ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಏರ್ ಇಂಡಿಯಾ ಒನ್‌'ನಲ್ಲಿ ಮೊದಲ ಅಮೆರಿಕ ಪ್ರವಾಸ ಕೈಗೊಂಡ ಮೋದಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 22 ; ಭಾರತದ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸಕ್ಕಾಗಿ ಬುಧವಾರ ನದೆಹಲಿಯಿಂದ ಪ್ರಯಾಣ ಆರಂಭಿಸಿದರು. ಸೆಪ್ಟೆಂಬರ 22 ರಿಂದ 25ರ ತನಕ ವಿವಿಧ ಕಾರ್ಯಕ್ರಮಗಳಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ. ಅಮೆರಿಕ ಅಧ್ಯಕ್ಷರು ಸೇರಿದಂತೆ ವಿವಿಧ ನಾಯಕರನ್ನು ಭೇಟಿಯಾಗಲಿದ್ದಾರೆ.

ಕ್ವಾಡ್ ಒಕ್ಕೂಟದ ಶೃಂಗ ಪ್ರಧಾನಿ ನರೇಂದ್ರ ಮೋದಿ ಭೇಟಿಯ ವಿಶೇಷತೆಯಾಗಿದೆ. ಕ್ವಾಡ್ ಒಕ್ಕೂಟ ರಚನೆ ಬಳಿಕ ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ ದೇಶಗಳ ನಾಯಕರು ಒಂದು ಕಡೆ ಸೇರಿಲ್ಲ. ಈ ಸಭೆಯ ಮೇಲೆ ಚೀನಾ ಸಹ ಕಣ್ಣಿಟ್ಟಿದೆ.

ಸೆಪ್ಟೆಂಬರ್ 24ರಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ನರೇಂದ್ರ ಮೋದಿ ಭೇಟಿಯಾಗಲಿದ್ದಾರೆ. ಭಯೋತ್ಪಾದನೆ, ಕೋವಿಡ್ ಪರಿಸ್ಥಿತಿ, ಹವಾಮಾನ ಬದಲಾವಣೆ ಮುಂತಾದ ವಿಚಾರಗಳ ಕುರಿತು ದ್ವಿಪಕ್ಷೀಯ ಮಾತುಕತೆ ನಡೆಯಲಿದೆ.

ಮೊದಲ ಪ್ರವಾಸ; ಕೋವಿಡ್ ಪರಿಸ್ಥಿತಿ ಬಳಿಕ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಏಷ್ಯಾ ಖಂಡದ ಹೊರ ದೇಶಗಳ ಪ್ರವಾಸ ಕೈಗೊಂಡಿದ್ದಾರೆ. ಅಮೆರಿಕಕ್ಕೆ ಐಷಾರಾಮಿ 'ಏರ್ ಇಂಡಿಯಾ ಒನ್' ವಿಮಾನದಲ್ಲಿ ಮೊದಲ ಬಾರಿಗೆ ನರೇಂದ್ರ ಮೋದಿ ಪ್ರವಾಸ ಮಾಡುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ 3 ದಿನಗಳ ಯುಎಸ್ ಪ್ರವಾಸದ ಸಂಪೂರ್ಣ ಮಾಹಿತಿ ಪ್ರಧಾನಿ ನರೇಂದ್ರ ಮೋದಿ 3 ದಿನಗಳ ಯುಎಸ್ ಪ್ರವಾಸದ ಸಂಪೂರ್ಣ ಮಾಹಿತಿ

ಪ್ರಧಾನಿ ಮೋದಿ ಏರ್ ಇಂಡಿಯಾ ಒನ್ ವಿಮಾನದಲ್ಲಿ ಢಾಕಾ, ಬಾಂಗ್ಲಾದೇಶ ಪ್ರವಾಸವನ್ನು ಮಾರ್ಚ್‌ನಲ್ಲಿ ಕೈಗೊಂಡಿದ್ದರು. ಆದರೆ ಮೊದಲ ಬಾರಿಗೆ ಐಷಾರಾಮಿ ಏರ್ ಇಂಡಿಯಾ ಒನ್ ವಿಮಾನದಲ್ಲಿ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ.

