ಕಾಂಗ್ರೆಸ್‌ಗೆ 'ಥ್ಯಾಂಕ್ಸ್' ಹೇಳಿದ ಪ್ರಧಾನಿ ನರೇಂದ್ರ ಮೋದಿ
Recommended Video

ನವದೆಹಲಿ, ಜುಲೈ 31: ಲೋಕಸಭೆಯಲ್ಲಿ ತಮ್ಮ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ನಡೆಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್‌ಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ವಿರೋಧ ಪಕ್ಷಗಳ ವಂಚನೆ ಮತ್ತು ಹುಳುಕುಗಳನ್ನು ತೆರೆದಿಡುವುದಕ್ಕೆ ಕಾಂಗ್ರೆಸ್ ಅವಕಾಶ ನೀಡಿದೆ ಎಂದು ಮೋದಿ ಹೇಳಿದ್ದಾರೆ.
ಬಿಜೆಪಿ ಸಂಸದೀಯ ಸಭೆಯಲ್ಲಿ ಮಾತನಾಡಿದ ಮೋದಿ, ತಮ್ಮ ಸರ್ಕಾರದ ವಿರುದ್ಧ ವಿರೋಧಪಕ್ಷಗಳು ಮಂಡಿಸಿದ ಅವಿಶ್ವಾಸ ನಿರ್ಣಯವು ಅದರ ರಾಜಕೀಯ ಅಪ್ರಬುದ್ಧತೆ ಮತ್ತು ಹೊಂದಾಣಿಕೆ ಹಾಗೂ ಬೆಂಬಲದ ಕೊರತೆ ಹೊಂದಿರುವುದನ್ನು ಬಹಿರಂಗಪಡಿಸಿತು ಎಂದು ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, ಸರ್ಕಾರವು ತನ್ನ ಬಹುಮತ ಕಳೆದುಕೊಂಡಾಗ ಅಥವಾ ದೇಶದಲ್ಲಿ ಅಶಾಂತಿ ನೆಲೆಸಿದ ಸಂದರ್ಭದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲಾಗುತ್ತದೆ.
ಆದರೆ, ಇಲ್ಲಿ ಅಂತಹ ನಿರ್ಣಯ ಮಂಡಿಸಲು ಯಾವುದೇ ಸೂಕ್ತ ಕಾರಣವಿರಲಿಲ್ಲ. ಇದು 326 ಅದರ ವಿರುದ್ಧ ಹಾಗೂ ಕೇವಲ 126 ಮಂದಿ ಅದರ ಪರವಾಗಿ ಮತ ಹಾಕಿದ ಹೀನಾಯ ಸೋಲಾಗಿದೆ ಎಂದು ಹೇಳಿದ್ದಾಗಿ ಸಚಿವ ಅನಂತ ಕುಮಾರ್ ತಿಳಿಸಿದ್ದಾರೆ.
ಸಚಿವರಾದ ಸುಷ್ಮಾ ಸ್ವರಾಜ್, ನಿತಿನ್ ಗಡ್ಕರಿ, ರಾಜನಾಥ್ ಸಿಂಗ್ ಮುಂತಾದವರು ಸಭೆಯಲ್ಲಿ ಮಾತನಾಡಿದರು.












Click it and Unblock the Notifications