಾರೆ.

ಅರುಣ್‌ ಜೇಟ್ಲಿ ಹಲವಾರು ವರ್ಷಗಳಿಂದಲೂ ತೀವ್ರ ಅನಾರೋಗ್ಯಗೊಂಡಿದ್ದ ಜೇಟ್ಲಿ ಶನಿವಾರ ಕೊನೆಯುಸಿರೆಳೆದರು ಎಂದು ಏಮ್ಸ್‌ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಅರುಣ್ ಜೇಟ್ಲಿ ಬದುಕಿನ ಅಪರೂಪದ ಚಿತ್ರಗಳು

ತೀವ್ರ ಅನಾರೋಗ್ಯರಾಗಿದ್ದ ಅರುಣ್‌ ಜೇಟ್ಲಿ ಹೊಸದಿಲ್ಲಿಯ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು ಎಂದು ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ. ಅರುಣ್‌ ಜೇಟ್ಲಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.

ಶನಿವಾರ ಮಧ್ಯಾಹ್ನ 12.07ಕ್ಕೆ ನಿಧನರಾದರು ಎಂದು ಏಮ್ಸ್‌ ಆಸ್ಪತ್ರೆಯ ವೈದ್ಯಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಗೆಳೆಯನ ಅಗಲಿಕೆಗೆ ದೂರದ ದೇಶದಿಂದಲೇ ಕಣ್ಣೀರಿಟ್ಟ ಪ್ರಧಾನಿ ಮೋದಿ

ಏಮ್ಸ್‌ ಆಸ್ಪತ್ರೆಯಿಂದ ಕೈಲಾಶ್‌ ಖೇರ್‌ನಲ್ಲಿರುವ ಜೇಟ್ಲಿ ನಿವಾಸಕ್ಕೆ ಪಾರ್ಥಿವ ಶರೀರ ಕೊಂಡೊಯ್ಯಲಾಗುವುದು. ಭಾನುವಾರ ಬೆಳಗ್ಗೆ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ಅನುವು ಮಾಡಿಕೊಡಲಾಗುವುದು. ಲೋಧಿ ರಸ್ತೆಯ ಸಮಾಧಿಯಲ್ಲಿ ಭಾನುವಾರ ಸಂಜೆ 5 ಗಂಟೆಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು.

ಅರುಣ್ ಜೇಟ್ಲಿ ನಿಧನಕ್ಕೆ ಮೋದಿ ಕಣ್ಣೀರು

ಅರುಣ್ ಜೇಟ್ಲಿ ನಿಧನಕ್ಕೆ ಮೋದಿ ಕಣ್ಣೀರು

ಮಾಜಿ ಸಚಿವ ಅರುಣ್ ಜೇಟ್ಲಿ ನಿಧನಕ್ಕೆ ಪ್ರಧಾನಿ ಮೋದಿ ಕಣ್ಣೀರಿಟ್ಟಿದ್ದಾರೆ. ಮೋದಿ ಬಹುರಾಷ್ಟ್ರಗಳ ಪ್ರವಾಸದಲ್ಲಿದ್ದಾರೆ. ಆದರೆ ಪ್ರವಾಸ ಮೊಟಕುಗೊಳಿಸಿ ಅಮಿತ್ ಶಾ ದೆಹಲಿಗೆ ಮರಳಿ ಬರಲಿದ್ದಾರೆಯೇ ಎನ್ನುವ ಕುರಿತು ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಅಲ್ಲಿಂದಲೇ ಮೋದಿ ಕಂಬನಿ ಮಿಡಿದಿದ್ದಾರೆ. ಜೀವನಪೂರ್ತಿ ಮೇಧಾವಿತನದ ವರ ಪಡೆದವರು, ಅದ್ಭುತ ಹಾಸ್ಯ ಪ್ರಜ್ಞೆ ಮತ್ತು ಚರಿಷ್ಮಾ ಹೊಂದಿದ್ದ ಅರುಣ್ ಜೇಟ್ಲಿ ಅವರನ್ನು ಸಮಾಜದ ಎಲ್ಲ ವರ್ಗಗಳ ಜನರೂ ಮೆಚ್ಚಿಕೊಳ್ಳುತ್ತಿದ್ದರು. ಅವರು ಬಹುಮುಖಿ ವ್ಯಕ್ತಿತ್ವವುಳ್ಳವರು. ಭಾರತದ ಸಂವಿಧಾನ, ಇತಿಹಾಸ, ಸಾರ್ವಜನಿಕ ನೀತಿ, ಅಧಿಕಾರ ಮತ್ತು ಆಡಳಿತದ ಬಗ್ಗೆ ಅಪಾರ ಜ್ಞಾನ ಹೊಂದಿದ್ದರು' ಎಂದು ಮೋದಿ ಸ್ಮರಿಸಿದ್ದಾರೆ.