5 ತಿಂಗಳ ಬಳಿಕ ಕೆನಡಾದಿಂದ ಭಾರತಕ್ಕೆ ನೇರ ವಿಮಾನ ಹಾರಾಟ5 ತಿಂಗಳ ಬಳಿಕ ಕೆನಡಾದಿಂದ ಭಾರತಕ್ಕೆ ನೇರ ವಿಮಾನ ಹಾರಾಟ

Narendra Modis First Journey To US In Air India One Flight

ಬೋಯಿಂಗ್ 777-3000 ಈಆರ್ ವಿಮಾನವನ್ನು ಪ್ರಧಾನಿ, ರಾಷ್ಟ್ರಪತಿ, ಉಪ ರಾಷ್ಟ್ರಪತಿಗಳ ಪ್ರವಾಸಕ್ಕಾಗಿ ಖರೀದಿ ಮಾಡಲಾಗಿದೆ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ವಿಮಾನ ದೆಹಲಿಗೆ ಆಗಮಿಸಿತ್ತು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮೊದಲ ಬಾರಿಗೆ ಚೆನ್ನೈಗೆ ಈ ವಿಮಾನದಲ್ಲಿ ಸಂಚಾರ ನಡೆಸಿದ್ದರು.

ಇದೇ ಮೊದಲ ಬಾರಿಗೆ ದೂರದ ಪ್ರಯಾಣಕ್ಕೆ ನರೇಂದ್ರ ಮೋದಿ ಏರ್ ಇಂಡಿಯಾ ಒನ್ ವಿಮಾನ ಬಳಕೆ ಮಾಡುತ್ತಿದ್ದಾರೆ. ದೆಹಲಿಯಿಂದ ಹೊರಟಿರುವ ವಿಮಾನ ಯಾವುದೇ ನಿಲುಗಡೆ ಇಲ್ಲದೇ ಪಾಕಿಸ್ತಾನ ಮಾರ್ಗವಾಗಿ ಅಮೆರಿಕ ತಲುಪಲಿದೆ. ಆದರೆ ಅಫ್ಘಾನಿಸ್ತಾನ ಮಾರ್ಗದ ಮೂಲಕ ಸಂಚರಿಸುತ್ತಿಲ್ಲ.

ಆಧುನಿಕ ಭದ್ರತಾ ವ್ಯವಸ್ಥೆ; ಅಮೆರಿಕ ಅಧ್ಯಕ್ಷರ ಸಂಚಾರಕ್ಕೆ ಅತ್ಯಾಧುನಿಕ ಭದ್ರತಾ ವ್ಯವಸ್ಥೆ ಹೊಂದಿರುವ ಏರ್ ಫೋರ್ಸ್ ಒನ್ ವಿಮಾನವಿದೆ. ಇದೇ ಮಾದರಿಯಲ್ಲಿ ಹಲವಾರು ಭದ್ರತಾ ವ್ಯವಸ್ಥೆಗಳನ್ನು ಏರ್ ಇಂಡಿಯಾ ಒನ್ ವಿಮಾನ ಹೊಂದಿದೆ. ಒಂದು ವಿಮಾನದ ವೆಚ್ಚ ಸುಮಾರು 1,400 ಕೋಟಿ ಆಗಿದೆ.

ಎಲ್‌ಎಐಆರ್‌ಸಿಎಂ ಎಂಬ ಕ್ಷಿಪಣಿ ನಿಗ್ರಹ ತಂತ್ರಜ್ಞಾನ ವ್ಯವಸ್ಥೆ ಈ ವಿಮಾನಕ್ಕಿದೆ. ಇದರ ಜೊತೆಗೆ ಸ್ವಯಂ ರಕ್ಷಣೆ ಸೂಟ್ಸ್ (ಎಸ್‌ಪಿಎಸ್) ವ್ಯವಸ್ಥೆಯೂ ಇದೆ. ಭಾರತಕ್ಕೆ ಒಟ್ಟು 2 ವಿಮಾನಗಳು ಆಗಮಿಸಿವೆ. ಭಾರತೀಯ ವಾಯುಪಡೆ ಪೈಲೆಟ್‌ಗಳು ಮಾತ್ರ ಈ ವಿಮಾನವನ್ನು ಓಡಿಸುತ್ತಾರೆ. ಏರ್ ಇಂಡಿಯಾ ಇಂಜಿನಿಯರಿಂಗ್ ಸರ್ವೀಸಸ್ ಈ ವಿಮಾನದ ನಿರ್ವಹಣೆಯನ್ನು ನೋಡಿಕೊಳ್ಳುತ್ತದೆ.

