ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಬೆದರಿಕೆ ಕರೆ: ತನಿಖೆ ಕೈಗೆತ್ತಿಕೊಂಡ ರಾಷ್ಟ್ರೀಯ ತನಿಖಾ ಸಂಸ್ಥೆ
ನವದೆಹಲಿ, ಜುಲೈ. 18: ಈ ವರ್ಷದ ಆರಂಭದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಂದ ರಕ್ಷಣೆ ಹಣಕ್ಕಾಗಿ ಜೈಲಿನಲ್ಲಿರುವ ಕ್ರಿಮಿನಲ್ ಜಯೇಶ್ ಪೂಜಾರಿ ಎರಡು ಬೆದರಿಕೆ ಕರೆಗಳನ್ನು ಮಾಡಿದ್ದ ಪ್ರಕರಣವನ್ನು ತನಿಖೆ ಮಾಡಲು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕಳೆದ ವಾರ ಪ್ರಕರಣ ದಾಖಲಿಸಿದೆ.
ಕ್ರಿಮಿನಲ್ ಬೆದರಿಕೆ ಮತ್ತು ಸುಲಿಗೆ ಮತ್ತು ಭಯೋತ್ಪಾದನೆ ಆರೋಪಗಳಿಗೆ ಸಂಬಂಧಿಸಿದ ನಿಬಂಧನೆಗಳ ಅಡಿಯಲ್ಲಿ ಎನ್‌ಐಎ ತನಿಖೆಗೆ ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್‌ಎ) ಒಪ್ಪಿಗೆ ನೀಡಿದ ಒಂದು ದಿನದ ನಂತರ ಜುಲೈ 13 ರಂದು ಸಂಸ್ಥೆ ಪ್ರಥಮ ಮಾಹಿತಿ ವರದಿಯನ್ನು (ಎಫ್‌ಐಆರ್) ದಾಖಲಿಸಿದೆ. ಎನ್‌ಐಎ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಜಯೇಶ್ ಪೂಜಾರಿ ಮತ್ತು ಅಪರಿಚಿತ ಇತರರನ್ನು ಹೆಸರಿಸಲಾಗಿದೆ.

"ಮಾರ್ಚ್ 21, 2023 ರಂದು, ಬೆಳಗ್ಗೆ 10:55 ರ ಸುಮಾರಿಗೆ, ಕರೆ ಮಾಡಿದವರು ಕರ್ನಾಟಕದ ಬೆಳಗಾವಿ ಜೈಲಿನಲ್ಲಿರುವ ಜೈಶ್ ಪೂಜಾರಿ ಎಂದು ಪರಿಚಯಿಸಿಕೊಂಡಿದ್ದಾರೆ. ಜೊತೆಗೆ ದಾವೂದ್ ಗ್ರೂಪ್‌ನೊಂದಿಗೆ ಸಹ ಅವರು ಸಂಬಂಧ ಹೊಂದಿದ್ದರು (ಭೂಗತ ಲೋಕದ ಡಾನ್ ದಾವೂದ್ ಇಬ್ರಾಹಿಂ ಗ್ಯಾಂಗ್ ಅನ್ನು ಉಲ್ಲೇಖಿಸಿ" ಎನ್ನಲಾಗಿದೆ.
ಕೇಂದ್ರ ಸಚಿವರೊಬ್ಬರ (ನಿತಿನ್ ಗಡ್ಕರಿ) ಸಾರ್ವಜನಿಕ ಸಂಪರ್ಕ ಕಚೇರಿಗೆ ದೂರವಾಣಿ ಕರೆ ಮಾಡಿ 10 ಕೋಟಿ ರೂಪಾಯಿ ನೀಡುವಂತೆ ಒತ್ತಾಯಿಸಿದ್ದಾರೆ.ಬೇಡಿಕೆ ಈಡೇರಿಸದಿದ್ದರೆ ಕೇಂದ್ರ ಸಚಿವರನ್ನು ಬಾಂಬ್ ಸ್ಫೋಟಿಸಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಎನ್‌ಐಎ ದಾಖಲಿಸಿರುವ ಎಫ್‌ಐಆರ್ ತಿಳಿಸಿದೆ.
ಈ ಆರೋಪಿಗಳೇ ಈ ಹಿಂದೆ 100 ಕೋಟಿ ರೂಪಾಯಿ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದರು ಮತ್ತು ಜನವರಿ 14, 2023 ರಂದು ಸಚಿವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು. ಬೆದರಿಕೆ ಕರೆಗಳನ್ನು ಹಾಕಿರುವ ಜನರು ಲಷ್ಕರ್-ಎ-ತೊಯ್ಬಾ ಮತ್ತು ಜಯೇಶ್ ಪೂಜಾರಿಯ ಸಹಚರ ಎಂದು ಹೇಳಲಾದ ಇನ್ನೊಬ್ಬ ವ್ಯಕ್ತಿ ಅಫ್ಸರ್ ಪಾಷಾ ಪಾತ್ರವನ್ನು ತನಿಖೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

2011ರಲ್ಲಿ ಹುಟ್ಟೂರು ಮಂಗಳೂರಿನಲ್ಲಿ ನಡೆದ ಕೊಲೆ ಪ್ರಕರಣದಲ್ಲಿ 2013ರಿಂದ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಜಯೇಶ್ ಪೂಜಾರಿ ಅಲಿಯಾಸ್ ಜಯರ್ಶ ಕಾಂತಾ ಜೈಲಿನಲ್ಲಿದ್ದಾಗ ಇಸ್ಲಾಂಗೆ ಮತಾಂತರಗೊಂಡು ಶಕೀರ್ ಅಹಮದ್ ಎಂದು ಹೆಸರು ಬದಲಿಸಿಕೊಂಡಿದ್ದರು. ಎನ್‌ಐಎ ಈ ಪ್ರಕರಣವನ್ನು ತೆಗೆದುಕೊಲ್ಳುವ ಮುನ್ನ ಪ್ರಕರಣದ ತನಿಖೆ ನಡೆಸುತ್ತಿದ್ದ ನಾಗ್ಪುರ ಪೊಲೀಸರು, ಪ್ರಕರಣದ ಕುರಿತು ಅಫ್ಸರ್ ಪಾಷಾ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು.
ಭಯೋತ್ಪಾದನಾ ವಿರೋಧಿ ತನಿಖಾ ಸಂಸ್ಥೆ ಇಬ್ಬರನ್ನೂ ಪ್ರಶ್ನಿಸುವ ನಿರೀಕ್ಷೆಯಿದೆ. ನಿತಿನ್ ಗಡ್ಕರಿ ಅವರು ಝಡ್-ಪ್ಲಸ್ ವರ್ಗದಲ್ಲಿದ್ದಾರೆ. ಬೆದರಿಕೆ ಕರೆಗಳ ಹಿನ್ನೆಲೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಯಿಂದ ಹೆಚ್ಚಿನ ಮಟ್ಟದ ಭದ್ರತೆಯನ್ನು ವಿಸ್ತರಿಸಿದೆ.












Click it and Unblock the Notifications