ಮಧ್ಯಪ್ರದೇಶ ಮಾಜಿ ಸಿಎಂ ಶಿವರಾಜ್ ಸಿಂಗ್ ಕಂಬನಿ

ಮಧ್ಯಪ್ರದೇಶ ಮಾಜಿ ಸಿಎಂ ಶಿವರಾಜ್ ಸಿಂಗ್ ಕಂಬನಿ

ಅರುಣ್ ಜೇಟ್ಲಿ ನಿಧನದ ಬಗ್ಗೆ ಮಧ್ಯಪ್ರದೇಶ ಮಾಜಿ ಸಿಎಂ ತೀವ್ರ ದುಖಃ ವ್ಯಕ್ತಪಡಿಸಿದ್ದರು. ಜೇಟ್ಲಿ ಅವರು ಬಿಜೆಪಿಗೆ ನೀಡಿರುವ ಸೇವೆಯನ್ನು ಯಾರೂ ಮರೆಯಲಾಗದು. ಅವರು ಹಣಕಾಸು ಸಚಿವರಾಗಿ ದೇಶಕ್ಕೆ ನೀಡಿದ ಕೊಡುಗೆಯನ್ನು ದೇಶದ ಜನ ನೆನಪಿಟ್ಟುಕೊಳ್ಳಲಿದ್ದಾರೆ. ಅವರು ಯಾವುದೇ ವಿಷಯದ ಬಗ್ಗೆಯಾದರೂ ಅಧಿಕಾರಯುತವಾಗಿ ಮಾತನಾಡಬಲ್ಲವರಾಗಿದ್ದರು ಎಂದು ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.

ಅರುಣ್ ಜೇಟ್ಲಿ ನಿಧನ : ಕಂಬನಿ ಮಿಡಿದ ಕರ್ನಾಟಕದ ನಾಯಕರು

ಜೇಟ್ಲಿ ನಿಧನಕ್ಕೆ ಅತ್ಯಾಪ್ತ ಗೆಳೆಯ ಗೃಹ ಮಂತ್ರಿ ಅಮಿತ್ ಶಾ ಸಂತಾಪ

ಜೇಟ್ಲಿ ನಿಧನಕ್ಕೆ ಅತ್ಯಾಪ್ತ ಗೆಳೆಯ ಗೃಹ ಮಂತ್ರಿ ಅಮಿತ್ ಶಾ ಸಂತಾಪ

ಅರುಣ್ ಜೇಟ್ಲಿ ನಿಧನದ ಬಗ್ಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಮತ್ತು ಗೃಹ ಮಂತ್ರಿ ಅಮಿತ್ ಶಾ ಸಂತಾಪ ವ್ಯಕ್ತಪಡಿಸಿದ್ದು. ಜೇಟ್ಲಿ ಅವರ ನಿಧನ ನನಗೆ ವೈಯಕ್ತಿಕ ನಷ್ಟ ಅವರೊಬ್ಬ ಪರಿವಾರದ ಸದಸ್ಯರಾಗಿದ್ದರು. ಅವರು ನನಗೆ ಮಾರ್ಗದರ್ಶಕರಾಗಿದ್ದರು ಎಂದು ಶಾ ಹೇಳಿದ್ದಾರೆ. ಅಮಿತ್ ಶಾ ಅವರು ಹೈದರಾಬಾದ್‌ನಲ್ಲಿದ್ದು ಶೀಘ್ರವಾಗಿ ದೆಹಲಿಗೆ ಬರಲಿದ್ದಾರೆ.

ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಟ್ವೀಟ್

ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಟ್ವೀಟ್

ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಅವರು ಅರುಣ್ ಜೇಟ್ಲಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ದೆಹಲಿ ವಿವಿಯಲ್ಲಿ ನನ್ನ ಸೀನಿಯರ್ ಆಗಿದ್ದರು. ರಾಜಕೀಯ ಭಿನ್ನ ಸಿದ್ಧಾಂತಗಳಿದ್ದರೂ ನಾವೂ ಉತ್ತಮ ಗೆಳೆತನ ಕಾಯ್ದುಕೊಂಡಿದ್ದೆವು. ಅವರ ಬಜೆಟ್ ಬಗ್ಗೆ ನಡೆಸಿದ ಚರ್ಚೆ ಸ್ಮರಣೀಯ ಎಂದು ಶಶಿ ತರೂರ್ ಹೇಳಿದ್ದಾರೆ.

ನಿಮ್ಮ ಕೊಡುಗೆ ಸ್ಮರಣೀಯ: ಮಮತಾ ಟ್ವೀಟ್

ನಿಮ್ಮ ಕೊಡುಗೆ ಸ್ಮರಣೀಯ: ಮಮತಾ ಟ್ವೀಟ್

ಅರುಣ್ ಜೇಟ್ಲಿ ನಿಧನ ತೀವ್ರ ಆಘಾತ ಉಂಟು ಮಾಡಿದೆ. ಅವರು ಉತ್ತಮ ಸಂಸದೀಯ ಪಟು, ಒಳ್ಳೆಯ ವಕೀಲರು, ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದಂತವರು. ಭಾರತೀಯ ರಾಜಕೀಯಕ್ಕೆ ಅವರ ಕೊಟುಗೆ ಅಪಾರ ಎಂದು ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.

English summary
BJP and Indian citizens as BJP Veteran leader and Former Finance Finance Minister under the NDA-I government, Arun Jaitley passed away today at AIIMS Hospital, New Delhi.National Leaders Tweets Condoling Arun Jaitleys Death.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X