ಒಮ್ಮೆ ವಿಮಾನಕ್ಕೆ ಇಂಧನ ತುಂಬಿಸಿದರೆ ಸುಮಾರು 17 ಗಂಟೆಗಳ ಕಾಲ ತಡೆ ರಹಿತವಾಗಿ ಪ್ರಯಾಣ ಮಾಡಬಹುದಾಗಿದೆ. ಬುಧವಾರ ದೆಹಲಿಯಿಂದ ಹೊರಟ ಪ್ರಧಾನಿ ಮೋದಿ ವಾಷಿಂಗ್ಟನ್‌ಗೆ ತೆರಳಲಿದ್ದು, ವಿಮಾನ ಎಲ್ಲಿಯೂ ನಿಲುಗಡೆಗೊಳ್ಳುವುದಿಲ್ಲ.

ಹಲವಾರು ಸೌಲಭ್ಯಗಳು; ವಿಮಾನದಲ್ಲಿ ಅತ್ಯಾಧುನಿಕ ಸಂಪರ್ಕ ವ್ಯವಸ್ಥೆ ಇದೆ. ರಾಷ್ಟ್ರಪತಿಗಳು, ಪ್ರಧಾನಿ ಆಡಿಯೋ, ವಿಡಿಯೋ ಕಾನ್ಫರೆನ್ಸ್ ಮೂಲಕ ಕಚೇರಿ ಸಿಬ್ಬಂದಿಗಳನ್ನು ಸಂಪರ್ಕಿಸಬಹುದಾಗಿದೆ. ವಿಮಾನದಲ್ಲಿ ಹಲವಾರು ಕೋಣೆಗಳಿದ್ದು, ಊಟದ ಕೋಣೆ, ಲ್ಯಾಬ್, ದೊಡ್ಡ ಕಚೇರಿ, ಸಭೆಗಳನ್ನು ನಡೆಸಲು ಅನುಕೂಲವಾಗುವಂತೆ ವ್ಯವಸ್ಥೆಗಳಿವೆ.

ಅಮೆರಿಕ ಅಧ್ಯಕ್ಷರು ಏರ್ ಪೋರ್ಸ್ ಒನ್ ಹೆಸರಿನ ಬೋಯಿಂಗ್ 747-200ಬಿ ಸರಣಿಯ ವಿಮಾನವನ್ನು ಬಳಕೆ ಮಾಡುತ್ತಾರೆ. ರಷ್ಯಾದ ಅಧ್ಯಕ್ಷರು ಐಎಲ್‌ಪಿ-96-300ಪಿಯು ಜೆಟ್ ಬಳಕೆ ಮಾಡುತ್ತಾರೆ. ಚೀನಾದ ರಾಷ್ಟ್ರಪತಿಗಳು ಬೋಯಿಂಗ್ 747-400 ಶ್ರೇಣಿಯ ವಿಮಾನ ಬಳಸುತ್ತಾರೆ.

ಭಾರತ ಬೋಯಿಂಗ್ 777-3000 ಈಆರ್ ವಿಮಾನವನ್ನು ಪ್ರಧಾನಿ, ರಾಷ್ಟ್ರಪತಿ, ಉಪ ರಾಷ್ಟ್ರಪತಿಗಳ ಪ್ರವಾಸಕ್ಕಾಗಿಯೇ ಖರೀದಿ ಮಾಡಿದೆ. ಈ ವಿಮಾನದ ಮೇಲೆ ಏರ್ ಇಂಡಿಯಾ ಒನ್ ಎಂದು ಬರೆಯಲಾಗಿದೆ.

English summary
PM Narendra Modi's first journey on the recently acquired Air India One to the America. Newly inducted Boeing 777 VVIP aircraft used for President, Vice-President and the Prime Minister tavel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X