Nation wants to know ಅರ್ನಬ್ ವಿರುದ್ಧ ನೋಟಿಸ್ ಏಕೆ?
"Nation wants to know:" ಎಂಬ ವಾಕ್ಯ ಹೇಳಿದೊಡನೆ ಪತ್ರಕರ್ತ ಅರ್ನಬ್ ಗೋಸ್ವಾಮಿ ಕಣ್ಮುಂದೆ ಬರುತ್ತಾರೆ. ಆದರೆ, ಈ ಜನಪ್ರಿಯ ವಾಕ್ಯ ಈಗ ವಿವಾದಕ್ಕೀಡಾಗಿದೆ.
ಬೆಂಗಳೂರು, ಏಪ್ರಿಲ್ 18: "Nation wants to know:" ಎಂಬ ವಾಕ್ಯ ಹೇಳಿದೊಡನೆ ಪತ್ರಕರ್ತ ಅರ್ನಬ್ ಗೋಸ್ವಾಮಿ ಕಣ್ಮುಂದೆ ಬರುತ್ತಾರೆ. ಆದರೆ, ಈ ಜನಪ್ರಿಯ ವಾಕ್ಯ ಈಗ ವಿವಾದಕ್ಕೀಡಾಗಿದೆ. ಈ ವಾಕ್ಯದ ಹಕ್ಕು ಯಾರಿಗೆ ಸೇರುತ್ತದೆ? ಜನಪ್ರಿಯತೆ ತಂದುಕೊಟ್ಟ ಅರ್ನಬ್ ಅವರಿಗೆ ಸೇರುತ್ತದೆಯೋ ಅಥವಾ ಅವರು ಕಾರ್ಯನಿರ್ವಹಿಸುತ್ತಿದ್ದ ಸಂಸ್ಥೆಗೆ ಸೇರುತ್ತದೆಯೋ?
ಒಟ್ಟಾರೆ, ಇನ್ಮುಂದೆ ಟಿವಿ ಶೋಗಳಲ್ಲಿ ಬಳಸದಂತೆ ಅರ್ನಬ್ ಅವರಿಗೆ ಬೆದರಿಕೆ ಒಡ್ಡಲಾಗಿದೆ. ಈ ಜನಪ್ರಿಯ ವಾಕ್ಯದ ಟ್ರೇಡ್ ಮಾರ್ಕ್ ಲೈಸನ್ ಪಡೆಯಲು ಮಾಧ್ಯಮ ಸಂಸ್ಥೆ ಮುಂದಾಗಿದೆ. ಹೀಗಾಗಿ, ಅರ್ನಬ್ ಅವರು ಮಾಧ್ಯಮಗಳ ಮುಂದೆ ಈ ವಾಕ್ಯ ಬಳಸಿದರೆ ಜೈಲಿಗೆ ಕಳಿಸಬೇಕಾಗುತ್ತದೆ ಎಂಬ ಬೆದರಿಕೆ ಬಂದಿದೆ.[ವಿಡಿಯೋ: ಸಂವಿಧಾನ ಹಕ್ಕಿಗಾಗಿ ಹೋರಾಟ, ಅರ್ನಬ್ ರಿಪಬ್ಲಿಕ್ ಟಿವಿ]

ನಿಮ್ಮ ಎಲ್ಲಾ ಹಣದ ಬ್ಯಾಗ್, ವಕೀಲರ ಪಡೆಯೊಂದಿಗೆ ಬಂದು ನನ್ನನ್ನು ಬಂಧಿಸಲು ಯತ್ನಿಸಿ, ಈ ವಾಕ್ಯದ ಹಕ್ಕು ನಮ್ಮೆಲ್ಲರಿಗೂ ಸೇರಿದ್ದು, ಯಾವುದೇ ಒತ್ತಡ, ಬೆದರಿಕೆ ನನ್ನ ನಿಲುವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಅರ್ನಬ್ ಅವರು ಸಾಮಾಜಿಕ ಜಾಲ ತಾಣಗಳ ಮೂಲಕ ಹೇಳಿಕೊಂಡಿದ್ದಾರೆ. ಇಲ್ಲಿ ತನಕ ಅರ್ನಬ್ ಅವರಿಗೆ 6 ಲೀಗಲ್ ನೋಟಿಸ್ ಕಳಿಸಲಾಗಿದೆ. ಈ ಬಗ್ಗೆ ಇನ್ನಷ್ಟು ವಿವರಗಳನ್ನು ಮುಂದಿನ ದಿನಗಳಲ್ಲಿ ನೀಡುವುದಾಗಿ ಅರ್ನಬ್ ಹೇಳಿದ್ದಾರೆ.[ಅರ್ನಬ್ 'ರಿಪಬ್ಲಿಕ್' ಟಿವಿ ಆರಂಭಕ್ಕೆ ಕಾಲ ಕೂಡಿ ಬಂತು!]












Click it and Unblock the Notifications