• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಬಾಮಾಗಾಗಿ ವ್ರತಭಂಗ ಮಾಡಲೊಪ್ಪದ ಮೋದಿ

By Mahesh
|

ನವದೆಹಲಿ, ಸೆ.22: ಪ್ರಧಾನಿಯಾದ ಮೇಲೆ ಪ್ರಪ್ರಥಮ ಬಾರಿಗೆ ಅಮೆರಿಕಕ್ಕೆ ತೆರಳುತ್ತಿರುವ ನರೇಂದ್ರ ಮೋದಿ ಅವರು ಹೊರದೇಶದಲ್ಲೂ ತಮ್ಮ ಆಚಾರ ವಿಚಾರ ಕಟ್ಟುನಿಟ್ಟಿನ ಉಪವಾಸ ವ್ರತ ಮುಂದುವರೆಸಲಿದ್ದಾರೆ ಎಂದು ಅವರ ಅಪ್ತವಲಯಗಳು ಹೇಳುತ್ತಿವೆ.

ಹೀಗಾಗಿ, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರ ಜೊತೆ ಮೋದಿ ಅವರು ಡಿನ್ನರ್ ನಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿಲ್ಲ. ಒಬಾಮಾ ಏರ್ಪಡಿಸಿರುವ ಔತಣ ಕೂಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗುವ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.

ಅದರೆ, ಅಮೆರಿಕ ಪ್ರವಾಸದ ವೇಳೆಯಲ್ಲೂ ನವರಾತ್ರಿ ಪೂಜೆ, ಉಪವಾಸ ವ್ರತವನ್ನು ಮೋದಿ ಅವರು ಮುಂದುವರೆಸಲಿದ್ದಾರೆ. ದಸರಾ ಸಂದರ್ಭದಲ್ಲಿ ಒಂಭತ್ತು ದಿನಗಳ ಕಾಲ ರಾತ್ರಿ ವೇಳೆ ಉಪವಾಸ ಇರುವುದನ್ನು ಮೋದಿ ಅವರು ಪಾಲಿಸಿಕೊಂಡು ಬಂದಿದ್ದಾರೆ. ಒಬಾಮಾ ಅವರ ಔತಣಕೂಟಕ್ಕೋಸ್ಕರ ತಮ್ಮ ವ್ರತಭಂಗ ಮಾಡಿಕೊಳ್ಳಲು ಮೋದಿ ತಯಾರಿಲ್ಲ ಎನ್ನುವುದು ಸುದ್ದಿಯ ಸಾರಾಂಶ.

ದಸರಾ ಸಂದರ್ಭದಲ್ಲಿ ಒಂಭತ್ತು ದಿನಗಳ ಕಾಲ ರಾತ್ರಿ ವೇಳೆ ಉಪವಾಸ ಇರುವುದನ್ನು ಮೋದಿ ಅವರು ಪಾಲಿಸಿಕೊಂಡು ಬಂದಿದ್ದಾರೆ. ಒಬಾಮಾ ಅವರ ಔತಣಕೂಟಕ್ಕೋಸ್ಕರ ತಮ್ಮ ವ್ರತಭಂಗ ಮಾಡಿಕೊಳ್ಳಲು ಮೋದಿ ತಯಾರಿಲ್ಲ ಎಂದು ಅವರ ಆಪ್ತರು ಹೇಳಿದ್ದಾರೆ. [ಮೋದಿ ಅಮೆರಿಕ ವೀಸಾ ಪಡೆದ ಕತೆ]

ಸೆಪ್ಟೆಂಬರ್ 29ರಿಂದ ಅಕ್ಟೋಬರ್ 4ರವರೆಗೆ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ ಕೈಗೊಳಲ್ಲಿದ್ದಾರೆ. ಸೆ.25ರಿಂದ ನವರಾತ್ರಿ ಹಬ್ಬ ಆರಂಭಗೊಳ್ಳಲಿದೆ. ಈ ಬಾರಿ ನವರಾತ್ರಿ ಪೂಜೆ, ಉಪವಾಸ ಎಲ್ಲವೂ ಅಮೆರಿಕದಲ್ಲೇ ಆಚರಿಸಿಕೊಳ್ಳುವುದು ಮೋದಿ ಅವರಿಗೆ ಅನಿವಾರ್ಯ.[ಅಮೆರಿಕ ಪ್ರವಾಸಿಗರಿಗೆ ವಿಮಾನ ನಿಲ್ದಾಣದಲ್ಲೇ ವೀಸಾ]

2002ರ ಗುಜರಾತ್ ಗಲಭೆಗಳ ಬಳಿಕ ಮೋದಿಗೆ ವೀಸಾ ನೀಡಬೇಕೇ, ಬೇಡವೇ? ಎಂಬ ಜಿಜ್ಞಾಸೆಯಲ್ಲಿದ್ದ ಅಮೆರಿಕ ಇದೀಗ ಅವರನ್ನು ದೇಶಕ್ಕೆ ಆಹ್ವಾನಿಸಿ, ಭೇಟಿ ಮಾಡುತ್ತಿದೆ. ಈಗಾಗಲೇ ಮೋದಿ ಜಪಾನ್, ನೇಪಾಳ ಮತ್ತು ಭೂತಾನ್ ದೇಶಗಳಿಗೆ ಭೇಟಿ ನೀಡಿದ್ದಾರೆ.

ಅಮೆರಿಕ ಪ್ರವಾಸದ ವೇಳೆ ಉಭಯ ನಾಯಕರು ಆರ್ಥಿಕ ಪ್ರಗತಿ, ರಕ್ಷಣೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಸಿರಿಯಾ, ಅಫ್ಘಾನಿಸ್ತಾನ, ಇರಾಕ್‌ನಲ್ಲಿನ ಪ್ರಸ್ತುತ ಬೆಳವಣಿಗೆಗಳ ಕುರಿತು ಅವರು ಮೋದಿ ಮತ್ತು ಒಬಾಮಾ ಮಾತುಕತೆ ನಡೆಸುವ ಸಾಧ್ಯತೆ ಇದೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Indian Prime Minister Narendra Modi will have bilateral meetings with United States President Barack Obama next week, but the two will be unable to have dinner together. Narendra Modi known for fasting during the Navratri festival season, begins from Sept.25.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more