ಅಗಲಿದ ನಾಯಕನಿಗೆ ಕಂಬನಿ ಸುರಿಸಿದ ರಾಜಕೀಯ ದಿಗ್ಗಜರು

ನವದೆಹಲಿ, ಆಗಸ್ಟ್ 16: ಅಗಲಿದ ರಾಷ್ಟ್ರ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ರಾಷ್ಟ್ರ ರಾಜಕೀಯದ ದಿಗ್ಗಜರು ಕಂಬನಿ ಮಿಡಿದಿದ್ದಾರೆ.

ನಾಯಕರ ನಾಯಕ ಎನಿಸಿಕೊಂಡಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಇಂದು ಸಂಜೆ 5.05ಕ್ಕೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನಹೊಂದಿದರು.

ಅಜಾತ ಶತ್ರು ಎನಿಸಿಕೊಂಡಿದ್ದ ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ಪಕ್ಷ ಭೇದ ಇಲ್ಲದೆ ಎಲ್ಲ ಪಕ್ಷದ ಮುಖಂಡರುಗಳು ಅಶರ ತರ್ಪಣ ಅರ್ಪಿಸಿದ್ದಾರೆ. ತಮ್ಮ ಪ್ರಥಮ ಗೌರವವಾಗಿ ಟ್ವೀಟ್ ಮೂಲಕ ವಾಜಪೇಯಿ ಅವರನ್ನು ನೆನೆದಿರುವ ರಾಷ್ಟ್ರ ಮುಖಂಡರು ವಾಜಪೇಯಿ ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ನರೇಂದ್ರ ಮೋದಿ ಟ್ವೀಟ್

ಸ್ವತಃ ಅಟಲ್ ಬಿಹಾರಿ ವಾಜಪೇಯಿ ಅವರ ಅಭಿಮಾನಿಯೂ ಶಿಷ್ಯರೂ ಆಗಿರುವ ಪ್ರಧಾನಿ ಮೋದಿ ಅವರು, 'ನಾನು ನಿಶ್ಯಬ್ಧನಾಗಿದ್ದೇನೆ, ನೋವಿನಿಂದ ಭಾರವಾಗಿದ್ದೇನೆ, ಎಂದು ಭಾವುಕವಾಗಿ ಟ್ವೀಟ್ ಮಾಡಿದ್ದಾರೆ. ಸರಣಿಯಾಗಿ 8 ಟ್ವೀಟ್ ಮಾಡಿರುವ ಮೋದಿ ಅಟಲ್‌ ಜೀ ಅವರನ್ನು ನೆನೆದಿದ್ದಾರೆ.

Array

ಅವರು ಭಾರತ ಮಾತೆಯ ಹೆಮ್ಮೆಯ ಮಗ: ರಾಹುಲ್ ಗಾಂಧಿ

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸಹ ಟ್ವೀಟ್ ಮಾಡಿದ್ದು,'ಇಂದು ಭಾರತ ತನ್ನ ಮಹಾನ್ ಮಗನನ್ನು ಕಳೆದುಕೊಂಡಿದೆ ಎಂದಿದ್ದಾರೆ, ಅಟಲ್‌ ಜೀ ಅವರು, ಕೋಟ್ಯಂತರ ಜನರ ಪ್ರೀತಿಗೆ ಪಾತ್ರರಾಗಿದ್ದರು, ನಾವು ಸದಾ ಅವರನ್ನು ಸ್ಮರಿಸುತ್ತೇವೆ' ಎಂದು ಹೇಳಿದ್ದಾರೆ.

ಅಟಲ್‌ ಜೀಗಾಗಿ ಕವನ ಬರೆದ ಶಾ

ಅಟಲ್ ಬಿಹಾರಿ ವಾಜಪೇಯಿ ಅವರು ಸಹ ಸಂಸ್ಥಾಪಕರಾಗಿದ್ದ ಬಿಜೆಪಿ ಪಕ್ಷದ ಈಗಿನ ಅಧ್ಯಕ್ಷ ಅಮಿತ್ ಶಾ ಅವರು ಕೂಡ ಅಟಲ್ ಜೀ ಅವರ ಬಗ್ಗೆ ಸರಣಿ ಟ್ವೀಟ್ ಮಾಡಿದ್ದು, ಅಟಲ್ ಅವರನ್ನು ನೆನೆದು ಭಾವುಕವಾಗಿ ಹಿಂದಿ ಕವಿತೆಯೊಂದನ್ನು ಟ್ವೀಟ್‌ನಲ್ಲಿ ಪ್ರಕಟಿಸಿದ್ದಾರೆ. ಅವರು ಒಂದು ಬ್ಲಾಗ್‌ ಸಹ ಅಟಲ್‌ ಅವರ ಬಗ್ಗೆ ಬರೆದು ಲಿಂಕ್ ಹಂಚಿಕೊಂಡಿದ್ದಾರೆ.

ಅಜಾತಶತ್ರು ಇನ್ನಿಲ್ಲ: ರಾಜನಾಥ ಸಿಂಗ್

ಅಟಲ್ ಜೀ ಅವರ ಅಗಲಿಕೆಯಿಂದ ಪದಗಳಿಂದ ಹೇಳಲಾಗದ ನೋವು ಅನುಭವಿಸುತಿದ್ದೇನೆ ಎಂದು ಕೇಂದ್ರ ಗೃಹ ಮಂತ್ರಿ ರಾಜನಾಥ ಸಿಂಗ್ ಟ್ವೀಟ್ ಮಾಡಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಅವರು ಅವರೊಬ್ಬ ಅಜಾತ ಶತೃ ಆಗಿದ್ದರು ಎಂದು ಹೊಗಳಿದ್ದಾರೆ.

ವಾಜಪೇಯಿ ಒಬ್ಬರು ಆಲ್‌ರೌಂಡರ್‌ :ಅರುಣ್ ಜೇಟ್ಲಿ

ಅಟಲ್‌ ಜೀ ಒಬ್ಬ ರಾಜಕಾರಣಿ, ಕವಿ, ವಿದೇಶ ವ್ಯವಹಾರಗಾರ, ಸರಳ ಸ್ನೇಹ ಜೀವಿ, ಸಮಾಜ ಸೇವಕ ಎಲ್ಲವೂ ಆಗಿದ್ದರು, ಅವರ ಸಾವು ನನ್ನನ್ನು ದಿಗ್ಬ್ರಾಂತನನ್ನಾಗಿಸಿದೆ ಎಂದಿದ್ದಾರೆ ಹಣಕಾಸು ಸಚಿವ ಅರುಣ್ ಜೇಟ್ಲಿ.

ಮಮತಾ ಬ್ಯಾನರ್ಜಿ ಟ್ವೀಟ್ ಕಂಬನಿ

ಅಟಲ್ ಜೀ ಅವರೊಂದಿಗೆ ಬಹಳ ಸುಮಧುರವಾದ ನೆನಪುಗಳು ನನಗಿವೆ ಎಂದು ಹಳೆಯ ದಿನಗಳನ್ನು ನೆನೆಸಿಕೊಂಡಿರುವ ಮಮತಾ ಬ್ಯಾನರ್ಜಿ ಅವರು, ಭಾರತ ಇಂದು ಅತ್ಯುತ್ತಮ ವ್ಯಕ್ತಿಯೊಬ್ಬರನ್ನು ಕಳೆದುಕೊಂಡಿದೆ. ಅವರ ಸಾವು ಅತೀವ ದುಖಃ ಉಂಟು ಮಾಡಿದೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+